ಅನಂತ್ ನಾಗ್ ಹಾಗೂ ವಿಷ್ಣುವರ್ಧನ್ ಒಟ್ಟಿಗೆ ನಟನೆ ಮಾಡಲು ಅದೆಷ್ಟು ವರ್ಷ ಕಾಯಬೇಕಾಯಿತು ಗೊತ್ತೇ?? ಆತ್ಮೀಯರಾಗಿದ್ದರೂ ಎಷ್ಟು ವರ್ಷ ಕಾಯಬೇಕಾಯಿತು ಗೊತ್ತೇ??

ಅನಂತ್ ನಾಗ್ ಹಾಗೂ ವಿಷ್ಣುವರ್ಧನ್ ಒಟ್ಟಿಗೆ ನಟನೆ ಮಾಡಲು ಅದೆಷ್ಟು ವರ್ಷ ಕಾಯಬೇಕಾಯಿತು ಗೊತ್ತೇ?? ಆತ್ಮೀಯರಾಗಿದ್ದರೂ ಎಷ್ಟು ವರ್ಷ ಕಾಯಬೇಕಾಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು ತಮ್ಮ ಛಾಪನ್ನು ಮೂಡಿಸಿದ್ದಾರೆ. ತಾವು ಇಲ್ಲವಾದರೂ ತಮ್ಮ ಹೆಸರನ್ನ ನೆನಪಿಟ್ಟುಕೊಳ್ಳುವಂಥ ಚಿತ್ರಗಳನ್ನು ನೀಡಿದ್ದಾರೆ. ಇದು ಆಗಿ ಹೋದವರ ಬಗ್ಗೆಯಾದರೆ ಇನ್ನೂ ಹಲವು ನಟರು ತಾವು ಕನ್ನಡ ಚಿತ್ರರಂಗಕ್ಕೆ ಬಂದು ಅದೆಷ್ಟು ವರ್ಷಗಳಾದರೂ ಇಂದಿಗೂ ಚಿತ್ರರಂಗದಲ್ಲಿ ಉತ್ತಮ ಹೆಸರು ಇಟ್ಟುಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಚಿತ್ರಗಳಲ್ಲಿ ಇಂದಿಗೂ ನಟಿಸುತ್ತಿದ್ದಾರೆ. ಅಂತಹ ಮೋಹಕ ನಟರಲ್ಲಿ ನಟ ಅನಂತನಾಗ್ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ಚಿತ್ರರಂಗಕ್ಕೆ ಬಂದು ೪೮ ವರ್ಷಗಳು ಕಳೆದರೂ ಅವರ ಮುಖದಲ್ಲಿ ಅದೇ ಚಾರ್ಮ್!

ಆಡು ಮುಟ್ಟದ ಸೊಪ್ಪಿಲ್ಲ ಅಂತಾರಲ್ಲ, ಹಾಗೆ ಅನಂತನಾಗ್ ಅವರು ನಟಿಸದ ಚಿತ್ರಗಳು ಇಲ್ಲ. ಹಲವಾರು ವಿಭಿನ್ನ ಪಾತ್ರಗಳನ್ನ ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದವರು ಅನಂತ ನಾಗ್ ಅವರು. ಅವರ ಸಹೋದರ ನಟ ಶಂಕರ್ನಾಗ್ ಅವರನ್ನಂತೂ ನಾವು ಮರೆಯಲು ಸಾಧ್ಯವೇ ಇಲ್ಲ. ಆದರೆ ಅವರ ಸ್ಥಾನವನ್ನೂ ಕೂಡ ತುಂಬಬಲ್ಲ ಶಕ್ತಿ ನಮ್ಮ ಅನಂತನಾಗ್ ಅವರಿಗಿದೆ. ’ಮುದುಡಿದ ತಾವರೆ ಅರಳಿತು’, ’ಮನೆಯೇ ಮಂತ್ರಾಯಲ’, ’ಬೆಂಕಿಯ ಬಲೆ’,ಚಂದನದ ಗೊಂಬೆ’, ’ಇಬ್ಬನಿ ಕರಗಿತು’, ’ಹಂಸಗೀತೆ’, ’ಗಗನ’, ’ಮುಳ್ಳಿನ ಗುಲಾಬಿ’, ’ಗಣೇಶನ ಮದುವೆ’, ’ಗಣೇಶನ ಗಲಾಟೆ’ ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ನಟ ಅನಂತನಾಗ್.

