ಚೆನ್ನೈ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬಳಿಕ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತೇ?? ನಾಯಕನ ಮಾತುಗಳೇನು ಗೊತ್ತೇ??

ಚೆನ್ನೈ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬಳಿಕ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತೇ?? ನಾಯಕನ ಮಾತುಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದಂತಹ ಪಂದ್ಯಾಟದಲ್ಲಿ ಕನ್ನಡಿಗ ಕೆಎಲ್ ರಾಹುಲ್ ರವರ ನೇತೃತ್ವದ ಲಕನೌ ಸೂಪರ್ ಜೈಂಟ್ಸ್ ತಂಡ ರವೀಂದ್ರ ಜಡೇಜ ನೇತೃತ್ವದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ಲಕನೌ ಈ ಬಾರಿಯ ಐಪಿಎಲ್ ನಲ್ಲಿ ತನ್ನ ಮೊದಲ ಜಯವನ್ನು ದಾಖಲಿಸಿದೆ. ಹೌದು ಗೆಳೆಯರೇ ರವೀಂದ್ರ ಜಡೇಜ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ 210 ರನ್ನುಗಳನ್ನು ಕಲೆ ಹಾಕಿತ್ತು. ಹೆಮ್ಮೆಯ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಅರ್ಧಶತಕವನ್ನು ಬಾರಿಸುವ ಮೂಲಕ ಚೆನ್ನೈಗೆ ಉತ್ತಮ ಆರಂಭವನ್ನು ನೀಡಿದ್ದರು.

ಮೋಯೀನ್ ಅಲಿ ಶಿವಂ ದುಬೆ ಹಾಗೂ ರಾಯುಡು ಕೂಡ ಉತ್ತಮ ಪ್ರದರ್ಶನವನ್ನು ನೀಡಿದರು. ಆದರೆ ಲಖನೌ ತಂಡ 210 ರನ್ನುಗಳ ಗುರಿಯನ್ನು ಬೆನ್ನಟ್ಟಿ 3 ಬಾಲ್ ಗಳು ಉಳಿದಿರುವಂತೆ ಪಂದ್ಯವನ್ನು ರೋಚಕವಾಗಿ ಗೆದ್ದಿದೆ. ಅದರಲ್ಲೂ ಲೆವಿಸ್ 23 ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಈ ಬಾರಿ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದ್ದಾರೆ. ಯುವ ಬ್ಯಾಟ್ಸ್ಮನ್ ಆಗಿರುವ ಬಡೋನಿ ಕೂಡ 360° ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸುವ ಮೂಲಕ ಎಬಿ ಡಿವಿಲಿಯರ್ಸ್ ಅವರ ನೆನಪನ್ನು ತಂದು ಕೊಟ್ಟಿರುತ್ತಾರೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಎರಡು ಪಂದ್ಯಗಳನ್ನು ಬ್ಯಾಕ್ ಟು ಬ್ಯಾಕ್ ಸೋತಿದೆ.

ಇನ್ನು ಪಂದ್ಯವನ್ನು ಗೆದ್ದ ನಂತರ ಲಖನೌ ತಂಡದ ನಾಯಕನಾಗಿರುವ ಕೆ ಎಲ್ ರಾಹುಲ್ ರವರು ಹನಿಯಿಂದಾಗಿ ಬಾಲ್ ಕೈಯಿಂದ ಜಾರುತ್ತಿದ್ದರು ಕೂಡ ರವಿ ಬಿಷ್ಣೋಯಿ ರವರ ಸ್ಪಿನ್ ಬೌಲಿಂಗ್ ಇದಕ್ಕೂ ಕೂಡ ತಂಡದ ಗೆಲುವನ್ನು ದೃಢಪಡಿಸಿತ್ತು. ಇನ್ನು ಬ್ಯಾಟಿಂಗ್ನಲ್ಲಿ ಲೆವಿಸ್ ಹಾಗೂ ಬಿಡೋನಿ ತಂಡದ ಗೆಲುವಿಗೆ ಪ್ರಮುಖ ಯೋಗದಾನವನ್ನು ನೀಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಕ್ವಿಂಟನ್ ಡಿಕಾಕ್ ಕೂಡ ಆರಂಭಿಕ ಭದ್ರ ಅಡಿಪಾಯವನ್ನು ಹಾಕಿದ್ದಾರೆ ಎಂಬುದಾಗಿ ಕೂಡ ಈ ಸಮಯದಲ್ಲಿ ಹೇಳಿದ್ದಾರೆ. ಈ ಬಾರಿಯ ಮೊದಲ ಗೆಲುವನ್ನು ಸಂಪಾದಿಸಿರುವ ಲಖನೌ ತಂಡ ಮುಂದಿನ ಪಂದ್ಯಕ್ಕೆ ಸಿದ್ಧವಾಗಿದೆ ಎಂಬುದಾಗಿ ಕೂಡ ಇಲ್ಲಿ ರಾಹುಲ್ ಅವರು ಸ್ಪಷ್ಟಪಡಿಸಿದ್ದಾರೆ.