ಬ್ಯಾಟಿಂಗ್ ವೈಫಲ್ಯ ಕಂಡು ಪಂದ್ಯ ಸೋತರೂ ನೆಟ್ಟಿಗರ ಮನಗೆಲ್ಲುತ್ತಿರುವ ಕನ್ನಡಿಗ ಮಾಯಾಂಕ್ ಅಗರವಾಲ್, ಅಷ್ಟಕ್ಕೂ ಯಾಕೆ ಗೊತ್ತೇ??

ಬ್ಯಾಟಿಂಗ್ ವೈಫಲ್ಯ ಕಂಡು ಪಂದ್ಯ ಸೋತರೂ ನೆಟ್ಟಿಗರ ಮನಗೆಲ್ಲುತ್ತಿರುವ ಕನ್ನಡಿಗ ಮಾಯಾಂಕ್ ಅಗರವಾಲ್, ಅಷ್ಟಕ್ಕೂ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂದರೇ ಕೇವಲ ಹೊಡಿಬಡಿ ಆಟವಲ್ಲ.ಅಲ್ಲಿ ಹಲವಾರು ಭಾವನಾತ್ಮಕ ಸನ್ನಿವೇಶಗಳು ಏರ್ಪಡುತ್ತದೆ. ಈ ಭಾರಿಯ ಐಪಿಎಲ್ ಸಹ ಅಂತಹ ಹಲವಾರು ಘಟನೆಗಳು ನಡೆಯುತ್ತಿವೆ. ಅದರಲ್ಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಾಯಾಂಕ್ ಅಗರವಾಲ್ ಮೈದಾನದಲ್ಲಿ ತೋರಿದ ಎರಡು ವರ್ತನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರು ಸಹ ಮಾಯಾಂಕ್ ಅಗರವಾಲ್ ರವರನ್ನು ನಿಜವಾದ ಕ್ರೀಡಾ ಸ್ಪೂರ್ತಿಯುಳ್ಳ ನಾಯಕ ಎಂದು ಶ್ಲಾಘಿಸುತ್ತಿದ್ದಾರೆ. ಬನ್ನಿ ಮಾಯಾಂಕ್ ಅಗರವಾಲ್ ಮೈದಾನದಲ್ಲಿ ತೋರಿದ ಎರಡು ಕ್ರೀಡಾ ಸ್ಫೂರ್ತಿಯ ಘಟನೆಗಳು ಯಾವುವು ಎಂದು ನೋಡೋಣ.

ಘಟನೆ 1- ಆರ್ಸಿಬಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 205 ರನ್ ಗಳ ಬೃಹತ್ ಟಾರ್ಗೆಟ್ ಎದುರಾಗಿತ್ತು. ಆಗ ಚೇಸ್ ಮಾಡುವ ವೇಳೆ, ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದ ಅಂಡರ್ 19 ತಂಡದ ಆಟಗಾರ ರಾಜ್ ಬಾವಾ ಬ್ಯಾಟಿಂಗ್ ನಲ್ಲಿದ್ದರು. ಆದರೇ ಮೊದಲ ಎಸೆತದಲ್ಲಿಯೇ ರಾಜ್ ಬಾವಾ ಔಟ್ ಆಗಬೇಕಾಯಿತು. ಆಗ ಬೇಸರದಿಂದ ಪೆವಿಲಿಯನ್ ಗೆ ಆಗಮಿಸಿದ ರಾಜ್ ಬಾವಾ ಗೆ ಮಾಯಾಂಕ್ ಅಗರವಾಲ್ ಸಂತೈಸಿದರು. ಇದು ನಾಯಕನ ಕ್ರೀಡಾ ಸ್ಫೂರ್ತಿ ಎಂದು ಎಲ್ಲೆಡೆ ಮೆಚ್ಚುಗೆ ಗಳಿಸಿತು.

ಘಟನೆ 2 : ನಿನ್ನೆ ನಡೆದ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 12 ರನ್ ಬೇಕಿತ್ತು. ಕ್ರೀಸ್ ನಲ್ಲಿದ್ದ ರಾಹುಲ್ ತೆವಾಟಿಯಾ , ಬೌಲರ್ ಓಡೆನ್ ಸ್ಮಿತ್ ರ ಎರಡು ಎಸೆತಗಳನ್ನು ಸಿಕ್ಸರ್ ಗಟ್ಟಿದರು. ಇದರಿಂದ ಪಂಜಾಬ್ ತಂಡ ಸೋಲಬೇಕಾಯಿತು. ಆಗ ಬೌಲರ್ ಒಡೆನ್ ಸ್ಮಿತ್ ಮೈದಾನದಲ್ಲಿ ಕುಸಿದು ಕುಳಿತರು. ಆಗ ಮಾಯಾಂಕ್ ಅಗರವಾಲ್ ಬೌಲರ್ ಸ್ಮಿತ್ ಗೆ ಸಮಾಧಾನ ಮಾಡಿದ್ದಲ್ಲದೆ, ಹೊರಗಡೆ ಸ್ಪೂರ್ತಿ ತುಂಬುವ ಮಾತನಾಡಿದರು. ಇದು ಒಬ್ಬ ನಾಯಕನ ಜವಾಬ್ದಾರಿ. ಎಲ್ಲೆಡೆ ಆ ಪಿಕ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.