ಪುನೀತ್ ಗಾಗಿ ಬರೆದಿದ್ದ ಕಥೆಗೆ ಬೇರೆ ನಟನೆ ಆಯ್ಕೆ. ಭಾವುಕರಾದ ಅಭಿಮಾನಿಗಳು ಬೇಡವೇ ಬೇಡ ಎಂದಿದ್ದು ಯಾಕೆ ಗೊತ್ತಾ, ಯಾರು ಆ ನಾಯಕನಟ ಗೊತ್ತೆ??

ಪುನೀತ್ ಗಾಗಿ ಬರೆದಿದ್ದ ಕಥೆಗೆ ಬೇರೆ ನಟನೆ ಆಯ್ಕೆ. ಭಾವುಕರಾದ ಅಭಿಮಾನಿಗಳು ಬೇಡವೇ ಬೇಡ ಎಂದಿದ್ದು ಯಾಕೆ ಗೊತ್ತಾ, ಯಾರು ಆ ನಾಯಕನಟ ಗೊತ್ತೆ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಹಲವಾರು ತಿಂಗಳು ಕಳೆದಿರಬಹುದು ಆದರೆ ಅವರ ನೆನಪು ಸದಾ ನವನವೀನವಾಗಿ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣ ಹೊಂದುವುದು ಕ್ಕಿಂತಲೂ ಮುಂಚೆ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ ಅವುಗಳನ್ನು ಪೂರೈಸುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಕಾಲಿಕವಾಗಿ ಆಗಲಿರುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂತೋಷ ಆನಂದರಾಮ್ ರವರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು.

ಈಗ ಅದೇ ಕಥೆಯನ್ನು ಸಂತೋಷ ಆನಂದರಾಮ್ ರವರು ಬೇರೆ ನಟನೆಗೆ ನಿರ್ದೇಶಿಸಲು ಸಿದ್ದರಾಗಿದ್ದಾರೆ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಘವೇಂದ್ರ ರಾಜಕುಮಾರ್ ಅವರ ಪುತ್ರರಾಗಿರುವ ಯುವ ರಾಜಕುಮಾರ್ ಯುವ ರಣಧೀರ ಕಂಠೀರವ ಸಿನಿಮಾದ ಮೂಲಕ ಲಾಂಚ್ ಆಗಬೇಕಾಗಿತ್ತು. ಆದರೆ ಸಂತೋಷ ಆನಂದರಾಮ್ ರವರ ಈ ಕತೆಯ ಮೂಲಕ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವ ರಾಜ್ ಕುಮಾರ್ ಲಾಂಚ್ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಈ ಕುರಿತಂತೆ ಈಗ ಅಪ್ಪು ಅಭಿಮಾನಿಗಳಲ್ಲಿ ಕೆಲವರು ಹೇಳುತ್ತಿರುವ ಅಂತಹ ಮಾತುಗಳು ಆಶ್ಚರ್ಯವನ್ನು ಮೂಡಿಸುತ್ತಿವೆ.

ಕೆಲವು ಅಭಿಮಾನಿಗಳು ಅಪ್ಪು ಸಿನಿಮಾದ ಮೂಲಕ ಯುವ ರಾಜ್ ಕುಮಾರ್ ರವರನ್ನು ಲಾಂಚ್ ಮಾಡುತ್ತಿರುವುದು ಓಕೆ ಎಂದಿದ್ದಾರೆ. ಇನ್ನು ಕೆಲವರು ಬೇಡ ಎಂದಿದ್ದಾರೆ ಇದಕ್ಕೆ ಕಾರಣಗಳು ಕೂಡ ಇವೆ. ಹೌದು ಅಪ್ಪು ರವರಿಗೆ ಬರೆದಿರುವಂತಹ ಈ ಕಥೆಯ ಕುರಿತಂತೆ ಅಭಿಮಾನಿಗಳಲ್ಲಿ ಕೆಲವರು ಎಮೋಷನಲ್ ಆಗಿದ್ದಾರೆ. ಹೀಗಾಗಿ ಅವರಿಗೆ ಬರೆದಿರುವಂತಹ ಕಥೆಯಲ್ಲಿ ಬೇರೆ ಯಾವ ನಟನನ್ನು ನೋಡಲು ನಮಗೆ ಇಷ್ಟವಿಲ್ಲ ಈ ಕಥೆಯನ್ನು ಅಪ್ಪುಗಾಗಿ ಸಮರ್ಪಿಸಿ ಎಂಬುದಾಗಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಇನ್ನೂ ಕೆಲವರು ಮುಂದೆ ಹೋಗಿ ಈ ಕಥೆಯಿಂದ ನೀವು ಎಷ್ಟು ಹಣವನ್ನು ಗಳಿಸುತ್ತೀರಾ ಹೇಳಿ ಅವುಗಳನ್ನು ನಾವು ಅಭಿಮಾನಿಗಳು ನಿಮಗೆ ನೀಡುತ್ತೇವೆ ಈ ಕಥೆಯನ್ನು ಬೇರೆಯವರಿಗೆ ಸಿನಿಮಾ ಮಾಡಬೇಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ.. ಹೊಂಬಾಳೆ ಫಿಲಂಸ್ ಅಥವಾ ಸಂತೋಷ್ ಆನಂದ್ ರಾಮ್ ಈ ವಿಚಾರದ ಕುರಿತಂತೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.