ಹೊಸವರ್ಷ ಪ್ರಾರಂಭ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನಪಲ್ಲಟದಿಂದ ಈ ವರ್ಷ ರಾಶಿಗಳಿಗೆ ಹೇಗಿರಲಿದೆ ಗೊತ್ತೇ?? ಯಾರ್ಯಾರಿಗೆ ಅದೃಷ್ಟ ಗೊತ್ತೇ??

ಹೊಸವರ್ಷ ಪ್ರಾರಂಭ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನಪಲ್ಲಟದಿಂದ ಈ ವರ್ಷ ರಾಶಿಗಳಿಗೆ ಹೇಗಿರಲಿದೆ ಗೊತ್ತೇ?? ಯಾರ್ಯಾರಿಗೆ ಅದೃಷ್ಟ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹಿಂದೂಗಳಿಗೂ ಕೂಡ ಹೊಸ ವರ್ಷ ಎಂದರೆ ಅದು ಉಗಾದಿ ಹಬ್ಬ. ಯುಗಾದಿ ಹಬ್ಬವನ್ನು ಹೊಸವರ್ಷದ ದಿನವನ್ನಾಗಿ ಎಲ್ಲರೂ ಆಚರಿಸುತ್ತಾರೆ. ಆದರೆ ಇಂದಿನ ವಿಚಾರದಲ್ಲಿ ನಾವು ಯುಗಾದಿಯಿಂದ ಪ್ರಾರಂಭವಾಗಿ ಯಾವೆಲ್ಲ ರಾಶಿಗಳಿಗೆ ಲಾಭ ಸಿಗಲಿದೆ ಹಾಗೂ ಯಾವ ರಾಶಿಯವರಿಗೆ ನಷ್ಟ ಆಗಲಿದೆ ಎನ್ನುವುದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಮೇಷ; ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಗೆಲುವು ಸಾಧ್ಯವಾಗುವುದಿಲ್ಲ. ಈ ಹೊಸ ವರ್ಷದ ಸಂದರ್ಭದಲ್ಲಿ ಆದಾಯ ಹೆಚ್ಚಿದರು ಕೂಡ ಅಷ್ಟೇ ಪ್ರಮಾಣದಲ್ಲಿ ಖರ್ಚು ಕೂಡ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಕಾಡಲಿವೆ. ಹೀಗಾಗಿ ಪರಿಹಾರಾರ್ಥವಾಗಿ ಶಿವನಿಗೆ ಪೂಜೆ ಹಾಗೂ ದೈನಂದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕಾಗುತ್ತದೆ.

ವೃಷಭ; ಇಲ್ಲಿ ಕೂಡ ಆದಾಯದ ಜೊತೆಗೆ ವೆಚ್ಚವೂ ಕೂಡ ಹೆಚ್ಚಾಗುತ್ತದೆ. ನಿಮ್ಮ ಸೀಕ್ರೆಟ್ ಅನ್ನು ಯಾರ ಜೊತೆಗೂ ಕೂಡ ಹಂಚಿಕೊಳ್ಳುವುದು ಒಳ್ಳೆಯದಲ್ಲ. ಈ ವರ್ಷ ಮನೆ ಅಥವಾ ಕೆಲಸದ ವಿಚಾರದಲ್ಲಿ ಸ್ಥಳ ಬದಲಾವಣೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮ ರಿಸಲ್ಟ್ ದೊರೆಯಲಿದೆ.

ಮಿಥುನ; ಆರ್ಥಿಕವಾಗಿ ಈ ವರ್ಷ ನೀವು ದೊಡ್ಡಮಟ್ಟದ ಗೆಲುವನ್ನು ಸಾಧಿಸಲಿದ್ದೀರಿ. ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ಮನೆಯಲ್ಲಿ ಹಲವಾರು ಸಂತಸದಾಯಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಿದ್ದೀರಿ. ಆದರೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ನೀವು ಬಳಲುತ್ತೀರಿ ಹೀಗಾಗಿ ಆರೋಗ್ಯದ ಕುರಿತಂತೆ ನಿಗಾವಹಿಸಿ.

