ಒಂದೇ ತಂಡದಲ್ಲಿ ಆಟವಾಡಿ ಸ್ನೇಹಿತರಾಗಿ ನಂತರ ಶತ್ರುಗಳಾದವರು ಯಾರ್ಯಾರು ಗೊತ್ತೇ?? ಯಾವೆಲ್ಲ ಕಾರಣಕ್ಕೆ ಶತ್ರುಗಳಾಗಿದ್ದಾರೆ ಗೊತ್ತೇ??

ಒಂದೇ ತಂಡದಲ್ಲಿ ಆಟವಾಡಿ ಸ್ನೇಹಿತರಾಗಿ ನಂತರ ಶತ್ರುಗಳಾದವರು ಯಾರ್ಯಾರು ಗೊತ್ತೇ?? ಯಾವೆಲ್ಲ ಕಾರಣಕ್ಕೆ ಶತ್ರುಗಳಾಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ಷೇತ್ರ ಎಂದರೆ ಅದು ಕ್ರೀಡೆ ಅದರಲ್ಲೂ ಕ್ರಿಕೆಟ್ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಅನ್ನು ಧರ್ಮವೆಂದು ಭಾವಿಸಿದರೆ ಕ್ರಿಕೆಟಿಗರನ್ನು ದೇವರಂತೆ ಭಾವಿಸುವ ಹಲವಾರು ಕ್ರಿಕೆಟ್ ಪ್ರೇಮಿಗಳು ಕೂಡ ನಮ್ಮ ದೇಶದಲ್ಲಿ ಹೆಚ್ಚಿದ್ದಾರೆ. ಇನ್ನು ಕ್ರಿಕೆಟನ್ನು ಹಿಡಿದವರು ಆಂಗ್ಲರೇ ಆದರೂ ಕೂಡ ಕ್ರಿಕೆಟ್ ಹೆಚ್ಚಾಗಿ ಆಚರಣೆಗೆ ಒಳಗಾಗಿರುವುದು ನಮ್ಮ ಭಾರತ ದೇಶದಲ್ಲಿ ಎನ್ನುವುದು ಎಲ್ಲರೂ ಕೂಡ ಒಪ್ಪಿಕೊಳ್ಳಬೇಕಾದಂತಹ ವಿಚಾರ.

ನಮ್ಮ ಭಾರತದೇಶ ಕ್ರಿಕೆಟ್ ವಿಚಾರಕ್ಕೆ ಬಂದರೆ ಹಲವಾರು ದಿಗ್ಗಜರನ್ನು ಕಂಡಿದೆ. ಕಪಿಲ್ ದೇವ್ ಸುನೀಲ್ ಗವಾಸ್ಕಾರ್ ಸಚಿನ್ ತೆಂಡೂಲ್ಕರ್ ಹೀಗೆ ಹಲವಾರು ದಿಗ್ಗಜ ಕ್ರಿಕೆಟಿಗರನ್ನು ನಮ್ಮ ಭಾರತೀಯ ಕ್ರಿಕೆಟ್ ಇತಿಹಾಸ ಕಂಡಿದೆ. ಭಾರತ ಇದುವರೆಗೂ ಎರಡು ಏಕದಿನ ವಿಶ್ವಕಪ್ ಹಾಗೂ ಒಂದು ಟಿ20ವಿಶ್ವಕಪ್ ಪಡೆದಿದೆ. ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಯಾವ ಲೆಕ್ಕಕ್ಕೆ ಇರಲಿಲ್ಲ. ಆದರೆ ಇಂದು ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಂಡುಬರುತ್ತದೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ಸಂಸ್ಥೆಯ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಮೊದಲು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ನೇಹಿತರಾಗಿ ಗುರುತಿಸಿಕೊಂಡು ನಂತರದ ದಿನಗಳಲ್ಲಿ ಶತ್ರುಗಳಾದಂತಹ ಕ್ರಿಕೆಟಿಗರ ಕುರಿತಂತೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ವಿರಾಟ್ ಕೊಹ್ಲಿ – ಗೌತಮ್ ಗಂಭೀರ್; ಶ್ರೀಲಂಕಾ ವಿರುದ್ಧದ ಪಂದ್ಯಾಟದಲ್ಲಿ ವಿರಾಟ್ ಕೊಹ್ಲಿ ರವರು 107 ರನ್ ಬಾರಿಸಿದರು ಇದೇ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರು 150 ರನ್ನುಗಳು ಬಾರಿಸಿ ಅಜೇಯರಾಗಿ ಉಳಿದುಕೊಂಡಿದ್ರು. ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಕೂಡ ಗೌತಮ್ ಗಂಭೀರ್ ಅವರು ಪಾತ್ರರಾಗುತ್ತಾರೆ. ಈ ಸಂದರ್ಭದಲ್ಲಿ ಅವಾರ್ಡ್ ಅನ್ನು ವಿರಾಟ್ ಕೊಹ್ಲಿ ರವರಿಗೆ ನೀಡಿದಾಗ ಎಲ್ಲರೂ ಕೂಡ ಇವರಿಬ್ಬರ ನಡುವಿನ ಸ್ನೇಹ ಸಂಬಂಧವನ್ನು ನೆಚ್ಚಿಕೊಂಡು ಹೊಗಳುತ್ತಾರೆ.

