ಸಿ.ಎಸ್.ಕೆ ಸೇರಿಕೊಳ್ಳಿ ಎಂದು ಮನವಿ ಮಾಡಿದ ಅಭಿಮಾನಿಗೆ ವ್ಯಂಗ್ಯದ ಮೂಲಕ ಉತ್ತರ ನೀಡಿದ ಅಮಿತ್ ಮಿಶ್ರಾ, ಸಿ.ಎಸ್.ಕೆ ಫ್ಯಾನ್ಸ್ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ?

ಸಿ.ಎಸ್.ಕೆ ಸೇರಿಕೊಳ್ಳಿ ಎಂದು ಮನವಿ ಮಾಡಿದ ಅಭಿಮಾನಿಗೆ ವ್ಯಂಗ್ಯದ ಮೂಲಕ ಉತ್ತರ ನೀಡಿದ ಅಮಿತ್ ಮಿಶ್ರಾ, ಸಿ.ಎಸ್.ಕೆ ಫ್ಯಾನ್ಸ್ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ಬಾರಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಕ್ಔಟ್ ಗೆ ಖಂಡಿತವಾಗಿ ತೆರಳುವಂತಹ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತವಾಗಿ ಆಡಿದ ಮೊದಲ ಮೂರು ಪಂದ್ಯಗಳನ್ನು ಕೂಡ ಸೋತು ಸುಣ್ಣವಾಗಿದೆ ಎಂದು ಹೇಳಬಹುದಾಗಿದೆ. ಇದಕ್ಕೆ ನಾಯಕತ್ವದ ಬದಲಾವಣೆ ಕೂಡ ಕಾರಣವಾಗಿರಬಹುದು ಎಂದು ಹೇಳಬಹುದು. ಈ ಟೂರ್ನಿಯ ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಸಿಂಗ್ ಜಡೇಜಾ ರವರು ನಾಯಕತ್ವವನ್ನು ವಹಿಸಿಕೊಂಡಿದ್ದರು.

ತಂಡದ ಪ್ರಮುಖ ಆಟಗಾರನಾಗಿರುವ ಡುಪ್ಲೆಸಿಸ್ ಕೂಡ ತಂಡದಿಂದ ಹೊರ ಹೋಗಿದ್ದಾರೆ. ಪ್ರಮುಖ ಬೌಲರ್ ಆಗಿರುವ ದೀಪಕ್ ಚಹರ್ ಕೂಡಲ ಬೇಕಾಗಿರುವುದು ಮತ್ತೊಂದು ಬೇಸರದ ವಿಚಾರವಾಗಿದೆ. ಅದೇನೇ ಇರಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿ ಬರುವುದು ಬಹುತೇಕ ಅಸಾಧ್ಯ ಎಂದು ಕಾಣಿಸುತ್ತಿದೆ. ತಂಡದಲ್ಲಿ ಖ್ಯಾತನಾಮರ ಸೇರ್ಪಡೆ ಕೂಡ ಇಲ್ಲದೆ ಇರುವುದು ಮತ್ತಷ್ಟು ಚಿಂತೆಗೀಡುಮಾಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ನಾಗಿರುವ ಅಮಿತ್ ಮಿಶ್ರಾ ಟೀಕೆ ಮಾಡಿ ಈಗ ಸುದ್ದಿಯಲ್ಲಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ವ್ಯಂಗ್ಯವಾದ ಉತ್ತರವನ್ನು ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಿದ್ದಾರೆ ಅಮಿತ್ ಮಿಶ್ರಾ. ಅಷ್ಟಕ್ಕೂ ಅಭಿಮಾನಿ ಕೇಳಿದ್ದು ಏನು ಹಾಗೂ ಅಮಿತ್ ಮಿಶ್ರಾ ನೀಡಿದ ಉತ್ತರ ಏನು ಎಲ್ಲವನ್ನೂ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅಮಿತ್ ಮಿಶ್ರಾ ಆಶಿಶ್ ನೆಹ್ರರವರ ಫೋಟೋವನ್ನು ಹಾಕಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಿ ಎನ್ನುವುದಾಗಿ ಕೇಳುತ್ತಾರೆ. ಆಗ ಅಮಿತ್ ಮಿಶ್ರಾರವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲು ನಾನು ಎರಡು ವರ್ಷ ಚಿಕ್ಕವನು ಎನ್ನುವುದಾಗಿ ಉತ್ತರಿಸುತ್ತಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಯಸ್ಸಾದವರ ತಂಡ ಎನ್ನುವುದಾಗಿ ಪರೋಕ್ಷವಾಗಿ ಟೀಕಿಸಿದ್ದಾರೆ. ಇದರಿಂದ ಚೆನ್ನೈ ಸೂಪರ್ ಕಿಂಗ್ ತಂಡದ ಅಭಿಮಾನಿಗಳು ಸಹಜವಾಗಿ ಅಮಿತ್ ಮಿಶ್ರಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಮಿತ್ ಮಿಶ್ರಾ ಅವರು ನೀಡಿರುವ ಈ ವ್ಯಂಗ್ಯವಾದ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರವಾದ ಪ್ರತಿಕ್ರಿಯೆ ಸಿಕ್ಕಿದೆ. ಚೆನ್ನೈ ಅಭಿಮಾನಿಗಳು ಅಮಿತ್ ಮಿಶ್ರ ವಿರುದ್ಧ ಸಿಟ್ಟಿಗೆದ್ದಿದ್ದರೆ ಇತ್ತಕಡೆ ಬೇರೆ ಅಭಿಮಾನಿಗಳು ಅಮಿತ್ ಮಿಶ್ರಾ ಅವರು ಇರುವ ಸತ್ಯವನ್ನು ಹೇಳಿದ್ದಾರೆ ಎನ್ನುವುದಾಗಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.