ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಮ್ಮ ನಡೆ ಬದಲಾಯಿಸಿದ ರಾಹು ಹಾಗೂ ಕೇತು ಗ್ರಹಗಳು; ಇದರಿಂದ ಎಲ್ಲಾ ರಾಶಿಗಳ ಭವಿಷ್ಯ ಹೇಗಿದೆ ಗೊತ್ತೇ?? ಯಾರ್ಯಾರಿಗೆ ಅದೃಷ್ಟ ಗೊತ್ತೇ??

2,586

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಏಪ್ರಿಲ್ 12ರಂದು ಒಂದು ದೊಡ್ಡ ಬದಲಾವಣೆ ನಡೆದಿದೆ. ಪಾಪ ಕಾರಕ ಗ್ರಹ ಗಳಾಗಿರುವ ರಾಹು-ಕೇತು ತಮ್ಮ ಸ್ಥಾನವನ್ನು ಬದಲಿಸಿವೆ. ರಾಹು ಹಾಗೂ ಕೇತು ಗ್ರಹಗಳ ರಾಶಿ ಪಲ್ಲಟ ಎನ್ನುವುದು ಕೆಲವು ರಾಶಿಯವರಿಗೆ ಸಕಾರಾತ್ಮಕ ಪರಿಣಾಮವನ್ನು ಬೀರಿದರೆ ಇನ್ನುಕೆಲವು ರಾಶಿಯವರಿಗೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಹಾಗಿದ್ದರೆ ಯಾವ ರಾಶಿಯವರಿಗೆ ಯಾವ ಪರಿಣಾಮ ಸಿಗಲಿದೆ ಎನ್ನುವುದನ್ನು ನೋಡೋಣ ಹಾಗೂ ಈ ಪರಿಣಾಮ ಎನ್ನುವುದು ಮುಂದಿನ 18 ತಿಂಗಳುಗಳಿಗೆ ಮುಂದುವರೆಯಲಿದೆ ಎಂಬುದಾಗಿ ಉಲ್ಲೇಖವಾಗಿದೆ ಎಂಬುದನ್ನು ಕೂಡ ನಾವಿಲ್ಲಿ ನೆನಪಿಡಬೇಕಾಗಿದೆ.

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ತಮ್ಮ ಸಂಬಂಧಗಳ ಕುರಿತಂತೆ ಜಾಗೃತೆ ವಹಿಸಬೇಕಾದಂತಹ ಅಗತ್ಯವಿರುತ್ತದೆ. ಇವರಿಗೆ ಮುಂದಿನ ದಿನಗಳಲ್ಲಿ ಆರೋಗ್ಯದ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗಬಹುದಾದಂತಹ ಸಾಧ್ಯತೆ ದಟ್ಟವಾಗಿದೆ. ಹಲವಾರು ಸಮಸ್ಯೆಗಳು ನಿಮ್ಮ ಮುಂದಿನ ದೈನಂದಿನ ಜೀವನದಲ್ಲಿ ಎದುರಾಗಬಹುದು ಅದನ್ನು ನೀವು ಎದುರಿಸುವ ಶಕ್ತಿಯನ್ನು ಹೊಂದಿರುತ್ತೀರಿ. ನೀವು ಮಾಡುವ ಕೆಲಸದಲ್ಲಿ ಕಠಿನ ಪರಿಶ್ರಮವನ್ನು ಹಾಕಿದರೆ ಖಂಡಿತವಾಗಿ ಸರಿಯಾದ ಪ್ರತಿಫಲವನ್ನು ಪಡೆಯುತ್ತೀರಿ. ಸಹದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರಿ. ಆರೋಗ್ಯದ ಕುರಿತಂತೆ ಗಮನವಹಿಸಿ.

ವೃಷಭ ರಾಶಿ; ಕೆಲವೊಮ್ಮೆ ಕೈತುಂಬ ಧನ ಲಾಭವಾಗಲಿದೆ ಇನ್ನು ಕೆಲವೊಮ್ಮೆ ಕೈತುಂಬಾ ಖರ್ಚು ಕೂಡ ವಿನಾಕಾರಣ ನಡೆಯಲಿದೆ. ಕಣ್ಣು ಹಾಗೂ ಕೆನ್ನೆಯ ಸಮಸ್ಯೆಯನ್ನು ನೀವು ಹೊಂದುವ ಸಾಧ್ಯತೆ ಇದ್ದು ಜಾಗ್ರತೆವಹಿಸಿ. ಅಗತ್ಯ ಇರುವ ಕೆಲಸವನ್ನು ಜಾಗ್ರತೆಯಿಂದ ಮಾಡಿ ಯಾಕೆಂದರೆ ಶತ್ರುಗಳ ಕಾಟ ನಿಮಗೆ ಎದುರಾಗಲಿದೆ.

