ಅಂದು ಸೂರ್ಯಕುಮಾರ್ ಯಾದವ್ ಜೊತೆ ಫುಲ್ ಅಗ್ಗ್ರೆಸ್ಸಿವ್ ಆಗಿದ್ದ ಕೊಹ್ಲಿ, ನಿನ್ನೆಯ ಪಂದ್ಯದಲ್ಲಿ ಮಾಡಿದ್ದೇನು ಗೊತ್ತೇ?? ಇದಕ್ಕೇನಾ ಕಿಂಗ್ ಅನ್ನೋದು??

ಅಂದು ಸೂರ್ಯಕುಮಾರ್ ಯಾದವ್ ಜೊತೆ ಫುಲ್ ಅಗ್ಗ್ರೆಸ್ಸಿವ್ ಆಗಿದ್ದ ಕೊಹ್ಲಿ, ನಿನ್ನೆಯ ಪಂದ್ಯದಲ್ಲಿ ಮಾಡಿದ್ದೇನು ಗೊತ್ತೇ?? ಇದಕ್ಕೇನಾ ಕಿಂಗ್ ಅನ್ನೋದು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ರಾತ್ರಿ ನಡೆದ ಪಂದ್ಯಾಟದಲ್ಲಿ ಐದು ಬಾರಿಯ ಬಲಿಷ್ಠ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಐಪಿಎಲ್ ನ ಬಲಿಷ್ಠ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ರನ್ ಗಳಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ಸೂರ್ಯ ಕುಮಾರ್ ಯಾದವ್ ರಕ್ಷಕನಂತೆ ಬಂದು 68 ರನ್ನುಗಳ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ತಂಡದ ಮೊತ್ತ 150 ರನ್ನುಗಳನ್ನು ದಾಟುವಂತೆ ಮಾಡುತ್ತಾರೆ.

ಈ ಸುಲಭದ ಗುಡಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನುಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ 1.3 ಓವರುಗಳು ಉಳಿದಿರುವಂತೆ ಗೆಲುವಿನ ದಡವನ್ನು ತಲುಪುತ್ತದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಐಪಿಎಲ್ನಲ್ಲಿ ಮೊದಲಿನಿಂದಲೂ ಕೂಡ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಆರೋಗ್ಯಕರ ಕಾಂಪಿಟೇಶನ್ ಇದೆ. ಕಳೆದ ಬಾರಿ ಐಪಿಎಲ್ ನಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ರವರ ನಡುವೆ ಅವ್ಯಕ್ತ ಮಾತಿನಚಕಮಕಿ ನಡೆದಿರುವುದು ನಿಮಗೆಲ್ಲ ತಿಳಿದಿದೆ. ಹೀಗಾಗಿ ಈ ತಂಡಗಳ ನಡುವೆ ಮೊದಲಿನಿಂದಲೂ ಕೂಡ ಯಾರು ಗೆಲ್ಲುತ್ತಾರೆ ಎನ್ನುವ ಕಾಂಪಿಟೇಷನ್ ನಡೆದುಕೊಂಡು ಬಂದಿದೆ.

ಆದರೆ ನಿನ್ನೆ ತಂಡ ಹೀನಾಯ ಸ್ಥಿತಿಯನ್ನು ತಲುಪಿದ್ದಾಗ ಸೂರ್ಯ ಕುಮಾರ್ ಯಾದವ್ ಕ್ರೀಸಿಗೆ ಬಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳನ್ನು ಪರದಾಡುವಂತೆ ಮಾಡಿ ತಂಡ 151 ರನ್ನುಗಳ ಗೌರವಿತ ಮೊತ್ತವನ್ನು ತಲುಪುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ಇನ್ನಿಂಗ್ಸ್ ಮುಗಿಸಿ ಸೂರ್ಯ ಕುಮಾರ್ ಯಾದವ್ ಪೆವಿಲಿಯನ್ಗೆ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ರವರು ಬಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಎಲ್ಲರ ಗಮನ ಸೆಳೆಯಿತು. ವಿಡಿಯೋಗಳು ಕೂಡ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿ ಎಲ್ಲರೂ ಕೂಡ ಇಬ್ಬರ ನಡುವಿನ ಸ್ನೇಹವನ್ನು ಹಾಗೂ ಆಟದ ಕುರಿತಂತೆ ಇರುವಂತಹ ಗೌರವವನ್ನು ಮೆಚ್ಚಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಬಹುದಾಗಿದೆ ವಿರಾಟ್ ಕೊಹ್ಲಿ ರವರ ಈ ಗುಣದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.