ಈಗಿನ ಕಾಲ ಬಿಡಿ, ಅಂದಿನ ಹಳೆ ಕಾಲದಲ್ಲಿಯೇ ನಾಗರಹಾವು ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಗೊತ್ತೇ?? ಹಳೆ ಕಾಲದಲ್ಲಿಯೇ ಎಷ್ಟು ಮಾಡಿತ್ತು ಗೊತ್ತೇ??

ಈಗಿನ ಕಾಲ ಬಿಡಿ, ಅಂದಿನ ಹಳೆ ಕಾಲದಲ್ಲಿಯೇ ನಾಗರಹಾವು ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಗೊತ್ತೇ?? ಹಳೆ ಕಾಲದಲ್ಲಿಯೇ ಎಷ್ಟು ಮಾಡಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ 80ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಇಲ್ಲಿಯವರೆಗೆ ಅದೆಷ್ಟು ನಯನಮನೋಹರ ಸಿನಿಮಾಗಳು ಪ್ರೇಕ್ಷಕರ ಕಣ್ಮನಗಳನ್ನು ಗೆದ್ದಿವೆ. ಕೆಲವು ಕಥೆಯ ಮೂಲಕ ಗೆದ್ದರೆ ಇನ್ನು ಕೆಲವು ಮೇಕಿಂಗ್ ಮೂಲಕ ಗೆದ್ದಿವೆ. ಈಗಾಗಲೇ ಅದೆಷ್ಟು ಸಾವಿರ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿವೆ. ಪ್ರತಿಯೊಂದು ಸಿನಿಮಾಗೂ ಕೂಡ ಅದರದ್ದೇ ಆದಂತಹ ಇತಿಹಾಸ ಹಾಗೂ ಹಿನ್ನೆಲೆ ಇದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಐಕಾನಿಕ್ ಎನಿಸುವಂತಹ ಹಲವಾರು ಸಿನಿಮಾಗಳು ಕೂಡ ಇವೆ. ಅದರಲ್ಲೂ ಈಗ ನಾವು ಮಾತನಾಡಲು ಹೊರಟಿರುವುದು ನಮ್ಮ ಕನ್ನಡ ಚಿತ್ರರಂಗದ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ ಆಗಿರುವ ನಾಗರಹಾವು ಸಿನಿಮಾದ ಕುರಿತಂತೆ.

ನಾಗರಹಾವು ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಕನ್ನಡಚಿತ್ರರಂಗದಲ್ಲಿ ಹಾಗೂ ಸಿನಿಮಾ ನಿರ್ಮಾಣ ಮಾಡುವವರಲ್ಲಿ ಸೃಷ್ಟಿಸಿ ದಂತಹ ಸಿನಿಮಾ ಆಗಿತ್ತು. ಯಾಕೆಂದರೆ ಇಂತಹ ಆಂಗ್ರಿ ಯಂಗ್ ಮ್ಯಾನ್ ಸಬ್ಜೆಕ್ಟ್ ಅಂದಿನ ಕಾಲದಲ್ಲಿ ಸೂಪರ್ ಫ್ರೆಶ್ ಆಗಿತ್ತು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರಂತಹ ಅದ್ಭುತ ಪ್ರತಿಭೆಗಳು ಸಿಕ್ಕರು ಎಂದು ಹೇಳಬಹುದಾಗಿದೆ. ಇನ್ನು ಇವರಿಬ್ಬರನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಚಿತ್ರಬ್ರಹ್ಮ ಆಗಿರುವ ಪುಟ್ಟಣ್ಣ ಕಣಗಾಲ್ ಅವರು.

ನಿರ್ದೇಶಕರಾಗಿ ಪುಟ್ಟಣ್ಣ ಕಣಗಾಲ್ ಕೂಡ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ರಾಜಮೌಳಿ ಹೇಗೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಬ್ರ್ಯಾಂಡ್ ಹೊಂದಿದ್ದಾರೋ ಅದೇ ರೀತಿ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಕಣಗಾಲ್ ಸ್ವಂತ ಬ್ರಾಂಡ್ ಹೊಂದಿದ್ದರು.

ಇನ್ನು ನಾಗರಹಾವು ಚಿತ್ರವನ್ನು ಹೇಳುವುದಾದರೆ ಈ ಚಿತ್ರದಲ್ಲಿ ಐಕಾನಿಕ್ ಪಾತ್ರಗಳಾಗಿರುವ ರಾಮಾಚಾರಿ ಜಲೀಲಾ ಚಾಮಯ್ಯ ಮೇಷ್ಟ್ರು ಅಲಮೇಲು ಮಾರ್ಗರೇಟ್ ಪಾತ್ರೆಗಳು ಪ್ರೇಕ್ಷಕರ ಅಚ್ಚುಮೆಚ್ಚಿನ ಪಾತ್ರಗಳ ಆಗಿದ್ದು ಇಂದಿಗೂ ಕೂಡ ಇವು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಫಿಲಂ ಮೇಕಿಂಗ್ ಅಧ್ಯಾಯ ಪ್ರಾರಂಭವಾಯಿತು ಎಂದರೆ ತಪ್ಪಾಗಲಾರದು.

ಇಂದಿನ ಸಿನಿಮಾಗಳು ಸ್ಟಾರ್ ನಟರನ್ನು ಹಾಕಿಕೊಂಡು ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುತ್ತೇವೆ ಆದರೆ, ನಾಗರಹಾವು ಚಿತ್ರ ಇತ್ತೀಚೆಗಷ್ಟೇ ಅಂದರೆ ಕೆಲವು ವರ್ಷಗಳ ಹಿಂದೆಯಷ್ಟೇ ಲೇಟೆಸ್ಟ್ ಕಲರಿಂಗ್ ಮಾಡಿಕೊಂಡು ಮರು ಬಿಡುಗಡೆ ಆಗಿದ್ದ ಸಂದರ್ಭದಲ್ಲಿ ಕೂಡ ಮಾಡಿದ ಮೊದಲ ದಿನದ ಕಲೆಕ್ಷನ್ ಕೇಳಿದರೆ ನೀವು ಕೂಡ ತಬ್ಬಿಬ್ಬಾಗುತ್ತೀರಿ. ಹೌದು ಇತ್ತೀಚಿನ ವರ್ಷಗಳಲ್ಲಿ ಮರು ಬಿಡುಗಡೆಯಾಗಿರುವ ನಾಗರಹಾವು ಚಿತ್ರ ಮೊದಲ ದಿನದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಬರೋಬ್ಬರಿ ಒಂದು ಕೋಟಿ ಗೂ ಅಧಿಕ ಕಲೆಕ್ಷನ್ ಮಾಡಿದೆ. ನಿಜಕ್ಕೂ ಕೂಡ ಈ ವಿಚಾರ ಎಲ್ಲರೂ ಮೆಚ್ಚುವಂತದ್ದು.