ಮತ್ತೊಂದು ಇತಿಹಾಸ ಸೃಷ್ಟಿಸಿದ ಕಾಶ್ಮೀರಿ ಫೈಲ್ಸ್, ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿ ಬಾಚಿದ್ದು 200 ಮುನ್ನೂರು ಕೋಟಿಯಲ್ಲ. ಮತ್ತೆಷ್ಟು ಗೊತ್ತೇ??

ಮತ್ತೊಂದು ಇತಿಹಾಸ ಸೃಷ್ಟಿಸಿದ ಕಾಶ್ಮೀರಿ ಫೈಲ್ಸ್, ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿ ಬಾಚಿದ್ದು 200 ಮುನ್ನೂರು ಕೋಟಿಯಲ್ಲ. ಮತ್ತೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕಮರ್ಷಿಯಲ್ ಸಿನಿಮಾಗಳ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಕಾಮನ್. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಸತ್ಯ ಘಟನೆ ಆಧಾರಿತ ಸಿನಿಮಾದ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ದ ಕಾಶ್ಮೀರಿ ಫೈಲ್ಸ್ ಸಿನಿಮಾದ ಕುರಿತಂತೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದೆ.

ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಚಿತ್ರರಂಗದ ಹಿರಿಯ ನಟರಾಗಿರುವ ಅನುಪಮ್ ಖೇರ್ ಹಾಗೂ ಮಿಥುನ್ ಚಕ್ರವರ್ತಿ ಅವರು ನಟಿಸಿದ್ದಾರೆ. 90ರ ಸಮಯದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದಂತಹ ಅನ್ಯಾಯದ ಕುರಿತಂತೆ ಸಂಪೂರ್ಣವಾಗಿ ಬೆಳಕು ಚೆಲ್ಲಿರುವ ಚಿತ್ರವಾಗಿದೆ. ಕಾಶ್ಮೀರದಿಂದ ಹಿಂದೂ ಪಂಡಿತರನ್ನು ಮುಗಿಸಿ ಮತಾಂತರ ಮಾಡಿಸಿ ಓಡಿಸಿರುವಂತಹ ನೈಜ ಘಟನೆಯನ್ನು ಕಾಶ್ಮೀರಿ ಪೈಲ್ಸ್ ಸಿನಿಮಾದ ಮೂಲಕ ಸಂಪೂರ್ಣ ನೈಜವಾಗಿ ತೋರಿಸಲಾಗಿದೆ. ಬಾಕ್ಸ್ ಆಫೀಸ್ ನಲ್ಲಿ ದ ಕಾಶ್ಮೀರಿ ಫೈಲ್ಸ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣವೂ ಕೂಡ ಇದು ಎಲ್ಲಾ ವಿಚಾರವನ್ನು ನಿಜವಾಗಿ ಪ್ರೇಕ್ಷಕರೆದುರು ಇಟ್ಟಿರುವುದು. ಇಂತಹ ಧೈರ್ಯವನ್ನು ಮಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ರವರನ್ನು ನಾವು ಮೆಚ್ಚಲೇಬೇಕು. ಇನ್ನು ನೂರಾರು ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಬಿಸಿನೆಸ್ ಮಾಡುವುದು ಕೇವಲ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಮಾತ್ರ ಎನ್ನುವುದಾಗಿ ಎಲ್ಲರಲ್ಲೂ ಅಭಿಪ್ರಾಯ ಇತ್ತು. ಆದರೆ ದ ಕಾಶ್ಮೀರಿ ಫೈಲ್ಸ್ ಚಿತ್ರ ಎಲ್ಲಾ ನಂಬಿಕೆಗಳನ್ನು ಕೂಡ ಹುಸಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಶ್ಮೀರಿ ಫೈಲ್ಸ್ ಚಿತ್ರ ನೂರು ಕೋಟಿ ಮಾಡಿದೆ 200 ಕೋಟಿ ಮಾಡಿದೆ ಎನ್ನುವ ಪುಕಾರುಗಳು ಎದ್ದಿದ್ದವು. ಆದರೆ ಈ ಕುರಿತಂತೆ ಅಧಿಕೃತ ಮಾಹಿತಿಗಳು ಈಗ ಹೊರಬಂದಿದೆ. ಕೇವಲ 15 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಬರೋಬ್ಬರಿ ಈಗಾಗಲೇ ಬಾಕ್ಸಾಫೀಸ್ ನಲ್ಲಿ 331 ಕೋಟಿ ರೂಪಾಯಿ ಕಲೆಕ್ಷನ್ ಬಾಚಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಅಧಿಕೃತವಾಗಿ ಚಿತ್ರದ ನಿರ್ದೇಶಕರಾಗಿರುವ ವಿವೇಕ್ ಅಗ್ನಿಹೋತ್ರಿ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸತ್ಯಕ್ಕೆ ಇಂದಿಗೂ ಕೂಡ ಸಮಾಜದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಬೆಲೆ ಇದೆ ಎಂಬುದು ಈ ವಿಚಾರದಿಂದ ಸಾಬೀತಾಗಿದೆ ಎಂದು ಹೇಳಬಹುದಾಗಿದೆ. ಚಿತ್ರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.