ಆರ್ಸಿಬಿಗೆ ಒಂದೇ ಸಮಸ್ಯೆ: ಆರ್ಸಿಬಿ ತಂಡ ಅದೊಂದು ಬದಲಾವಣೆ ಮಾಡಿದರೆ, ಇನ್ನು ಭರ್ಜರಿಯಾಗಿ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ??

ಆರ್ಸಿಬಿಗೆ ಒಂದೇ ಸಮಸ್ಯೆ: ಆರ್ಸಿಬಿ ತಂಡ ಅದೊಂದು ಬದಲಾವಣೆ ಮಾಡಿದರೆ, ಇನ್ನು ಭರ್ಜರಿಯಾಗಿ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಮೆಂಟನ್ನು ನೆನಸಿಕೊಂಡರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋತಿರುವುದು ಎರಡೇ ತಂಡಗಳ ಎದುರು. ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ವೀರೋಚಿತವಾಗಿ ಸೋತಿತ್ತು. ಅಂದರೆ ಅದು ಸೋಲುವಂತಹ ಪಂದ್ಯ ಆಗಿರಲಿಲ್ಲ.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಬಲಿಷ್ಠ ತಂಡಗಳಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ನಿರಾತಂಕವಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಇನ್ನು ಕ್ರಿಕೆಟ್ ಪಂಡಿತರು ಹೇಳುವಂತೆ ಕೆಲವೊಂದು ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ಮಾಡಿಕೊಂಡರೆ ಖಂಡಿತವಾಗಿ ಈ ಬಾರಿಯ ಐಪಿಎಲ್ ಕಪ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ಗೆದ್ದು ಕೊಳ್ಳಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ. ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿರುವ ಸಮಸ್ಯೆ ಯಾವುದು ಹಾಗೂ ಅದಕ್ಕೆ ಇರುವಂತಹ ಪರಿಹಾರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅದೇನೆಂದರೆ ನಿಮಗೆ ಈಗಾಗಲೇ ತಿಳಿದಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿರುವ ಉದಯೋನ್ಮುಖ ಯುವ ಆಟಗಾರ ಅನುಜ್ ರವತ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿಲ್ಲ. ಹೀಗಾಗಿ ರಾಹುಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಮುಖವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಅವಲಂಬಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಿಂದ ಅನುಜ್ ರಾವತ್ ಅವರ ಬದಲಿಗೆ ಬೇರೆ ಭಾರತೀಯ ಬ್ಯಾಟ್ಸ್ಮನ್ ಆಯ್ಕೆಯನ್ನು ನೋಡಬೇಕಾಗಿದೆ. ಕೆಲ ಮೂಲಗಳ ಪ್ರಕಾರ ತಂಡ ರಜತ್ ಪಾಟಿದಾರ್ ಹಾಗೂ ಮಹಿಪಾಲ್ ಲೊಮ್ರೋರ್ ರವರಿಗೆ ಅವಕಾಶ ನೀಡಬಹುದು ಎಂಬುದಾಗಿ ಕೇಳಿಬಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ ಅನುಜ್ ರಾವತ್ ರವರು ಸಿಕ್ಕಿರುವಂತಹ ಅವಕಾಶವನ್ನು ಸಂಪೂರ್ಣವಾಗಿ ಕೈಚೆಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಅವರ ಸ್ಥಾನವನ್ನು ಬದಲಾಯಿಸದೆ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ. ಅವರ ಬದಲಿಗೆ ಆರಂಭಿಕ ಆಟಗಾರರನ್ನು ಬದಲಿಸಿದರೆ ಮಾತ್ರ ತಂಡ ಆರಂಭಿಕವಾಗಿ ಉತ್ತಮ ಮೊತ್ತವನ್ನು ಪೇರಿಸಲು ಸಾಧ್ಯವಾಗುತ್ತದೆ. ಹಾಗೂ ಇದು ತಂಡದ ಗೆಲುವಿಗೆ ಕೂಡ ಒಂದು ಪ್ರಮುಖ ಕಾರಣವಾಗಬಹುದು.