ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಆಟಗಾರರು ತೋಳಿಗೆ ಕಪ್ಪು ಬ್ಯಾಂಡ್ ಧರಿಸಿದ್ದು ಯಾಕೆ ಗೊತ್ತಾ??

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಆಟಗಾರರು ತೋಳಿಗೆ ಕಪ್ಪು ಬ್ಯಾಂಡ್ ಧರಿಸಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಗೆಲುವಿನ ಲಯದಲ್ಲಿದೆ. ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಕೂಡ ಒಂದಾಗಿದೆ. ಸತತ ಮೂರು ಗೆಲುವನ್ನು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲನ್ನು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಯಾವಾಗಲೂ ಮ್ಯಾಚ್ ನಡೆದಾಗ ಸಮಬಲದ ಹೋರಾಟ ಖಂಡಿತವಾಗಿ ಕಂಡುಬರುತ್ತದೆ. ನಿನ್ನೆ ಕೂಡ ಹಾಗೆ ಇತ್ತು.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಐಪಿಎಲ್ ನಲ್ಲಿ ನಾಲ್ಕಕ್ಕೆ ನಾಲ್ಕು ಪಂದ್ಯಗಳನ್ನು ಸೋತು ಸುಣ್ಣವಾಗಿತ್ತು ಆದರೆ ನಿನ್ನೆಯ ಪಂದ್ಯದಲ್ಲಿ ಗೆಲುವನ್ನು ಕಾಣುವ ಮೂಲಕ ಖಾತೆ ತೆರೆದಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ತಂಡದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿರುವ ಹಾಗೂ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿರುವ ಜೋಶ್ ಹೆಝಲ್ ವುಡ್ ರವರು ಆಡಿದ್ದಾರೆ. ಈ ಸಮಯದಲ್ಲಿ ನೀವು ಸರಿಯಾಗಿ ಗಮನಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಾ ಆಟಗಾರರು ಕೂಡ ತಮ್ಮ ತೋಳಿನಲ್ಲಿ ಕಪ್ಪು ಬ್ಯಾಂಡನ್ನು ಧರಿಸಿದ್ದರು. ಕಪ್ಪು ಬ್ಯಾಂಡ್ ಅನ್ನು ಧರಿಸುವುದು ಸಾಮಾನ್ಯವಾಗಿ ಶ್ರದ್ಧಾಂಜಲಿ ನೀಡುವುದಕ್ಕಾಗಿ ನಿಮಗೆಲ್ಲರಿಗೂ ಗೊತ್ತಿದೆ. ಹಾಗಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಈ ಕಪ್ಪು ಬ್ಯಾಂಡನ್ನು ಧರಿಸಿರುವುದು ಯಾಕೆ ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲರವರ ತಂಗಿ ಎರಡು ದಿನಗಳ ಹಿಂದಷ್ಟೇ ಮರಣವನ್ನಪ್ಪಿದ್ದಾರೆ. ಇದೇ ಕಾರಣದಿಂದಾಗಿ ಅರ್ಧದಲ್ಲಿ ಐಪಿಎಲ್ ಬಿಟ್ಟು ಹರ್ಷಲ್ ಪಟೇಲ್ ರವರು ಮನೆಗೆ ಹಿಂದಿರುಗ ಬೇಕಾದಂತಹ ಪರಿಸ್ಥಿತಿ ಒದಗಿ ಬಂದಿತ್ತು. ಹೀಗಾಗಿ ಹರ್ಷಲ್ ಪಟೇಲ್ರವರ ತಂಗಿಗೆ ಗೌರವ ಸಲ್ಲಿಸುವ ಸಲುವಾಗಿ ತಮ್ಮ ತೋಳಿನಲ್ಲಿ ಕಪ್ಪು ಬ್ಯಾಂಡನ್ನು ಧರಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮಾನವೀಯ ನಡತೆಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ತಂಡದ ಪರವಾಗಿ ಆಡಲು ಹರ್ಷಲ್ ಪಟೇಲ್ ಅವರು ಬರುತ್ತಾರೆಯೇ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.