ಈಗಾಗಲೇ 5 ಪಂದ್ಯಗಳನ್ನು ಸೋತು, ಟೂರ್ನಿಯಿಂದ ಹೊರಹೋಗುವ ಆತಂಕದಲ್ಲಿ ಇರುವಾಗ ಚೆನ್ನೈಗೆ ದೀಪಕ್ ಚಾಹರ್ ನಂತರ ಮತ್ತೊಂದು ಶಾಕ್. ಏನು ಗೊತ್ತೇ??

ಈಗಾಗಲೇ 5 ಪಂದ್ಯಗಳನ್ನು ಸೋತು, ಟೂರ್ನಿಯಿಂದ ಹೊರಹೀಗುವ ಆತಂಕದಲ್ಲಿ ಇರುವಾದ ಚೆನ್ನೈ ದೀಪಕ್ ಚಾಹರ್ ನಂತರ ಮತ್ತೊಂದು ಶಾಕ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗಳಂತಹ ಚಾಂಪಿಯನ್ ತಂಡಗಳಿಗೆ ಸೋಲು ಬೆಂಬಿಡದೆ ಕಾಡುತ್ತಿದೆ. ನಿಜಕ್ಕೂ ಕೂಡ ಇದು ಐಪಿಎಲ್ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅದರಲ್ಲೂ ನಾವು ಈಗ ಮಾತನಾಡಲು ಹೊರಟಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತಂತೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇತ್ತೀಚಿಗಷ್ಟೇ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿತ್ತು.

ಆದರೂ ಕೂಡ ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ತುಂಬಾ ವೀಕ್ ಆಗಿ ಕಾಣಿಸಿಕೊಂಡಿತ್ತು ಎಂದರೆ ತಪ್ಪಾಗಲಾರದು. ಅದರಲ್ಲೂ ಕ್ರಿಸ್ ಜೋರ್ಡಾನ್ ರವರು ಬರೋಬ್ಬರಿ 58 ರನ್ನುಗಳನ್ನು ಬಿಟ್ಟುಕೊಟ್ಟಿದ್ದರು. ಟಿ20 ಪಂದ್ಯಗಳಲ್ಲಿ ಎಷ್ಟೊಂದು ರನ್ನು ನೀಡುವುದು ನಿಜಕ್ಕೂ ಕೂಡ ಅಪರಾಧವೆಂದು ಹೇಳಬಹುದಾಗಿದೆ. ಹೀಗಾಗಿ ಎಲ್ಲ ಬೇಕಾಗಿದ್ದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ ಸೋಲ ಬೇಕಾಯಿತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ 14 ಕೋಟಿ ಆಟಗಾರ ಆಗಿರುವ ದೀಪಕ್ ಚಹಾರ್ ಅವರು ಕೂಡ ಇಂಜುರಿ ಇಂದಾಗಿ ಪೂರ್ತಿ ಐಪಿಎಲ್ ಹೊರಗಡೆ ಇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಲೆಬಿಸಿ ಗೆ ಮತ್ತೊಂದು ಕಾರಣವಾಗಿದೆ. ಈಗಾಗಲೇ ಆಡಿರುವ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತು ಸುಣ್ಣವಾಗಿದೆ. ಹೀಗಾಗಿ ಗೆಲುವಿಗೆ ತಂಡದ ಬೌಲಿಂಗ್ ಕ್ರಮಾಂಕದಲ್ಲಿ ಗಮನಾರ್ಹ ಸಾಧನೆ ಆಗಬೇಕಾಗಿದೆ. ಆದರೆ ಇದರ ನಡುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನೊಂದು ಶಾ’ಕಿಂಗ್ ಸುದ್ದಿ ಎದುರಾಗಿದೆ. ಹೌದು ಗೆಳೆಯರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಆಗಿರುವ ಆಡಮ್ ಮಿಲ್ನೆ ಮೊದಲ ಪಂದ್ಯದಿಂದ ಇಂಜುರಿ ಯಿಂದಾಗಿ ಹೊರಗುಳಿದಿದ್ದರು. ಅವರು ರಿಕವರಿ ಆಗುವ ಒಳಗಡೆ ಬಹುತೇಕ ಚೆನ್ನೈ ಸೂಪರ್ ಕಿಂಗ್ಸ್ ಎಲ್ಲಾ ಪಂದ್ಯಗಳನ್ನು ಆಡಿರುತ್ತದೆ. ಹೀಗಾಗಿ ಆಡಮ್ ಮಿಲ್ನೆ ರವರ ಬೌಲಿಂಗ್ ಸೇವೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಗುವುದು ಬಹುತೇಕ ಅನುಮಾನವಾಗಿದೆ. ಇನ್ನು ಸೌತ್ ಆಫ್ರಿಕದ ಬೌಲರ್ ಆಗಿರುವ ಪ್ರಿಟೋರಿಯಸ್ ಕೂಡ ದುಬಾರಿ ಆಗಿರುವ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಗಾಗಿ ಯಾರನ್ನು ಮುಂದಿನ ದಿನಗಳಲ್ಲಿ ಅವಲಂಬಿಸಬೇಕಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.