ಇನ್ನೇನು ಆರ್ಸಿಬಿ ತಂಡಕ್ಕೆ ಗೆಲುವು ಖಚಿತ ಎಂಬ ಭರವಸೆ ಸೃಷ್ಟಿ ಮಾಡಿದ್ದ ದಿನೇಶ್, ಆದರೆ ಆಗಿದ್ದೇನು ಗೊತ್ತೇ??

ಇನ್ನೇನು ಆರ್ಸಿಬಿ ತಂಡಕ್ಕೆ ಗೆಲುವು ಖಚಿತ ಎಂಬ ಭರವಸೆ ಸೃಷ್ಟಿ ಮಾಡಿದ್ದ ದಿನೇಶ್, ಆದರೆ ಆಗಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವುದಕ್ಕಿಂತಲೂ ಮುನ್ನ ಮೊದಲ ಒಂದು ಪಂದ್ಯವನ್ನು ಸೋತು ಉಳಿದ ಎರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನತ್ತ ಎದುರುನೋಡುತ್ತಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಬ್ರೇಕ್ ಹಾಕಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಹಿನ್ನಡೆಯ ನಂತರವೂ ಕೂಡ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 20 ಓವರುಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ ಬರೋಬ್ಬರಿ 216 ರನ್ನುಗಳನ್ನು ಕಲೆಹಾಕಿತ್ತು.

ಇದನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕವಾಗಿಯೇ ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ರವರನ್ನು ಕಡಿಮೆ ಮೊತ್ತಕ್ಕೆ ಕಳೆದುಕೊಂಡಿತು. ಬಿಗ್ ಹಿಟ್ಟರ್ ಆಗಿರುವ ಗ್ಲೆನ್ ಮ್ಯಾಕ್ಸ್ವೆಲ್ ರವರು ಕೂಡ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡಲಿಲ್ಲ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಕೂಡ ದಿನೇಶ್ ಕಾರ್ತಿಕ್ ರವರು ನಾಟೌಟ್ ಆಗಿದ್ದರು. ಯಾವುದೇ ಪಂದ್ಯಗಳಲ್ಲಿ ಔಟ್ ಆಗಿರಲಿಲ್ಲ. ಆದರೆ ಮೊದಲ ಬಾರಿಗೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಔಟಾದರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ರವರು ಬರೋಬ್ಬರಿ 14 ಎಸೆತಗಳಲ್ಲಿ 34 ರನ್ ಬಾರಿಸಿದರು. ಸಿಕ್ಸ್ ಹೊಡೆಯುವ ಯತ್ನದಲ್ಲಿ ಬ್ಯಾಟ್ ಬೀಸಲು ಹೋಗಿ ದಿನೇಶ್ ಕಾರ್ತಿಕ್ ರವರು ಕ್ಯಾಚ್ ನೀಡುತ್ತಾರೆ. ಅದೊಂದು ಕ್ಯಾಚ್ ಆಗಿಲ್ಲದಿದ್ದರೆ ಖಂಡಿತವಾಗಿ ಈ ಪಂದ್ಯವನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ರವರು ಗೆದ್ದು ಕೊಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಕೂಡ ಕೊನೆಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಗೆ ದಿನೇಶ್ ಕಾರ್ತಿಕ್ ರವರು ಸೋಲಿನ ಭ’ಯವನ್ನು ತಂದಿದ್ದಂತೂ ಸುಳ್ಳಲ್ಲ. ದಿನೇಶ್ ಕಾರ್ತಿಕ್ ರವರ ಆಟವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕೂಡ ಅಭಿನಂದಿಸಿದ್ದಾರೆ.