ಕೊನೆಗೂ ಐಪಿಎಲ್ ಕುರಿತಂತೆ ಸತ್ಯ ಒಪ್ಪಿಕೊಂಡ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಐಪಿಎಲ್ ಕುರಿತು ಹೇಳಿದ್ದೇನು ಗೊತ್ತೇ??

ಕೊನೆಗೂ ಐಪಿಎಲ್ ಕುರಿತಂತೆ ಸತ್ಯ ಒಪ್ಪಿಕೊಂಡ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಐಪಿಎಲ್ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಐಪಿಎಲ್ ಪ್ರಾರಂಭವಾಗಿ ಹಲವಾರು ಲಾಸ್ಟ್ ಓವರ್ ಪಂದ್ಯಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿವೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಕೂಡಾ ಭರಪೂರ ಮನರಂಜನೆಯನ್ನು ಕೂಡ ನೀಡಿವೆ. ಇಂದಿನ ವಿಚಾರದಲ್ಲಿ ಇದೆ ಐಪಿಎಲ್ ಕುರಿತಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕನಾಗಿರುವ ಮೈಕಲ್ ವಾನ್ ನೀಡಿರುವ ಹೇಳಿಕೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೈಕಲ್ ವಾನ್ ಇಂಗ್ಲೆಂಡ್ ತಂಡದ ಮಾಜಿ ನಾಯಕ. ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಹಾಸ್ಯಾಸ್ಪದ ಹೇಳಿಕೆ ನೀಡುತ್ತಲೇ ಇರುತ್ತಾರೆ. ಮೈಕಲ್ ವಾನ್ ಹಾಗೂ ವಾಸಿಂ ಜಾಫರ್ ರವರ ನಡುವೆ ಆಗಾಗ ಟ್ವಿಟರ್ ಸಮರ ನಡೆಯುತ್ತಿರುವುದು ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ನೀವು ನೋಡಿರಬಹುದು. ಆದರೆ ಈಗ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಕ್ರಿಕೆಟ್ ಈಗ ಆಗಿರುವ ಐಪಿಎಲ್ ಕುರಿತಂತೆ ಆಶ್ಚರ್ಯಕರ ಹೇಳಿಕೆಯೊಂದನ್ನು ನೀಡಿದ್ದಾರೆ. ಇಂದಿನ ಲೇಖನಿಯಲ್ಲಿ ಮೈಕಲ್ ವಾನ್ ಐಪಿಎಲ್ ಕುರಿತಂತೆ ನೀಡಿರುವ ಹೇಳಿಕೆ ಏನು ಹಾಗೂ ಆ ಹೇಳಿಕೆ ನೀಡಲು ಕಾರಣ ಏನು ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಇಂಗ್ಲೆಂಡ್ ತಂಡದ ಮಾಜಿ ನಾಯಕನಾಗಿರುವ ಮೈಕಲ್ ವಾನ್ ಐಪಿಎಲ್ ಕ್ರಿಕೆಟ್ ಪಂದ್ಯಗಳಷ್ಟು ಮನರಂಜನೆ ಹಾಗೂ ರೋಮಾಂಚಕ ಅಂತ್ಯವನ್ನು ಕಾಣುವಂತಹ ಬೇರೆ ಕ್ರಿಕೆಟ್ ಲೀಗ್ ಇಡೀ ವಿಶ್ವದಲ್ಲೇ ಇಲ್ಲ ಎಂಬುದಾಗಿ ಹೊಗಳಿದ್ದಾರೆ. ಮೈಕಲ್ ವಾನ್ ಐಪಿಎಲ್ ಟೂರ್ನಮೆಂಟನ್ನು ಹೊಗಳಲು ಕೂಡ ಕಾರಣವೊಂದಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿನ್ನಯ ಪಂದ್ಯಾವಳಿಯಲ್ಲಿ ಪಂಜಾಬ್ ತಂಡದ ವಿರುದ್ಧ ಗುಜರಾತ್ ಕೊನೆಯ ಕ್ಷಣದಲ್ಲಿ ರೋಚಕವಾದ ಗೆಲುವನ್ನು ಸಾಧಿಸಿತು.

ಎರಡು ಬಾಲ್ ಗಳಲ್ಲಿ 2 ಸಿಕ್ಸ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ತಂಡದ ಆಲ್ ರೌಂಡರ್ ಆಗಿರುವ ರಾಹುಲ್ ತೆವಾಟಿಯ ಬ್ಯಾಕ್ ಟು ಬ್ಯಾಕ್ ಕೊನೆಯ ಎರಡು ಎಸೆತಗಳಲ್ಲಿ ಚೆಂಡನ್ನು ಸಿಕ್ಸರ್ ಗೆ ಬಾರಿಸಿ ತಂಡಕ್ಕೆ ರೋಚಕ ಗೆಲುವನ್ನು ದಾಖಲಿಸಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸದ್ದನ್ನು ಮಾಡಿತ್ತು. ಇದು ಎಷ್ಟರಮಟ್ಟಿಗೆ ಸದ್ದು ಮಾಡಿತ್ತು ಎಂದರೆ ಮೈಕಲ್ ವಾನ್ ಕೂಡ ಐಪಿಎಲ್ ಎಲ್ಲಕ್ಕಿಂತ ಅತ್ಯಂತ ಮನರಂಜನೆ ಹಾಗೂ ರೋಚಕ ಪಂದ್ಯಗಳನ್ನು ಉಳ್ಳಂತಹ ಕ್ರಿಕೆಟ್ ಲೀಗ್ ಎಂದು ಒಪ್ಪಿಕೊಳ್ಳುವಂತೆ ಮಾಡಿದೆ.