ಕರ್ಕ; ವರ್ಷದ ಮೊದಲ ಆರು ತಿಂಗಳು ನಿಮಗೆ ಕಷ್ಟಕರವಾಗಿರಲಿದೆ. ದ್ವಿತೀಯಾರ್ಧ ಖಂಡಿತವಾಗಿ ಯಶಸ್ಸನ್ನು ನೀಡಲಿದೆ. ಯಾವುದಕ್ಕೂ ಆರೋಗ್ಯದ ಕುರಿತಂತೆ ಗಮನವಹಿಸುವುದು ಅಗತ್ಯವಾಗಿದೆ. ನಿಮ್ಮ ಶತ್ರುಗಳು ನಿಮ್ಮ ಸೋಲಿಗಾಗಿ ಕಾಯುತ್ತಿರುತ್ತಾರೆ. ಕುಟುಂಬದವರು ನಿಮ್ಮೊಂದಿಗೆ ಜಗಳಕ್ಕಿಳಿಯಲಿದ್ದಾರೆ. ಯಾವುದಕ್ಕೂ ದಿನಾಲು ಹನುಮಾನ್ ಚಾಲೀಸ್ ವನ್ನು ಪಠಣ ಮಾಡುವುದು ಒಳ್ಳೆಯದು.

ಸಿಂಹ; ಈ ವರ್ಷ ಸಿಂಹರಾಶಿಯವರಿಗೆ ಹೇಳಿಮಾಡಿಸಿದ ವರ್ಷವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಇಷ್ಟೆಲ್ಲ ಯಶಸ್ಸುಗಳ ನಡುವೆಯೂ ಕೂಡ ಮಧುಮೇಹ ಹಾಗೂ ಉಸಿರಿನ ಸಮಸ್ಯೆಯಿಂದಾಗಿ ಬಳಲುತ್ತೀರಿ. ಆರೋಗ್ಯದ ಕಡೆಗೆ ನಿಗಾವಹಿಸಿ.

ಕನ್ಯಾ; ಜೂನ್ ತಿಂಗಳಲ್ಲಿ ನಿಮ್ಮ ಶತ್ರುಗಳಿಂದ ನಿಮಗೆ ಸಮಸ್ಯೆಗಳು ಹೆಚ್ಚಾಗಲಿದೆ. ಕುಟುಂಬ ಹಾಗೂ ಪ್ರೇಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಕಾಣಲಿದ್ದೀರಿ. ಕಾಂಪಿಟೇಟಿವ್ ಪರೀಕ್ಷೆಗಳನ್ನು ಬರೆಯುವುದಕ್ಕೆ ಸಕಾಲವಾಗಿದೆ. ಪ್ರತಿದಿನ ದುರ್ಗಾಮಾತೆಯನ್ನು ಪೂಜಿಸಿ.

ತುಲಾ; ಹಲವಾರು ತಪ್ಪುಗಳನ್ನು ಸರಿ ಮಾಡಿಕೊಳ್ಳುವಂತಹ ಅವಕಾಶ ದೊರೆಯುತ್ತದೆ ಹಾಗಾಗಿ ಇದನ್ನು ಮಿಸ್ ಮಾಡಿಕೊಳ್ಳಬೇಡಿ. ವರ್ಷದ ಎರಡನೇ ಭಾಗದಲ್ಲಿ ಹಣಕಾಸಿನ ಲಾಭಗಳು ಕಂಡುಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ ಗೊಳಲ್ಲಿದ್ದೀರಿ. ವೈವಾಹಿಕ ಜೀವನ ಸಮೃದ್ಧಿಯಿಂದ ನಡೆಯಲಿದೆ ಆದರೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಿ. ಆಸ್ಪತ್ರೆಗೆ ಹಣ ಖರ್ಚು ಮಾಡುವಂತಹ ಪರಿಸ್ಥಿತಿ ಒದಗಿ ಬರಲಿದೆ.

ವೃಶ್ಚಿಕ; ನಿಮ್ಮನ್ನು ಹಲವಾರು ಸಮಯಗಳಿಂದ ಕಾಡುತ್ತಿದ್ದ ಎಲ್ಲ ಸಮಸ್ಯೆಗಳು ದೂರವಾಗಲಿದೆ. ಈ ವರ್ಷ ವಿಶೇಷವಾಗಿ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಆದರೆ ಹೃದಯ ಹಾಗೂ ಸಂಧಿವಾತದಂತಹ ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಿದ್ದು ಜಾಗ್ರತೆವಹಿಸಿಕೊಳ್ಳಿ.