ಆದರೆ 2013 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ರವರು ಔಟಾದಾಗ ಕೊಲ್ಕತ್ತಾ ತಂಡದವರು ಅದರಲ್ಲೂ ಗೌತಮ್ ಗಂಭೀರ್ ಅವರು ಅವರನ್ನು ಔಟಾದಾಗ ಆಡಿಕೊಂಡ ರೀತಿಗೆ ಕೋಪಗೊಳ್ಳುತ್ತಾರೆ. ಇದರ ನಂತರ ಇಬ್ಬರ ನಡುವೆ ಸಾವಿರಾರು ಜನ ಪ್ರೇಕ್ಷಕರ ಸಮ್ಮುಖದಲ್ಲಿ ದೊಡ್ಡ ಮಟ್ಟದ ಜಗಳ ಗ್ರೌಂಡ್ನಲ್ಲಿ ನಡೆಯುತ್ತದೆ. ಇದಾದ ನಂತರ ಅವರಿಬ್ಬರು ಮತ್ತೆ ಎದುರುಬದುರಾಗಿ ಮಾತನಾಡಿದ್ದೇ ಇಲ್ಲ. ದ್ವೇಷ ಎನ್ನುವುದು ಇನ್ನೂ ಕೂಡ ಹಾಗೆ ಇದೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ.

ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್; ಪ್ರಾರಂಭದ ದಿನಗಳಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ರವರು ನಿಭಾಯಿಸಿಕೊಂಡು ಬರುತ್ತಿದ್ದರು. ಹೀಗಾಗಿ ಸಹಜವಾಗಿಯೇ ಇವರಿಬ್ಬರ ನಡುವೆ ಗಾಢ ಸ್ನೇಹ ಏರ್ಪಟ್ಟಿತ್ತು. 2011 ರ ವಿಶ್ವಕಪ್ ನಲ್ಲಿ ಕೂಡ ಇವರಿಬ್ಬರ ಸ್ನೇಹ ಕುರಿತಂತೆ ಎಲ್ಲರೂ ಹೊಗಳಿದ್ದರು. ಆದರೆ 2015 ರ ವಿಶ್ವಕಪ್ ನಂತರ ಇವರ ಸ್ನೇಹದಲ್ಲಿ ಬಿರುಕು ಬಿಟ್ಟಿತ್ತು ಕಾರಣ ಯುವರಾಜ್ ಸಿಂಗ್ ಅವರ ಕೆಟ್ಟ ಫಾರ್ಮ್ ಕೂಡ ಆಗಿತ್ತು‌. ಯುವರಾಜ್ ಸಿಂಗ್ ರವರು ತಂಡದಿಂದ ಹೊರಗೆ ಹೋಗಲು ಮಹೇಂದ್ರ ಸಿಂಗ್ ಧೋನಿಯವರ ಕಾರಣ ಎಂಬುದಾಗಿ ಯುವರಾಜ್ ಸಿಂಗ್ ರವರ ತಂದೆ ಯೋಗರಾಜ್ ಸಿಂಗ್ ಕೂಡ ಹೇಳಿಕೊಂಡಿದ್ದರು. ಪರೋಕ್ಷವಾಗಿ ಯುವರಾಜ್ ಸಿಂಗ್ ರವರು ಕೂಡ ತನ್ನ ಕೆಟ್ಟ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ನನಗೆ ಸಹಾಯ ಮಾಡಲಿಲ್ಲ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರಂತೆ.

ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್; ಇಬ್ಬರೂ ಕೂಡ ತಮಿಳುನಾಡಿನಿಂದ ಬಂದವರು ಹಾಗೂ ತಮಿಳುನಾಡು ರಣಜಿ ತಂಡಕ್ಕೆ ಜೊತೆಯಾಗಿ ಆಡಿದವರು. ಒಮ್ಮೆ ದಿನೇಶ್ ಕಾರ್ತಿಕ್ ರವರು ತಮ್ಮ ಪತ್ನಿ ನಿಖಿತಾರನ್ನು ಮುರಳಿ ವಿಜಯ್ ಅವರಿಗೆ ಪರಿಚಯ ಮಾಡುತ್ತಾರೆ. ಅದಾದ ನಂತರ ಇಬ್ಬರ ನಡುವೆ ಕೂಡ ಅನೈ’ತಿಕ ಸಂಬಂಧ ಎನ್ನುವುದು ಹೆಚ್ಚಾಗಿ ಬೆಳೆಯುತ್ತ ಹೋಯಿತು. ಇದರ ಸುದ್ದಿ ದಿನೇಶ್ ಕಾರ್ತಿಕ್ ರವರಿಗೆ ತಿಳಿಯುತ್ತಿದ್ದಂತೆ ನಿಖಿತಾ ರವರಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ನಂತರ ನಿಖಿತಾ ಮುರಳಿ ವಿಜಯ್ ಅವರನ್ನು ಮದುವೆಯಾಗುತ್ತಾರೆ. ಇಂದಿಗೂ ಕೂಡ ಪರಸ್ಪರ ಒಬ್ಬರ ಮುಖ ಇನ್ನೊಬ್ಬರು ನೋಡಲು ಇಷ್ಟಪಡುವುದಿಲ್ಲ. ಇವರೇ ಸ್ನೇಹದಿಂದ ತಮ್ಮ ಸಂಬಂಧವನ್ನು ದ್ವೇಷಕ್ಕೆ ತಿರುಗಿಸಿಕೊಂಡ ಆಟಗಾರರು.