ಅಣ್ಣಾವ್ರು ಅದೊಂದು ದಿನ ಮಾತ್ರ, ದರ್ಶನ್ ರವರನ್ನು ಮನೆಗೆ ಕರೆಸಿ ತಬ್ಬಿಕೊಂಡು ಆಶೀರ್ವಾದ ಮಾಡುವುದಕ್ಕೂ ಒಂದು ಕಾರಣವಿತ್ತು. ಏನು ಗೊತ್ತೇ??

ಅಣ್ಣಾವ್ರು ಅದೊಂದು ದಿನ ಮಾತ್ರ, ದರ್ಶನ್ ರವರನ್ನು ಮನೆಗೆ ಕರೆಸಿ ತಬ್ಬಿಕೊಂಡು ಆಶೀರ್ವಾದ ಮಾಡುವುದಕ್ಕೂ ಒಂದು ಕಾರಣವಿತ್ತು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಇರುವಂತಹ ಒಂದು ಪ್ರತಿಭೆ ತೂಗುದೀಪ ಶ್ರೀನಿವಾಸ್ ಅವರು. ಅವರ ನಟನಾ ಸಾಮರ್ಥ್ಯ ಎಷ್ಟಿತ್ತೆಂದರೆ ಒಂದು ವೇಳೆ ಅವರು ಈಗಲೂ ಬದುಕಿದ್ದರೆ ಪುರುಸೊತ್ತಿಲ್ಲದ ಒಬ್ಬ ಬ್ಯುಸಿ ನಟರಾಗಿರುತ್ತಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ವರನಟ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡ ತೂಗುದೀಪ ಶ್ರೀನಿವಾಸ್ ಅವರು ನಿಭಾಯಿಸಿದ ಪಾತ್ರಗಳು ಹಲವಾರು. ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ತೂಗುದೀಪ ಶ್ರೀನಿವಾಸ್ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದೆ ಖಳನಾಯಕನಾಗಿ.

Follow us on Google News

ನಟ ತೂಗುದೀಪ ಶ್ರೀನಿವಾಸ ಅವರು ಅಣ್ಣಾವ್ರಿಗೆ ಬಹಳ ಹತ್ತಿರದವರು. ಹೆಚ್ಚುಕಮ್ಮಿ ಅಣ್ಣಾವ್ರು ಎಲ್ಲಾ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್ ಇರುತ್ತಿದ್ದರು. ಒಂದು ವೇಳೆ ಅವರು ರಾಜಕುಮಾರ್ ಅವರು ನಟಿಸುವ ಚಿತ್ರದಲ್ಲಿ ಇಲ್ಲ ಎಂದರೆ, ಪಾರ್ವತಮ್ಮ ರಾಜಕುಮಾರ್ ಅವರ ಹೆಸರು ನಿರ್ದೇಶಕರ ಬಳಿ ತೂಗುದೀಪ ಶ್ರೀನಿವಾಸ್ ಅವರಿಗಾಗಿ ಒಂದು ಪಾತ್ರವನ್ನು ಸೃಷ್ಟಿಸುವಂತೆ ಹೇಳುತ್ತಿದ್ದರಂತೆ. ಅಪ್ಪನ ಯಶಸ್ಸಿನ ದಾರಿಯಲ್ಲಿಯೇ ನಡೆಯುತ್ತಿರುವ ನಟ ಅಂದರೆ ದರ್ಶನ್ ಅವರು. ನಟ ದರ್ಶನ್ ಹಾಗೂ ಅವರ ಸಹೋದರ ಇಬ್ಬರು ತಂದೆಯ ಹಲವು ಇಷ್ಟಗಳನ್ನು ಈಡೇರಿಸುವ ಬಂದಿರುವುದು ಮಾತ್ರವಲ್ಲದೆ ಅವರ ಹಲವು ಕೋನಗಳಲ್ಲಿ ಅಳವಡಿಸಿಕೊಂಡಿದ್ದಾರೆ.