ಮಿಥುನ ರಾಶಿ; ಅತಿಶೀಘ್ರದಲ್ಲೇ ಧನ ಲಾಭವಾಗಲಿದೆ ಸಮಾಜದಲ್ಲಿ ನಿಮ್ಮ ಘನತೆ ಗೌರವ ಕೂಡ ಹೆಚ್ಚಾಗಲಿದೆ. ಮನೆ ಹಾಗೂ ವಾಹನಗಳನ್ನು ಖರೀದಿಸುವ ಅವಕಾಶ ಅದೃಷ್ಟವು ನಿಮಗೆ ಒದಗಿಬರಲಿದೆ. ಕುಟುಂಬದಲ್ಲಿ ಕೂಡ ಸುಖ-ಶಾಂತಿ-ನೆಮ್ಮದಿ ಸಮೃದ್ಧಿಯಾಗಿರುತ್ತದೆ. ರಾಹು ಹಾಗೂ ಕೇತು ಗ್ರಹಗಳ ಗೋಚರ ಎನ್ನುವುದು ನಿಮ್ಮ ರಾಶಿಯವರಿಗೆ ತುಂಬಾ ಶುಭಕರವಾಗಿದೆ.

ಕರ್ಕ ರಾಶಿ; ಯಶಸ್ಸಿನ ಜೀವನ ಈ ಸಂದರ್ಭದಲ್ಲಿ ಪ್ರಾರಂಭವಾಗಲಿದ್ದು ಎಲ್ಲಾ ಕೆಲಸಗಳು ಸುಲಭದಿಂದ ನಡೆಯಲಿದೆ. ನಿಮ್ಮ ಕೆಲಸ ಏನುವುದು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡಮಟ್ಟದ ಹೆಸರನ್ನು ನಿಮಗೆ ಸಂಪಾದಿಸಿ ಕೊಡಲಿದೆ. ವ್ಯಾಪಾರದಲ್ಲಿ ಲಾಭ ಕೂಡ ಆಗಲಿದ್ದು ಕುಟುಂಬದಲ್ಲಿ ಸುಖ ನೆಲೆಸಲಿದೆ.

ಸಿಂಹ ರಾಶಿ; ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬದ ಸಹಕಾರ ಸಿಗಲಿದೆ. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿಗತಿ ಉನ್ನತ ವಾಗಲು ಸಹಾಯಕವಾಗಲಿದೆ. ಶೈಕ್ಷಣಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲೆಂದು ಕೆಲಸಕ್ಕಾಗಿ ಸಂದರ್ಶನವನ್ನು ಕೊಡುವುದಿದ್ದರೆ ಅದರಲ್ಲಿ ಕೂಡ ನೀವು ಯಶಸ್ವಿಯಾಗಲಿದ್ದೀರಿ.

ಕನ್ಯಾ ರಾಶಿ; ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಹ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ. ವ್ಯವಹಾರದಲ್ಲಿ ಕೂಡ ಸ್ವಲ್ಪ ಯೋಚಿಸಿ ನಿಮ್ಮ ಮುಂದಿನ ಹೆಜ್ಜೆಯನ್ನು ಇಡಬೇಕು. ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದ್ದರೆ ನೀವು ಇಡುವ ಹೆಜ್ಜೆ ಯಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.

ತುಲಾ ರಾಶಿ; ರಾಹು ಕೇತುಗಳ ರಾಶಿ ಪಲ್ಲಟದಿಂದಾಗಿ ತುಲಾರಾಶಿಯವರ ಆರೋಗ್ಯ ಆರ್ಥಿಕ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಏರುಪೇರು ಉಂಟಾಗುವಂತಹ ಸಾಧ್ಯತೆಯಿದೆ. ತುಲಾರಾಶಿಯವರ ರಾಶಿಚಕ್ರದಲ್ಲಿ ಬ್ರಹಸ್ಪತಿ ಹಾಗೂ ಶನಿ ಗ್ರಹಗಳು ಒಳ್ಳೆಯತನದಲ್ಲಿ ಇರುವುದಿಲ್ಲ ಹೀಗಾಗಿ ರಾಹು ಹಾಗೂ ಕೇತು ಗ್ರಹಗಳು ನಿಮಗೆ ಸಾಕಷ್ಟು ಕಷ್ಟಗಳನ್ನು ತಂದಿಡಲಿದ್ದಾರೆ.

