ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೊದಲ ಗೆಲುವಿನ ಸಂಭ್ರಮದಲ್ಲಿದ್ದ ಚೆನ್ನೈ ತಂಡಕ್ಕೆ ಬಿಗ್ ಶಾಕ್, ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದ ಆಟಗಾರ ಔಟ್. ಯಾರು ಗೊತ್ತೇ??

2,794

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ನಾಲ್ಕಕ್ಕೆ ನಾಲ್ಕು ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್ ಟೇಬಲ್ ನಲ್ಲಿ ಎಲ್ಲರಿಗಿಂತ ಕೆಳಗಿತ್ತು ಆದರೆ ನಿನ್ನೆಯ ಪಂದ್ಯದಲ್ಲಿ ಮೊದಲ ಬಾರಿಗೆ ಗೆಲುವನ್ನು ಕಂಡಿದೆ. ಆದ್ರೂ ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿರುವುದರಿಂದಾಗಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಬೇರೆ ತಂಡಗಳಿಗೆ ಹೋಲಿಸಿದರೆ ಸಾಕಷ್ಟು ವೀಕ್ ಆಗಿ ಕಾಣಿಸಿಕೊಳ್ಳುತ್ತಿದೆ.

ಈ ಬಾರಿಯಲ್ಲಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಡುಪ್ಲೆಸಿಸ್ ಇರುವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೋಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರವರು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಇನ್ನು ಶಾರ್ದುಲ್ ಠಾಕೂರ್ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ತಂಡದಲ್ಲಿ ಬಹುತೇಕ ಎಲ್ಲರೂ ಹೊಸ ಆಟಗಾರರು ತುಂಬಿಕೊಂಡಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾ’ತ ಎದುರಾಗಿದೆ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತಂಡದ ಅತ್ಯಂತ ದುಬಾರಿ ಹಾಗೂ ಪ್ರಮುಖ ಆಟಗಾರನಾಗಿರುವ ದೀಪಕ್ ಚಹರ್ ಅವರು ಇದುವರೆಗೂ ಒಂದು ಪಂದ್ಯವನ್ನು ಕೂಡ ಆಡಿಲ್ಲ. ಅವರ ಅವಶ್ಯಕತೆ ತಂಡಕ್ಕೆ ಸಾಕಷ್ಟು ಇತ್ತು. ದೀಪಕ್ ಚಹಾರ್ ಅವರ ಕಡೆಯಿಂದ ತಂಡಕ್ಕೆ ಮತ್ತೊಂದು ಬ್ಯಾಡ್ ನ್ಯೂಸ್ ಬಂದಿದೆ. ಅದೇನೆಂದರೆ ದೀಪಕ್ ಚಹರ್ ಅವರು ಎನ್ ಸಿಎ ನಲ್ಲಿ ಫಿಟ್ನೆಸ್ ಟೆಸ್ಟ್ ಹಾಗೂ ಪ್ರಾಕ್ಟೀಸ್ ಅನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಇಂಜುರಿಗೆ ಒಳಗಾಗಿದ್ದರು. ಆದರೆ ಇದು ಬಿಗಡಾಯಿಸಿದ್ದು ಮುಂದಿನ ಪಂದ್ಯಗಳಲ್ಲಿ ಅಂದರೆ ಈ ಬಾರಿಯ ಐಪಿಎಲ್ ನಲ್ಲಿ ದೀಪಕ್ ಚಹರ್ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುವುದು ಸಂಪೂರ್ಣ ಅನುಮಾನ ಎನ್ನುವುದಾಗಿ ಈಗಾಗಲೇ ದೃಢೀಕರಣಗೊಂಡಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ

Get real time updates directly on you device, subscribe now.