ಬೇರೆ ಸಿಮ್ ಗಳಿಗೆ ಠಕ್ಕರ್ ಕೊಟ್ಟ ಜಿಯೋ ಯೋಜನೆ, ಕೇವಲ 75 ರೂಪಾಯಿಗೆ ಎಷ್ಟೆಲ್ಲ ಲಾಭ ಕೊಡಲು ಮುಂದಾಗಿದೆ ಗೊತ್ತೆ??

ಬೇರೆ ಸಿಮ್ ಗಳಿಗೆ ಠಕ್ಕರ್ ಕೊಟ್ಟ ಜಿಯೋ ಯೋಜನೆ, ಕೇವಲ 75 ರೂಪಾಯಿಗೆ ಎಷ್ಟೆಲ್ಲ ಲಾಭ ಕೊಡಲು ಮುಂದಾಗಿದೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಇಂದು ನಮ್ಮ ಭಾರತ ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದು ತನ್ನ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ನೀಡಿರುವ ಯೋಜನೆಗಳು ಎಂದರೆ ತಪ್ಪಾಗಲಾರದು. ಇಂದಿನ ಲೇಖನಿಯಲ್ಲಿ ಜಿಯೋ ಸಂಸ್ಥೆ ಹೊಸದಾಗಿ ಪರಿಚಯಿಸಿರುವ ನೂರು ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಉತ್ತಮ ಇಂಟರ್ನೆಟ್ ಹಾಗೂ ಅನಿಯಮಿತ ಕರೆ ಸೇವೆಗಳನ್ನು ನೀಡುವಂತಹ ಯೋಜನೆಯ ಕುರಿತಂತೆ ನಮಗೆ ಮನದಟ್ಟು ಮಾಡಲು ಹೊರಟಿದ್ದೇವೆ.

ಹೌದು ಜಿಯೋ ಸಂಸ್ಥೆಯ 75 ರೂಪಾಯಿ ರಿಚಾರ್ಜ್ ಸೇವೆಯಲ್ಲಿ ಹಲವಾರು ಪ್ರಯೋಜನಗಳು ದೊರಕಲಿವೆ. ಈ ಯೋಜನೆಯಲ್ಲಿ 23 ದಿನಗಳ ವ್ಯಾಲಿಡಿಟಿ ಇರುತ್ತದೆ. ದೈನಂದಿನ 100mb ಡೇಟಾ ಹಾಗೂ ಹೆಚ್ಚುವರಿಯಾಗಿ 200mb ಇಂಟರ್ನೆಟ್ ಕೂಡ ದೊರೆಯುತ್ತದೆ. ಎಲ್ಲಾ ಸೇರಿ ವ್ಯಾಲಿಡಿಟಿ ಮುಗಿಯುವುದರ ಒಳಗಡೆ ನಿಮಗೆ 2.5 ಜಿಬಿ ಒಟ್ಟಾರೆಯಾಗಿ ಇಂಟರ್ನೆಟ್ ಸೇವೆ ಸಿಗುತ್ತದೆ. ಪ್ರತಿನಿತ್ಯ 50 ಉಚಿತ ಮೆಸೇಜುಗಳನ್ನು ಮಾಡಬಹುದಾಗಿದೆ ಹಾಗೂ ಅನ್ಲಿಮಿಟೆಡ್ ಕರೆ ಸೇವೆಗಳು ಲಭ್ಯ ಇದೆ. ಜಿಯೋ ಸಿನಿಮಾ ಹಾಗೂ ಬೇರೆ ಜಿಯೋ ಅಪ್ಲಿಕೇಶನ್ ಗಳ ಚಂದಾದಾರಿಕೆ ಲಭ್ಯವಿದೆ.

ಕೇವಲ ಇಷ್ಟೇ ಮಾತ್ರವಲ್ಲದೆ ಮತ್ತೊಂದು 91 ರೂಪಾಯಿ ಪ್ಲಾನ್ ಕೂಡ ಇದೆ. ಎಲ್ಲಾ ಅದೇ ರೀತಿಯ ಸೇಮ್ ಯೋಜನೆಗಳಾಗಿದ್ದು ವ್ಯಾಲಿಡಿಟಿ ಮಾತ್ರ 30 ದಿನಗಳವರೆಗೆ ಸಿಗಲಿದೆ. ಆದರೆ ನೀವು ಇವೆಲ್ಲ ಸೇವೆಗಳನ್ನು ಪಡೆಯಲು ಮುಖ್ಯವಾಗಿ ಒಂದು ಕೆಲಸವನ್ನು ಮಾಡಬೇಕು. ಅದೇನೆಂದರೆ ಈ ಎಲ್ಲಾ ಸೇವೆಗಳು ಹಾಗೂ ಯೋಜನೆಗಳು ಸಿಗುವುದು ಕೂಡ ಜಿಯೋ ಫೋನ್ ನಲ್ಲಿ ಮಾತ್ರ. ನೀವು ಒಂದು ವೇಳೆ ಜಿಯೋಫೋನ್ ಹೊಂದಿದ್ದರೆ ಮಾತ್ರ ಯೋಜನೆಗಳನ್ನು ನೀವು ಉಪಯೋಗಿಸಿ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮ ಬಳಿ ಜಿಯೋ ಫೋನ್ ಇದ್ದರೆ ತಪ್ಪದೆ ಕಾಮೆಂಟ್ ಮಾಡೋಕೆ ನಮ್ಮೊಂದಿಗೆ ಹಂಚಿಕೊಳ್ಳಿ.