ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅನಂತ್ ನಾಗ್ ರವರ ಬದಲಿಗೆ ಪ್ರಕಾಶ್ ರಾಜ್ ಯಾಕೆ; ಈ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??

669

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ರವರೇ ಚಿತ್ರ ವಿಶ್ವಾದ್ಯಂತ 5500 ಕ್ಕೂ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಅತ್ಯಂತ ದೊಡ್ಡ ಮಟ್ಟದ ದಾಖಲೆ ಎಂದು ಹೇಳಬಹುದಾಗಿದೆ. ರಾಕಿಂಗ್ ಸ್ಟಾರ್ ಯಶ್ ರವರು ಕೂಡ ಈಗಾಗಲೇ ಪ್ರತಿಯೊಂದು ರಾಜ್ಯಗಳಲ್ಲಿ ಪ್ರತಿಯೊಂದು ಸ್ಥಳಗಳಲ್ಲಿ ಕೂಡ ಪ್ರಮೋಶನ್ ಕಾರ್ಯವನ್ನು ಕೈಗೊಂಡಿದ್ದಾರೆ. ಚಿತ್ರವನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಸೇರಿಕೊಂಡು ಚಿತ್ರದ ಪ್ರಮೋಷನ್ ಕಾರ್ಯವನ್ನು ಕೂಡ ಚಿತ್ರತಂಡ ಮಾಡಿದೆ. ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ಯಾವುದೇ ವಿಚಾರಗಳನ್ನು ಕೂಡ ಹಿಂದೆ ಬಿಟ್ಟಿಲ್ಲ ಎಲ್ಲವನ್ನೂ ಕೂಡ ಸೇರಿಸಿಕೊಂಡು ಹಿಂದೆಂದೂ ನಡೆಯದಂತಹ ಮುಂದೆಂದೂ ನಡೆಯಲಾರ ದಂತಹ ಪ್ರಮೋಷನ್ ಮಾಡುತ್ತಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಮೊದಲಿನಿಂದಲೂ ಕೂಡ ಕನ್ನಡ ಪ್ರೇಕ್ಷಕರಲ್ಲಿ ಚಿತ್ರದ ಕುರಿತಂತೆ ಒಂದು ಅನುಮಾನ ಕಾಡುತ್ತಿತ್ತು. ಅದೇನೆಂದರೆ ಚಿತ್ರದಲ್ಲಿ ಪ್ರಕಾಶ್ ರಾಜ್ ರವರನ್ನು ಅನಂತನಾಗ್ ಅವರ ಬದಲಿಗೆ ಹಾಕಿಕೊಳ್ಳಲಾಗಿದೆ.

ಈ ಕುರಿತಂತೆ ಸಂದರ್ಶನವೊಂದರಲ್ಲಿ ಯಶ್ ರವರಿಗೆ ಕೂಡ ಪ್ರಶ್ನೆಯನ್ನು ಕೇಳಲಾಯಿತು ಅದಕ್ಕೆ ಅವರು ನೀಡಿದ ಉತ್ತರವೇನು ಎಂದು ತಿಳಿಯೋಣ ಬನ್ನಿ. ಚಿಕ್ಕವಯಸ್ಸಿನಿಂದಲೂ ಕೂಡ ಅನಂತನಾಗ್ ಅವರ ನಟನೆಯನ್ನು ನೋಡಿಕೊಂಡು ಬಂದವನು. ಅವರ ಮುಂದೆ ನಾವು ಚಿಕ್ಕ ಮಕ್ಕಳು. ಕರ್ನಾಟಕದ ಲೆಜೆಂಡ್ ಅನಂತನಾಗ್ ಸರ್ ಅವರು. ಈ ಕುರಿತಂತೆ ನಾನು ಮಾತನಾಡಲು ಇಚ್ಚಿಸುವುದಿಲ್ಲ. ಇಲ್ಲಿ ಪ್ರಕಾಶ್ ರಾಜ್ ರವರನ್ನು ಅನಂತ್ ನಾಗ್ ರವರ ರಿಪ್ಲೇಸ್ ಎಂದು ಅಂದುಕೊಳ್ಳಲಾಗುವುದಿಲ್ಲ. ಅನಂತ್ ನಾಗ್ ಅವರು ಕೆಜಿಎಫ್ ಗೆ ತಂದು ಕೊಟ್ಟ ಘನತೆಯನ್ನು ಬೇರೆ ಯಾವ ಕಲಾವಿದರು ತಂದಿಕೊಟ್ಟಿಲ್ಲ. ಈ ಕುರಿತು ನಾನು ಹೆಚ್ಚು ಮಾತನಾಡುವುದಕ್ಕೆ ಇಷ್ಟ ಪಡುವುದಿಲ್ಲ, ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಥವಾ ನೀವು ಸಿನಿಮಾ ನೋಡಿದ ಮೇಲೆ ಯಾಕೆ ಬದಲಾವಣೆ ಮಾಡಲಾಗಿದೆ ಎಂಬುವುದು ತಿಳಿಯುತ್ತದೆ. ಇದಕ್ಕಾಗಿ ನೀವು ಸಿನಿಮಾವನ್ನು ನೋಡಲೇ ಬೇಕಾಗುತ್ತದೆ. ಅದರಲ್ಲೂ ಈ ವಿಚಾರವನ್ನು ನೀವು ಚಿತ್ರದ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ಅವರ ಬಳಿ ಕೇಳಬೇಕಾಗುತ್ತದೆ ಎಂಬುದಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಪ್ರತಿಕ್ರಿಯಿಸಿದ್ದಾರೆ.

Get real time updates directly on you device, subscribe now.