ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸತತವಾಗಿ ಪಂದ್ಯಗಳನ್ನು ಗೆಲ್ಲಿಸುತ್ತಿರುವ ದಿನೇಶ್ ಕಾರ್ತಿಕ್ ಆಟ ನೋಡಿ ಎಬಿಡಿ ಹೇಳಿದ್ದೇನು ಗೊತ್ತೇ?? ಹೊಸ ಆಸೆ ಹುಟ್ಟಿಕೊಳ್ಳುತ್ತಿದೆ ಎಂದ ಎಬಿಡಿ. ಏನಂತೆ ಗೊತ್ತೇ??

3,314

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಯೊಂದು ಮ್ಯಾಚಿನಲ್ಲಿ ಕೂಡ ದಿನೇಶ್ ಕಾರ್ತಿಕ್ ರವರು ಆಪದ್ಬಾಂಧವ ನಾಗಿ ನಿಂತು ಆಡುತ್ತಿದ್ದಾರೆ. ಹಾಗೂ ತಂಡವನ್ನು ಸೋಲಿನ ಸುಳಿಯಿಂದ ಗೆಲುವಿನ ದಡಕ್ಕೆ ವನ್ ಹ್ಯಾಂಡೆಡ್ ಆಗಿ ಕರೆದುಕೊಂಡು ಹೋಗುತ್ತಿದ್ದಾರೆ. ಇಷ್ಟೊಂದು ವರ್ಷ ಇಲ್ಲದ ದಿನೇಶ್ ಕಾರ್ತಿಕ್ ರವರ ಈ ಅದ್ಭುತ ವಿರಾಟರೂಪ ನೋಡಿ ಎಲ್ಲರೂ ಕೂಡ ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ಎಲ್ಲರಿಗೂ ಕೂಡ ದಿನೇಶ್ ಕಾರ್ತಿಕ್ ರವರ ಆಟ ಇಷ್ಟವಾಗುತ್ತಿದೆ.

ಅದರಲ್ಲೂ ಕೆಲವರಂತೂ ಈ ಬಾರಿಯ ವಿಶ್ವಕಪ್ ತಂಡಕ್ಕೆ ಅವಕಾಶ ನೀಡಿ ಎನ್ನುವುದಾಗಿ ಕೂಡ ದಿನೇಶ್ ಕಾರ್ತಿಕ್ ರವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ನನಸಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ದಿನೇಶ್ ಕಾರ್ತಿಕ್ ರವರು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಮ್ಯಾಚ್ ವಿನ್ನರ್ ಪರ್ಫಾರ್ಮೆನ್ಸ್ ನೀಡಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಬಿ ಡಿವಿಲಿಯರ್ಸ್ ರವರ ಸ್ಥಾನಕ್ಕಾಗಿ ದಿನೇಶ್ ಕಾರ್ತಿಕ್ ರವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ದಿನೇಶ್ ಕಾರ್ತಿಕ್ ರವರು ಅವರ ಕೊರತೆ ಕಾಣದಂತೆ ತಂಡದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದಾರೆ.

ಇದರ ಕುರಿತಂತೆ ಸ್ವತಃ ಎಬಿ ಡಿವಿಲಿಯರ್ಸ್ ಅವರೇ ಮಾತನಾಡಿದ್ದಾರೆ. ಹೌದು ಗೆಳೆಯರೇ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಕುರಿತಂತೆ ಮಾತನಾಡುತ್ತಾ ಎಬಿ ಡಿವಿಲಿಯರ್ಸ್ ರವರು ದಿನೇಶ್ ಕಾರ್ತಿಕ್ ರವರ ಈ ಬ್ಯಾಟಿಂಗ್ ಅವತಾರ ಹಿಂದೆಂದೂ ಕೂಡ ನಾನು ನೋಡಿರಲಿಲ್ಲ ಈ ಬಾರಿ ಅವರು ಅದ್ಭುತ ಲಯದಲ್ಲಿದ್ದಾರೆ. ಅವರ ಆಟ ನೋಡಿ ಮೊದಲ ಬಾರಿಗೆ ನಾನು ಆಶ್ಚರ್ಯಚಕಿತನಾಗಿ ದ್ದೇನೆ ಯಾಕೆಂದರೆ ಹಿಂದೆಂದೂ ಕೂಡ ಅವರನ್ನು ಈ ಅವತಾರದಲ್ಲಿ ನಾನು ನೋಡಿರಲಿಲ್ಲ ಎಂಬುದಾಗಿ ಹೇಳಿದ್ದು, ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ನೋಡಿದರೆ ಮತ್ತೊಮ್ಮೆ ನಾನು ಆಡುವ ಮನಸ್ಸಾಗುತ್ತಿದೆ ಎಂಬುದಾಗಿ ಎಬಿ ಡಿವಿಲಿಯರ್ಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ರವರ ಅಭಿಪ್ರಾಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.