ಇನ್ನು ನಟ ಅನಂತನಾಗ್ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿದ್ದಾರೆ. ಅಂದಿನ ಸ್ಟಾರ್ ನಟರಿಂದ ಹಿಡಿದು ಇಂದಿನ ಸ್ಟಾರ್ ನಟರ ವರೆಗೆ ಎಲ್ಲರೊಂದಿಗೆ ತೆರೆಹಂಚಿಕೊಂಡ ಹಿರಿಮೆ ಅವರದ್ದು. ’ಮತ್ತೆ ಹಾಡಿತು ಕೋಗಿಲೆ’ ಯಂಥ ಸಿನಿಮಾವನ್ನ ನೆನಪಿಸಿಕೊಂಡ್ರೆ ಅನಂತನಾಗ್ ತಮ್ಮ ಸಹ ನಟರೊಂದಿಗೂ ಎಂಥ ಅತ್ಯುತ್ತಮ ಬಾಂಧವ್ಯವನ್ನ ಹೊಂದಿದ್ದರು ಎನ್ನೋದು ಅರ್ಥವಾಗತ್ತೆ.

ನಟ ಅನಂತನಾಗ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರು ತೆರೆ ಹಂಚಿಕೊಂಡಿದ್ದು ಮತ್ತೆ ಹಾಡಿತು ಕೋಗಿಲೆ ಹಾಗೂ ಚಿತ್ರಗಳಲ್ಲಿ. ಇವರಿಬ್ಬರ ಸ್ನೇಹಕ್ಕೆ ಸಾಕ್ಷಿಯೇ ಮತ್ತೆ ಹಾಡಿತು ಕೋಗಿಲೆ ಎನ್ನಬಹುದು. ಚಿ. ಉದಯಶಂಕರ್ ಅವರ ಕಥೆ ಇದು. ೧೯೯೦ರಲ್ಲಿ ತೆರೆಕಂಡ ಈ ಚಿತ್ರಕ್ಕೆ ರಾಜನ್ ನಾಗೇಂದ್ರ ಅವರ ಸಂಗೀತವಿತ್ತು. ಈ ಚಿತ್ರದಲ್ಲಿ ಅನಂತನಾಗ್ ಹಾಗೂ ವಿಷ್ಣುವರ್ಧನ್ ಇಬ್ಬರಿಗೂ ಪ್ರಮುಖ ಪಾತ್ರ. ಆಗಿನ ಕಾಲದ ದಿಗ್ಗಜ ನಟ ನಟಿಯರು ಇದರಲ್ಲಿ ನಟಿಸಿದ್ದಾರೆ. ಡಾ. ವಿಷ್ಣುವರ್ಧನ್ ಆರು ೧೯೭೦ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ರೆ ಅನಂತನಾಗ್ ಅವರು ಚಿತ್ರರಂಗ ಪ್ರವೇಶ ಮಾಡಿದ್ದು ೧೯೭೩ರಲ್ಲಿ. ಅಂದರೆ ಕೇವಲ ೩ ವರ್ಷಗಳ ಅಂತರವಷ್ಟೇ. ಆದ್ರೆ, ಇವರಿಬ್ಬರೂ ಜೊತೆಯಾಗಿ ಒಂದೇ ಚಿತ್ರದಲ್ಲಿ ನಟಿಸುವುದಕ್ಕೆ ಮಾತ್ರ ಬರೋಬ್ಬರಿ ೧೭ ವರ್ಷಗಳು ಕಾಯಬೇಕಾಯ್ತು.

ಹೌದು ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ ಇವರಿಬ್ಬರ ಪಾತ್ರವೂ ಅದ್ಭುತ. ಅದರಲ್ಲೂ ವಿಷ್ಣು, ಅನಂತನಾಗ್ ಹಾಗು ಬೇಬಿ ಶ್ಯಾಮಿಲಿ ಈ ಮೂವರ ತಂದೆ ಮಗುವಿನ ಅನುರಾಗ ಅದೆಷ್ಟು ಭಾವನಾತ್ಮಕವಾಗಿ ಚಿತ್ರೀಕರಿಸಿದ್ದಾರೆ ಎಂದರೆ ಪ್ರತಿ ಬಾರಿ ಈ ಚಿತ್ರ ನೋಡಿದಾಗ ಕಣ್ಣಂಚು ಒದ್ದೆಯಾಗತ್ತೆ. ಇದಾದ ಬಳಿಕ ನಿಷ್ಕರ್ಷದಲ್ಲಿಯೂ ಈ ಜೋಡಿ ಒಂದಾಗುತ್ತೆ. ಹೆಚ್ಚು ಚಿತ್ರಗಳಲ್ಲಿ ಅನಂತನಾಗ್ ಹಾಗೂ ವಿಷ್ಣುವರ್ಧನ್ ಕಾಣಿಸಿಕೊಂಡಿಲ್ಲವಾದರೂ ಇವರಿಬ್ಬರ ಸ್ನೇಹಕ್ಕೆ ಮಾತ್ರ ಸರಿಸಾಟಿಯೇ ಇಲ್ಲ. ಪ್ರಸ್ತುತ ಅನಂತನಾಗ್ ಅವರು ಹಲವು ನಟರು ನಮ್ಮೊಂದಿಗಿಲ್ಲ ಎನ್ನುವ ಖಾಲಿ ಜಾಗವನ್ನು ಅಕ್ಷರಶಃ ಭರ್ತಿ ಮಾಡಿದ್ದಾರೆ.