ತೂಗುದೀಪ ಶ್ರೀನಿವಾಸ್ ಅವರ ಪ್ರಾಣಿ-ಪ್ರೀತಿ ಇಂದು ದರ್ಶನ್ ಅವರಲ್ಲಿ ಕಾಣಬಹುದು. ಇನ್ನು ತೂಗುದೀಪ ಶ್ರೀನಿವಾಸ್ ಅವರು ಪೌರಾಣಿಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಅವರ ಹಿರಣ್ಯಾಕ್ಷ ಪಾತ್ರ ಯಾರೂ ಮರೆಯುವಂತಿಲ್ಲ. ಇನ್ನು ಅಪ್ಪನಂತೆ ನಟನೆಯಲ್ಲಿ ಅತ್ಯಂತ ಘೋರವಾಗಿರುವ ಪ್ರಬುದ್ಧ ನಟನೆಯನ್ನು ಮಾಡಬಲ್ಲ ನಟ ದರ್ಶನ್ ಅವರು. ಕುರುಕ್ಷೇತ್ರ ಸಿನಿಮಾದಲ್ಲಿ ನಟ ದರ್ಶನ್ ಅವರ ಪಾತ್ರವನ್ನು ನಿಭಾಯಿಸಿದ್ದು ನೀವೆಲ್ಲ ನೋಡಬಹುದು. ಆದರೆ ಹಳೆಯ ಕಾಲದಲ್ಲಿ ಸಿನಿಮಾ ತೆರೆ ಕಂಡಿದ್ದರೆ ನಿಮ್ಮ ಸುಯೋಧನ ಪಾತ್ರ ಯಾರು ಮಾಡಿದ್ದರೆ ಚೆನ್ನಾಗಿತ್ತು ಎಂಬ ಪ್ರಶ್ನೆಗೆ ದರ್ಶನ್ ಅವರ ಬಾಯಿಂದ ಬಂದ ಮೊದಲ ಹೆಸರು ರಾಜಕುಮಾರ್ ಅವರದ್ದು. ಅಣ್ಣಾವ್ರು ಕೇವಲ ಒಬ್ಬಆಕ್ಟರ್ ಮಾತ್ರ ಆಗಿರಲಿಲ್ಲ. ತಮ್ಮ ಕೋ ಆಕ್ಟರ್ ಗಳಿಗೆ ಬೆಳೆಯಲು ಬೆನ್ನುತಟ್ಟಿ ಅವಕಾಶ ಮಾಡಿಕೊಡುತ್ತಿದ್ದರು.

ಇದಕ್ಕೆ ಜ್ವಲಂತ ಉದಾಹರಣೆ ತೂಗುದೀಪ ಶ್ರೀನಿವಾಸ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಣ್ಣಾವ್ರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಗೌರವ. ಇಂದಿಗೂ ಕೂಡ ಹಲವಾರು ಸಂದರ್ಭಗಳಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ ನಟ ದರ್ಶನ್. ಆದರೂ ನಟ ದರ್ಶನ್ ಅವರಿಗೆ ಅಣ್ಣಾವ್ರ ಎದುರು ನಿಂತು ಮಾತನಾಡಲು ಅದೇನು ನಾಚಿಕೆ, ಅದೇನೋ ಒಂಥರಾ ಭಯ. ಹಾಗಾಗಿ ಅಣ್ಣಾವ್ರನ್ನ ಒಮ್ಮೆ ತಾನು ತಬ್ಬಿಕೊಳ್ಳಬೇಕು ಅವರ ಆಶೀರ್ವಾದವನ್ನು ಪಡೆಯಬೇಕು ಎಂದು ಅಂದುಕೊಂಡಿದ್ದರು ಕೂಡ ಹಂಬಲವನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದರು ದರ್ಶನ್. ಇಂತಹ ಸಂದರ್ಭದಲ್ಲಿ ಅಣ್ಣಾವ್ರು ಒಮ್ಮೆ ದರ್ಶನ್ ಅವರನ್ನು ಮನೆಗೆ ಕರೆಯುತ್ತಾರೆ. ಇದಕ್ಕೂ ಒಂದು ಕಾರಣವಿದೆ.

ಮೊದಮೊದಲು ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಅವರ ಅಭಿನಯವನ್ನು ಜನರು ಒಪ್ಪಿಕೊಂಡರು. ಆನಂತರ ಅವರ ಮೆಜಸ್ಟಿಕ್ ನಂತರ ಸಿನಿಮಾಗಳು ದರ್ಶನ್ ಅವರನ್ನು ಉತ್ತುಂಗಕ್ಕೆ ಏರಿಸಿತು. ನಟ ದರ್ಶನ್ ಅವರ ನನ್ನ ಪ್ರೀತಿಯ ರಾಮು ಚಿತ್ರವನ್ನು ನಾವ್ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ಕಾರಣ ಆ ಚಿತ್ರದಲ್ಲಿ ದರ್ಶನ್ ಅವರ ಅಭಿನಯ. ತೀರಿಕೊಂಡ ಮೇಲೆ ಈ ಚಿತ್ರ ಅಷ್ಟಾಗಿ ಥಿಯೇಟರ್ ಗಳಲ್ಲಿ ನಿಲ್ಲದೆ ಇದ್ದರೂ, ಅವರ ಪಾತ್ರ ಮಾತ್ರ ಜನಮಾನಸದಲ್ಲಿ ಅಚ್ಚಳಿಯದಂತೆ ಇದೆ.

