ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೊಲ್ ಗೆ ಒಳಗಾದ ಮುಂಬೈ ಇಂಡಿಯನ್ಸ್ ತಂಡದ ಖ್ಯಾತ ಆಟಗಾರ; ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೊಲ್ ಗೆ ಒಳಗಾದ ಮುಂಬೈ ಇಂಡಿಯನ್ಸ್ ತಂಡದ ಖ್ಯಾತ ಆಟಗಾರ; ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ನಡೆದಿರುವ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ ಏಳು ವಿಕೆಟ್ ಗಳಿಂದ ಸೋಲಿಸಿದೆ. ಚಾಂಪಿಯನ್ ತಂಡ ಮೊದಲ ಗೆಲುವಿನ ಹುಡುಕಾಟದಲ್ಲಿದ್ದಾಗ ಎಲ್ಲರ ಫೇವರೆಟ್ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋಲಿಸಿದೆ. ಈ ಮೂಲಕ ಟೂರ್ನಮೆಂಟಿನಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಕೂಡ ಸೋತು ಮುಂಬೈ ಇಂಡಿಯನ್ಸ್ ತಂಡ 9ನೇ ಸ್ಥಾನದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನು ನಿನ್ನೆ ನಡೆದ ಪಂದ್ಯ ಹಲವಾರು ವಿಚಾರಗಳಿಗಾಗಿ ಸಾಕ್ಷಿಯಾಗಿದೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗುತ್ತಿದೆ.

ಗ್ಲೇನ್ ಮ್ಯಾಕ್ಸ್ವೆಲ್ ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಬಾರಿಗೆ ನಿನ್ನೆ ಆಡಿದ್ದಾರೆ. ವಿರಾಟ್ ಕೊಹ್ಲಿ ರವರ ಎಲ್ಬಿಡಬ್ಲ್ಯು ಔಟ್ ಕೂಡ ಸಾಕಷ್ಟು ವಿವಾದಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕಾರಣವಾಗಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸಿರಾಜ್ ರವರು ಕೂಡ 51 ರನ್ನುಗಳನ್ನು ನೀಡುವ ಮೂಲಕ ದುಬಾರಿಯಾಗಿದ್ದರು. ಇನ್ನು ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ರವರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವರ ಬ್ಯಾಟಿಂಗ್ ಕೂಡಾ ಪ್ರೇಕ್ಷಕರ ಮನಗೆದ್ದಿದೆ. ಆದರೆ ಈಗ ಆ ಐಪಿಎಲ್ನಲ್ಲಿ ನಡೆದಿರುವ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗನೊಬ್ಬನಿಗೆ ಪ್ರೇಕ್ಷಕರು ಟೀಕೆ ಮಾಡುವಂತಾಗಿದೆ.

ಹೌದು ಐಪಿಎಲ್ ನಲ್ಲಿ ಈ ಬಾರಿ ಬೇಬಿ ಎಬಿ ಡಿವಿಲಿಯರ್ಸ್ ಎಂದು ಕರೆಸಿಕೊಳ್ಳುತ್ತಿರುವ ಸೌತ್ ಆಫ್ರಿಕಾ ಮೂಲದ ಬ್ರೇವಿಸ್ ರವರು 15ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ರವರ ಕ್ಯಾಚನ್ನು ಡ್ರಾಪ್ ಮಾಡುತ್ತಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಬ್ರೇವಿಸ್ ಅವರನ್ನು ಟ್ರೊಲ್ ಮಾಡುವಂತೆ ಮಾಡಿದೆ. ಇವರನ್ನು ಯಾಕೆ ಎಬಿ ಡಿವಿಲಿಯರ್ಸ್ ಎಂಬುದಾಗಿ ಕರೆಯುತ್ತೀರಿ ಅವರ ಒಂದಂಶವೂ ಕೂಡ ಇವರಲ್ಲಿಲ್ಲ ಎಂಬುದಾಗಿ ಟೀಕೆ ಮಾಡುತ್ತಿದ್ದಾರೆ. ಕೆಲವೊಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಟ್ವಿಟರ್ನಲ್ಲಿ ಬ್ರೇವಿಸ್ ರವರನ್ನು ಬೆಂಗಳೂರು ತಂಡದಲ್ಲಿ ಹೋಗಿ ಆಡಿ ಎಂದು ಮೂದಲಿಸುತ್ತಿದ್ದಾರೆ. ಇನ್ನು ಕೆಲವರು ಮುಂದಿನ ಬಾರಿ ಆರ್ಸಿಬಿಗೆ ಆಯ್ಕೆಯಾಗುತ್ತೀರಿ ಎಂದರೆ ಇನ್ನು ಕೆಲವರು ನಿಮ್ಮ ನೆಚ್ಚಿನ ತಂಡ (ಆರ್ಸಿಬಿ) ಯನ್ನು ಗೆಲ್ಲಿಸಬೇಕು ಎಂದು ಹೀಗೆ ಮಾಡುತ್ತಿದಿರಿ ಎಂದಿದ್ದಾರೆ. ಈ ಕುರಿತಂತೆ ನಿಮ್ಮ ರಿಯಾಕ್ಷನ್ ಏನು ಎಂಬುದನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.