ತನ್ನ ಲೆಕ್ಕಚಾರದ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ತಂಡ ರಚಿಸಿದ ವಾಸಿಂ ಜಾಫರ್. ಸಚಿನ್ ಸೆಹವಾಗ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೆ??

ತನ್ನ ಲೆಕ್ಕಚಾರದ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ತಂಡ ರಚಿಸಿದ ವಾಸಿಂ ಜಾಫರ್. ಸಚಿನ್ ಸೆಹವಾಗ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕ್ರಿಕೆಟ್ ಇಂಗ್ಲೆಂಡ್ ನಲ್ಲಿಯೇ ಜನಿಸಿದರು ಕೂಡ ದೊಡ್ಡಮಟ್ಟದ ಜನಪ್ರಿಯತೆ ಪಡೆದುಕೊಂಡಿರುವುದು ಭಾರತ ದೇಶದಲ್ಲಿ. ಅದರಲ್ಲೂ ಐಪಿಎಲ್ ಮೂಲಕ ಇದು ಇನ್ನಷ್ಟು ದೊಡ್ಡ ಜನಪ್ರಿಯತೆ ಪಡೆದುಕೊಂಡಿತು ಎಂದರೆ ತಪ್ಪಾಗಲಾರದು. ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ರಣಜಿ ಆಟಗಾರನಾಗಿರುವ ವಾಸಿಂ ಜಾಫರ್ ಅವರ ಕುರಿತಂತೆ. ವಾಸಿಂ ಜಾಫರ್ ರವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಆಕ್ಟಿವ್ ಆಗಿದ್ದಾರೆ.

ಇನ್ನು ವಾಸಿಂ ಜಾಫರ್ ಅವರು ಇತ್ತೀಚೆಗೆ ತಮ್ಮ ಸಾರ್ವಕಾಲಿಕ ಶ್ರೇಷ್ಠ 11ರ ಬಳಗವನ್ನು ಸಂದರ್ಶನವೊಂದರಲ್ಲಿ ಸೂಚಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಖ್ಯಾತ ಕ್ರಿಕೆಟಿಗರು ಈ ತರಹ ಸಾರ್ವಕಾಲಿಕ ಪ್ಲೇಯಿಂಗ್ 11 ಪಟ್ಟಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಆದರೆ ವಾಸಿಂ ಜಾಫರ್ ಅವರ ಪ್ಲೇಯಿಂಗ್ 11 ನೋಡಿದರೆ ಖಂಡಿತವಾಗಿ ಎಲ್ಲರೂ ಆಸೆಗೆ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಈ ತಂಡದಲ್ಲಿ ಕ್ರಿಕೆಟ್ ದೇವರು ಎಂದು ಅನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು ಇಲ್ಲ. ನಮ್ಮ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಗ್ರೆಸ್ಸಿವ್ ಓಪನಿಂಗ್ ಬ್ಯಾಟ್ಸ್ ಮನ್ ಆಗಿರುವ ವೀರೇಂದ್ರ ಸೇಹ್ವಾಗ್ ಕೂಡ ಇಲ್ಲ.

ಅಷ್ಟೇ ಯಾಕೆ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕಪ್ತಾನ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಕೂಡ ಇಲ್ಲ. ಹಾಗಿದ್ದರೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಬ್ಯಾರಿ ರಿಚರ್ಡ್ಸ್ ಮಾರ್ಕ್ ವಾ ವಿವ್ ರಿಚರ್ಡ್ಸ್ ಯುವರಾಜ್ ಸಿಂಗ್ ಗ್ರೆಗ್ ಚಾಪೆಲ್ ಗ್ಯಾರಿ ಸೋಬರ್ಸ್ ವಿಕೆಟ್ ಕೀಪರ್ ಆಗಿ ಆಡಮ್ ಗಿಲ್ ಕ್ರಿಸ್ಟ್ ಇಮ್ರಾನ್ ಖಾನ್ ವಾಸಿಮ್ ಅಕ್ರಮ್ ಮಾಲ್ಕಮ್ ಮಾರ್ಷಲ್ ಹಾಗೂ ನಾಯಕನಾಗಿ ಸ್ಪಿನ್ ದಂತಕತೆಯಾಗಿರುವ ಶೇನ್ ವಾರ್ನ್ ಅವರನ್ನು ಆಯ್ಕೆ ಮಾಡಿದ್ದಾರೆ. ಒಟ್ಟಾರೆಯಾಗಿ ವಾಸಿಂ ಜಾಫರ್ ಅವರ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11ರಲ್ಲಿ ಯುವರಾಜ್ ಸಿಂಗ್ ಅವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಭಾರತೀಯ ಕ್ರಿಕೆಟಿಗ ಇಲ್ಲ ಎನ್ನುವುದು ಎಲ್ಲರಿಗೂ ಆಶ್ಚರ್ಯ ತರುವಂತಹ ಸಂಗತಿಯಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.