ಯಾಕಂದ್ರೆ ಈ ಚಿತ್ರದುದ್ದಕ್ಕೂ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರು ಯಾವುದೇ ಕೃತಕ ಸಲಕರಣೆಯಲ್ಲಿ ತಮ್ಮ ಕಣ್ಣನ್ನು ಕುರುಡನಂತೆ ಮಾಡಿಕೊಂಡಿದ್ದರು. ಈ ಕಾರಣಕ್ಕಾಗಿ ಚಿತ್ರೀಕರಣದ ನಂತರವೂ ಅವರ ಕಣ್ಣಿನ ಗುಡ್ಡಗಳು ನೋಯಿತ್ತಿತ್ತಂತೆ. ವೈದ್ಯರು ಕೂಡ ಮತ್ತೊಮ್ಮೆ ಇಂಥ ಪ್ರಯೋಗವನ್ನು ಮಾಡಿದ್ರೆ ನೀವು ಕಣ್ಣನ್ನೇ ಕಳೆದುಕೊಳ್ಳಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದರಂತೆ. ಇದರಲ್ಲೇ ಗೊತ್ತಾಗುತ್ತೆ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಮಾಣಿಕ ಪ್ರಯತ್ನ ಹಾಗೂ ನಟನೆಯ ಬಗ್ಗೆ ಅವರಿಗಿರುವ ಗೌರವ.

ದರ್ಶನ್ ಅಭಿನಯದ ನನ್ನ ಪ್ರೀತಿಯ ರಾಮು ಚಿತ್ರವನ್ನು ವೀಕ್ಷಿಸಿದ ಅಣ್ಣಾವ್ರು ದರ್ಶನ್ ಅವರನ್ನು ಮನೆಗೆ ಕರೆಸಿಕೊಳ್ಳುತ್ತಾರೆ. ದರ್ಶನ್ ಅವರನ್ನು ಎದುರುಗೊಂಡು ಡಾಕ್ಟರ್ ರಾಜಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ದರ್ಶನ್ ಅವರನ್ನು ಅಭಿನಂದಿಸುತ್ತಾರೆ. ಇನ್ನು ದರ್ಶನ್ ಅವರು ಕೇಳುವುದಕ್ಕೂ ಮೊದಲ ಅವರ ಆಸೆಯನ್ನು ಈಡೇರಿಸಿದರು ಅಣ್ಣಾವ್ರು. ಅಣ್ಣಾವ್ರನ್ನು ಒಮ್ಮೆ ತಬ್ಬಿಕೊಳ್ಳಬೇಕು ಎಂದು ದರ್ಶನ್ ಭಾವಿಸಿದ್ದರೆ,

ದರ್ಶನ್ ಬರುತ್ತಿದ್ದಂತೆ ಅವರನ್ನು ತಬ್ಬಿಕೊಂಡು ನೀನು ತುಂಬಾ ಎತ್ತರಕ್ಕೆ ಬೆಳೆಯುತ್ತಿಯಾ. ನನ್ನ ಪ್ರೀತಿಯ ರಾಮು ಚಿತ್ರವನ್ನು ನಾನು ನೋಡಿದ್ದೇನೆ. ಅದರಲ್ಲಿ ನೀನು ಅತ್ಯದ್ಭುತವಾಗಿ ನಟಿಸಿದ್ದಿಯಾ ಎಂದು ಬೆನ್ನುತಟ್ಟಿ ತಬ್ಬಿಕೊಂಡು ಆಶೀರ್ವಾದವನ್ನು ಮಾಡುತ್ತಾರೆ ಅಣ್ಣಾವ್ರು. ಈ ಸಂದರ್ಭದಲ್ಲಿ ಒಂದು ಕ್ಷಣ ತನ್ನ ಅಪ್ಪನನ್ನು ನೆನೆಸಿಕೊಂಡು ದರ್ಶನ್ ಅವರ ಕಣ್ಣಂಚು ಒದ್ದೆ ಆಗುತ್ತೆ. ಅಲ್ಲದೇ ನಟನಾ ಲೋಕಕ್ಕೆ ಕಾಲಿಟ್ಟ ಸಾರ್ಥಕತೆಯೂ ಅವರ ಕಣ್ಣುಗಳಲ್ಲಿ ಕಾಣಬಹುದಾಗಿತ್ತು. ಖಂಡಿತವಾಗಿಯೂ ಈ ಒಂದು ಸನ್ನಿವೇಶವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಜೀವನದುದ್ದಕ್ಕೂ ಮರೆಯಲು ಸಾಧ್ಯವೇ ಇಲ್ಲ.