ಜಡೇಜಾಗೆ ಶಾಕ್ ನೀಡಲು ಸಿದ್ಧವಾಯಿತೇ ಚೆನ್ನೈ, ಸತತ ಸೋಲಿನಿಂದ ಕಂಗೆಟ್ಟ ಚೆನ್ನೈ ನಲ್ಲಿ ಮೂರು ಬದಲಾವಣೆ?? ಯಾವ್ಯಾವು ಗೊತ್ತೇ??

ಜಡೇಜಾಗೆ ಶಾಕ್ ನೀಡಲು ಸಿದ್ಧವಾಯಿತೇ ಚೆನ್ನೈ, ಸತತ ಸೋಲಿನಿಂದ ಕಂಗೆಟ್ಟ ಚೆನ್ನೈ ನಲ್ಲಿ ಮೂರು ಬದಲಾವಣೆ?? ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಭಾರಿ ಪ್ಲೇ ಆಫ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಭಾರಿಯ ಐಪಿಎಲ್ ಅಷ್ಟೊಂದು ಒಳ್ಳೆಯದಾಗಿ ಕಾಣಿಸುತ್ತಿಲ್ಲ. ಹೌದು ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಭಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಹೊಸ ನಾಯಕ ರವೀಂದ್ರ ಜಡೇಜಾ ರವರು ಹೆಣೆಯುತ್ತಿರುವ ರಣತಂತ್ರಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಫಲವಾಗುತ್ತಿವೆ. ಹೀಗಾಗಿ ಸತತ ಸೋಲುಗಳ ಸುಳಿಯಿಂದ ಹೊರಬರಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ ಮೆಂಟ್ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ.ಬನ್ನಿ ಆ ಬದಲಾವಣೆ ಯಾವುವು ಎಂದು ತಿಳಿಯೋಣ.

1.ನಾಯಕತ್ವ ಬದಲಾವಣೆ : ಕೊನೆ ಗಳಿಗೆಯಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿ ರವೀಂದ್ರ ಜಡೇಜಾರವರಿಗೆ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು.ಆದರೇ ನೂತನ ನಾಯಕ ರವೀಂದ್ರ ಜಡೇಜಾ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಲು ವಿಫಲರಾಗಿದ್ದಾರೆ. ಹೀಗಾಗಿ ಪುನಃ ಎಂ.ಎಸ್.ಧೋನಿಯವರನ್ನೇ ನಾಯಕನನ್ನಾಗಿಸಲು ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ.

2.ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ : ತಂಡದ ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಅವರ ಬದಲು ಬೇರೆಯವರಿಂದ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಅದಲ್ಲದೇ ಬೌಲಿಂಗ್ ವಿಭಾಗದಲ್ಲಿ ಸಹ ಭಾರತೀಯ ಬೌಲರ್ ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ವೇಗಿ ದೀಪಕ್ ಚಾಹರ್ ಆದಷ್ಟು ಬೇಗ ತಂಡಕ್ಕೆ ಮರಳುವ ಸಾಧ್ಯತೆ ಇದೆ.

3.ಮೊದಲ ಪಂದ್ಯದಲ್ಲಿ ಧೋನಿ, ಎರಡನೇ ಪಂದ್ಯದಲ್ಲಿ ರಾಬಿನ್ ಉತ್ತಪ್ಪ, ಶಿವಂ ದುಬೆ, ಮೂರನೇ ಪಂದ್ಯದಲ್ಲಿ ಶಿವಂ ದುಬೆ ಹೀಗೆ ಪ್ರತಿ ಪಂದ್ಯದಲ್ಲೂ ಹೀರೋಗಳು ಸಿಗುತ್ತಿದ್ದಾರೆ. ಆದರೇ ಪಂದ್ಯ ಗೆಲ್ಲಿಸುವ ಹಿರೋಗಳ ಕೊರತೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಸರಪಳಿಗೆ ಸಿಲುಕಿದೆ.ಶೀಘ್ರದಲ್ಲಿಯೇ ಹೊಸ ಬದಲಾವಣೆಗಳೊಂದಿಗೆ ಮರಳಲಿರುವ ಚೆನ್ನೈ ತಂಡ ಗೆಲುವಿನ ಹಳಿಯುತ್ತ ಸಾಗಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.