ವೃಶ್ಚಿಕ ರಾಶಿ; ಕೆಲಸ ಹಾಗೂ ವ್ಯಾಪಾರ ಎರಡರಲ್ಲಿಯೂ ಕೂಡ ಲಾಭವನ್ನು ಕಾಣಲಿದ್ದೀರಿ. ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ. ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭ ಸಿಗಲಿದೆ. ಆದರೆ ಕರ್ಚನ್ನು ನಿಯಂತ್ರಿಸ ಬೇಕಾಗುತ್ತದೆ. ಇನ್ನು ಸಂತಾನಕ್ಕಾಗಿ ಕಾಯುತ್ತಿರುವ ವರಿಗೆ ನಿರಾಶೆಯಾಗಲಿದೆ.

ಧನು ರಾಶಿ; ಈ ಸಂದರ್ಭದಲ್ಲಿ ನೀವು ಭವಿಷ್ಯದ ಕುರಿತಂತೆ ಚಿಂತಿಸುತ್ತಿರುತ್ತೀರಿ. ಯೋಜನೆ ಹಾಗೂ ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಸಾಕಷ್ಟು ಕೊರತೆ ಇರಲಿದ್ದು ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಎನ್ನುವುದು ಕುಂಠಿತಗೊಳ್ಳಲಿದೆ. ಹೀಗಾಗಿ ಹಣದ ಹೂಡಿಕೆಯ ಕುರಿತಂತೆ ಸದ್ಯದ ಮಟ್ಟಿಗೆ ಎಂದು ಕೂಡ ಯೋಚಿಸಲು ಹೋಗಬೇಡಿ. ಮಕ್ಕಳಿಂದ ನಿರೀಕ್ಷೆ ಕೂಡ ಇಟ್ಟುಕೊಳ್ಳಬೇಡಿ.

ಮಕರ ರಾಶಿ; ನಿಮ್ಮ ರಾಶಿಯಲ್ಲಿ ಕೇತುವಿನ ಸ್ಥಾನ ನಿಮಗೆ ಲಾಭವನ್ನು ತರಲಿದೆ ಆದರೆ ರಾಹುವಿನ ಸ್ಥಾನ ಕೆಡುಕನ್ನು ತರಲಿದೆ. ನಿಮ್ಮ ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ಕೂಡ ಕಂಡುಬರಲಿದೆ ಕೆಲವು ಕುಟುಂಬದ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಕೂಡ ಕಂಡು ಬರಲಿದೆ. ಇದರಿಂದ ಹಲವಾರು ಕಷ್ಟಗಳನ್ನು ನೀವು ಕಾಣಲಿದ್ದೀರಿ ಮಾತ್ರವಲ್ಲದೆ ಅತಿ ಶೀಘ್ರದಲ್ಲಿ ಕೆಲಸದಲ್ಲಿ ಅಥವಾ ವ್ಯಾಪಾರದಲ್ಲಿ ದೊಡ್ಡಮಟ್ಟದ ಆಘಾ’ತವನ್ನು ಅನುಭವಿಸುವ ಸಾಧ್ಯತೆ ಇದೆ.

ಕುಂಭ ರಾಶಿ; ಈ ಸಂದರ್ಭದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಹೊಂದಲಿದ್ದೀರಿ. ಮನೆಯವರಿಂದ ಕೂಡ ನಿಮಗೆ ಸಾಥ್ ಸಿಗಲಿದ್ದು ನಿಮ್ಮ ಜೀವನವೇ ಬದಲಾಗಲಿದೆ. ಕೆಲಸದಲ್ಲಿ ನೀವು ತೋರಿಸುವಂತಹ ಪರಿಶ್ರಮದಿಂದಾಗಿ ನಿಮಗೆ ಕೆಲಸದಲ್ಲಿ ದೊಡ್ಡಮಟ್ಟದ ಜವಾಬ್ದಾರಿ ಕೂಡ ಸಿಗಲಿದ್ದು ಜೀವನವು ಕೂಡ ಸೆಟಲ್ ಆಗಲಿದೆ.

ಮೀನ ರಾಶಿ; ರಾಹು ಹಾಗೂ ಕೇತು ಗ್ರಹಗಳ ಉಪಟಳದಿಂದಾಗಿ ಮೀನರಾಶಿಯವರಿಗೆ ಆರ್ಥಿಕ ಕೌಟುಂಬಿಕ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಬೆಂಬಿಡದೆ ಕಾಡಲಿದೆ. ಖರ್ಚು ಹಾಗೂ ಸಾಲದ ವಿಚಾರವಾಗಿ ನೀವು ನಿಮ್ಮ ಗೌರವವನ್ನು ಸಮಾಜದಲ್ಲಿ ಕಳೆದುಕೊಳ್ಳಲಿದ್ದೀರಿ. ಹೀಗಾಗಿ ವಿಚಾರದ ಕುರಿತಂತೆ ನೀವು ಜಾಗೃತೆ ವಹಿಸುವುದು ಉತ್ತಮ. ದಿನಗಳಲ್ಲಿ ನಿಮ್ಮ ರಾಶಿ ಯಾವುದು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.