ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎರಡು ವರ್ಷ ಆರು ತಿಂಗಳ ನಂತರ ಶನಿಯ ಕಾಟದಿಂದ ಮುಕ್ತಿ ಪಡೆಯಲಿರುವ ಮೂರು ರಾಶಿಯ ಜನರು ಯಾರ್ಯಾರು ಗೊತ್ತೇ??

69

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜ್ಯೋತಿಷ್ಯಶಾಸ್ತ್ರ ಎನ್ನುವುದು ಪ್ರಾಚೀನಕಾಲದಿಂದಲೂ ಕೂಡ ಜನರ ಜೀವನದಲ್ಲಿ ಒಂದು ಭಾಗವಾಗಿ ಮೂಡಿಬಂದಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಏನೇ ಬದಲಾವಣೆಗಳು ನಡೆದರೂ ಕೂಡ ಅದು ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶ. ಹಾಗೆ ಪ್ರತಿಯೊಬ್ಬರು ಕೂಡ ಪ್ರತಿಯೊಂದು ಶುಭ ಸಂದರ್ಭಗಳಲ್ಲಿ ಮೊದಲಿಗೆ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರವನ್ನು ಮಾಡುತ್ತಾರೆ. ಇದಾದ ನಂತರವೇ ಉಳಿದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ.

ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗ್ರಹದ ಪ್ರಭಾವ ಸಾಕಷ್ಟು ಪ್ರಮುಖವಾಗಿರುತ್ತದೆ. ಪುರಾಣ ಓದಿರುವವರಿಗೆ ಶನಿಗ್ರಹದ ಕೆಟ್ಟ ಪರಿಣಾಮದಿಂದಾಗಿ ಎಷ್ಟೆಲ್ಲ ಜನರು ಯಾರೆಲ್ಲ ಮಹಾತ್ಮರು ಕಷ್ಟಪಟ್ಟಿದ್ದಾರೆ ಎಂಬುದನ್ನು. ಸ್ವತಹ ಪರಶಿವನೇ ಶನಿಯ ದೋಷದಿಂದ ಬಳಲ ಬೇಕಾದಂತಹ ಪರಿಸ್ಥಿತಿ ಬಂದಿತ್ತು. ಹೀಗಾಗಿ ಪ್ರತಿಯೊಬ್ಬರ ಜಾತಕದಲ್ಲಿ ಕೂಡ ಶನಿ ಒಳ್ಳೆಯ ಪ್ರಭಾವವನ್ನು ಬೀರಿದರೆ ಮಾತ್ರ ಉತ್ತಮ ಜೀವನವನ್ನು ನಡೆಸಲು ಸಾಧ್ಯ.

ಇದೇ ಏಪ್ರಿಲ್ 29ರಂದು ಶನಿಗ್ರಹ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಈ ಸಂದರ್ಭದಲ್ಲಿ ಶನಿದೇವನ ಕೋಪದಿಂದ ಮೂರು ಗ್ರಹಗಳು ಮುಕ್ತವಾಗಲಿವೆ. ಹಾಗಿದ್ದರೆ ಈ ಮೂರು ಗ್ರಹಗಳು ಯಾವುದು ಎನ್ನುವುದನ್ನು ವಿವರಣೆಯೊಂದಿಗೆ ತಿಳಿಯೋಣ ಬನ್ನಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇರಬಹುದು ತಪ್ಪದೆ ಕೊನೆಯಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.

ಮಿಥುನ ರಾಶಿ; ಕುಂಭ ರಾಶಿಯಲ್ಲಿ ಶನಿದೇವನು ಕಾಲಿಡುತ್ತಿದ್ದಂತೆಯೇ ಮಿಥುನ ರಾಶಿಯವರಿಗೆ ಶನಿ ದೋಷದಿಂದ ಮುಕ್ತಿ ಸಿಗುತ್ತದೆ. ಶನಿ ದೈಯ ಪರಿಣಾಮ ಕಡಿಮೆಯಾದ ತಕ್ಷಣವೇ ಮಿಥುನ ರಾಶಿಯವರ ಜೀವನದಲ್ಲಿ ಇರುವಂತಹ ಬಹುತೇಕ ಎಲ್ಲ ಸಮಸ್ಯೆಗಳು ಕೂಡಾ ಪರಿಹಾರವನ್ನು ಕಂಡುಕೊಳ್ಳುತ್ತವೆ. ಹಾಗೂ ಕ್ರಮೇಣವಾಗಿ ಜೀವನದಲ್ಲಿ ಉತ್ತಮ ದಿನಗಳ ಆರಂಭವಾಗುತ್ತದೆ. ಯಾವುದೇ ಹಾಗೂ ಎಂತಹ ಜಟಿಲವಾದ ಸಮಸ್ಯೆಗಳಿದ್ದರೂ ಕೂಡ ಪರಿಹಾರವಾಗುತ್ತದೆ.