ಧನು; ದೊಡ್ಡ ಅಧಿಕಾರಿಗಳಿಂದ ನಿಮ್ಮ ಉತ್ತಮ ಮಾರ್ಗದರ್ಶನವನ್ನು ಪಡೆಯಲಿದ್ದು ಯಶಸ್ಸನ್ನು ಕೂಡ ಪಡೆಯಲಿದ್ದೀರಿ. ಅಕ್ಟೋಬರ್ ತಿಂಗಳ ನಂತರ ವೈವಾಹಿಕ ಜೀವನದಲ್ಲಿ ಕೂಡ ಸುಖವನ್ನು ಅನುಭವಿಸಲಿದ್ದೀರಿ. ಪ್ರಕೃತಿಗೆ ಹತ್ತಿರವಾಗುವ ಕಾರಣದಿಂದಾಗಿ ನಿಮ್ಮ ಆರೋಗ್ಯ ಹತೋಟಿಯಲ್ಲಿರುತ್ತದೆ.

ಮಕರ; ಕೆಲವೊಂದು ಅವಕಾಶಗಳನ್ನು ನೀವು ನಿಮ್ಮ ಆಚಾರ-ವಿಚಾರ ಗಳಿಂದಾಗಿ ಕಳೆದುಕೊಳ್ಳುತ್ತೀರಿ. ತಾಯಿ ಹಾಗೂ ಹೆಂಡತಿಯ ಆರೋಗ್ಯದಲ್ಲಿ ವ್ಯತ್ಯಯ ಸಂಭವಿಸಲಿದೆ. ಹೀಗಾಗಿ ಆದಾಯ ಹೆಚ್ಚಾಗಿ ಬಂದರು ಕೂಡ ಖರ್ಚು ಅದರಷ್ಟೇ ಇರುತ್ತದೆ.

ಕುಂಭ; ಮೊದಲಾರ್ಧದಲ್ಲಿ ನೀವು ಪಾಪರ್ ಆಗಿರಲಿದ್ದೀರಿ. ಆದರೆ ಅಕ್ಟೋಬರ್ ತಿಂಗಳ ನಂತರ ನಿಮ್ಮ ಆರ್ಥಿಕ ವ್ಯವಸ್ಥೆ ಎನ್ನುವುದು ಸೂಪರ್ ಆಗಿರುತ್ತದೆ. ಮದುವೆಯಾಗಿದ್ದರೆ ವಿವಾಹ ವಿಚ್ಛೇದನ ಪಡೆದುಕೊಳ್ಳುವ ಸಾಧ್ಯತೆ ಇದೆ. ದೂರ ದೂರದ ಪ್ರಯಾಣವನ್ನು ಕೂಡ ಮಾಡಲಿದ್ದೀರಿ. ಇವೆಲ್ಲದರ ಮೇಲೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಕಾಡಲಿವೆ. ಹೀಗಾಗಿ ಈ ವರ್ಷ ಸ್ವಲ್ಪಮಟ್ಟಿಗೆ ಜಾಗೃತೆಯಾಗಿರುವುದು ಒಳ್ಳೆಯದು.

ಮೀನ; ಹಣಕಾಸಿನ ವಿಚಾರದಲ್ಲಿ ಈ ವರ್ಷ ದೊಡ್ಡಮಟ್ಟದ ಲಾಭವನ್ನು ಪಡೆಯಲಿದ್ದೀರಿ. ನೀವು ಇಷ್ಟಪಡುವವರನ್ನು ಈ ವರ್ಷ ಮದುವೆಯಾಗಲು ಯೋಗ ಸಿಗಲಿದೆ. ಸಂತೋಷವಾದ ವಾತಾವರಣದಲ್ಲಿ ಇರುತ್ತೀರಿ. ಹೊಟ್ಟೆಯ ಸಮಸ್ಯೆ ಕಾಡಬಹುದು ಹಾಗೂ ಮಕ್ಕಳಿಂದ ಕೆಲವನ್ನು ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಇವುಗಳಲ್ಲಿ ನಿಮ್ಮ ರಾಶಿ ಯಾವುದು ಹಾಗೂ ಈ ವರ್ಷ ನಿಮಗೆ ಶುಭಕರವಾಗಿ ಇದೆಯೇ ಇಲ್ಲವೇ ಎನ್ನುವುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.