ತುಲಾ ರಾಶಿ; ಏಪ್ರಿಲ್ 29ರಂದು ಶನಿದೇವ ತನ್ನ ರಾಶಿಯನ್ನು ಬದಲಾಯಿಸುವುದರಿಂದ ತುಲಾ ರಾಶಿಯವರಿಗೆ ಶನಿ ದೈಯಾ ಸಮಸ್ಯೆಯ ಪ್ರಭಾವ ಕಡಿಮೆಯಾಗುತ್ತದೆ. ಈ ಸಮಸ್ಯೆ ಗಳಿಸಿಕೊಳ್ಳುತ್ತಿದ್ದಾರೆ ತುಲಾರಾಶಿಯವರ ಜೀವನದಲ್ಲಿ ಚಿನ್ನದಂತಹ ದಿನಗಳ ಆಗಮನವಾಗುತ್ತದೆ. ಜೀವನದಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಕೂಡ ನೀವು ಖಂಡಿತವಾಗಿ ಅದನ್ನು ಯಶಸ್ವಿಯಾಗಿ ಎದುರಿಸಿ ಮುಂದೆ ಕಾಲನ್ನು ಇಡುತ್ತೀರಿ. ಆರ್ಥಿಕ ಸಮಸ್ಯೆಗಳು ಕೂಡ ದೂರವಾಗಿ ಆರ್ಥಿಕವಾಗಿ ನೀವು ಅಭಿವೃದ್ಧಿಯನ್ನು ಸಾಧಿಸುತ್ತೀರಿ. ಹಲವಾರು ವರ್ಷಗಳಿಂದ ಕಾನೂನಾತ್ಮಕವಾಗಿ ನಡೆಸುತ್ತಿರುವಂತಹ ಹೋರಾಟ ನಿಮ್ಮ ಪಕ್ಷ ಒಲಿದು ಬರಲಿದೆ. ಹಲವಾರು ಸಮಯಗಳಿಂದ ಬಳಲುತ್ತಿರುವ ಆರೋಗ್ಯ ಸಮಸ್ಯೆಯಿಂದ ನೀವು ಸಂಪೂರ್ಣ ಯಶಸ್ವಿಯಾಗಿ ಹೊರಗೆ ಬರುತ್ತೀರಿ.

ಧನು ರಾಶಿ; ಸದ್ಯಕ್ಕೆ ಧನು ರಾಶಿಯವರು ಶನಿಯ ದೋಷದಿಂದ ಬಳಲುತ್ತಿದ್ದಾರೆ. ಆದರೆ ಯಾವಾಗ ಏಪ್ರಿಲ್ 29ರಂದು ಶನಿ ದೇವ ರಾಶಿಯನ್ನು ಬದಲಾಯಿಸುತ್ತಾನೆ ಆ ಸಮಯದಲ್ಲಿ ಧನು ರಾಶಿಯವರ ಶನಿದೋಷ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ. ಇದರ ಪ್ರಭಾವದಿಂದಾಗಿ ಹಲವಾರು ಸಮಯಗಳಿಂದ ಕಳೆದುಕೊಂಡಿದ್ದ ಸಂತೋಷವನ್ನು ಮತ್ತೆ ಮರಳಿ ಪಡೆದುಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಬಲಿಷ್ಠವಾಗಲಿದ್ದು ಸಮಾಜದಲ್ಲಿ ಇದರ ಮೂಲಕ ಪ್ರತಿಷ್ಠೆ ಹಾಗೂ ಗೌರವಗಳನ್ನು ಕೂಡ ಹೆಚ್ಚಿಸಿಕೊಳ್ಳಲಿದ್ದಾರೆ. ಕೆಲಸದಲ್ಲಿ ಹಾಗೂ ವ್ಯಾಪಾರದಲ್ಲಿ ನಡೆಯುವಂತಹ ಹಲವಾರು ಅಡೆತಡೆಗಳನ್ನು ಕೂಡ ನೀವು ಯಾವುದೇ ಕಷ್ಟವಿಲ್ಲದೆ ಎದುರಿಸಿ ಅದನ್ನು ನಿವಾರಿಸಿಕೊಳ್ಳಲಿದ್ದೀರಿ.

ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಒಂದು ವೇಳೆ ನೀವು ಕೂಡ ಶನಿದೋಷ ದಿಂದ ಬಳಲುತ್ತಿದ್ದಾರೆ ತಪ್ಪದೆ ಶನಿದೇವನನ್ನು ಪೂಜಿಸಿ ಹಾಗೂ ಆತನ ಕೃಪೆಗೆ ಪಾತ್ರರಾಗಿ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.