ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಕ್ರಿಕೆಟ್ ನಷ್ಟೇ ಮನರಂಜನೆ ನೀಡುವ ಸುಂದರ ಆಂಕರ್ ಗಳು ಯಾರೆಲ್ಲಾ ಗೊತ್ತಾ?? ಮತ್ತೆ ವಾಪಾಸ್ ಬಂದ ಮಾಯಾಂತಿ.

ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಕ್ರಿಕೆಟ್ ನಷ್ಟೇ ಮನರಂಜನೆ ನೀಡುವ ಸುಂದರ ಆಂಕರ್ ಗಳು ಯಾರೆಲ್ಲಾ ಗೊತ್ತಾ?? ಮತ್ತೆ ವಾಪಾಸ್ ಬಂದ ಮಾಯಾಂತಿ.

ನಮಸ್ಕಾರ ಸ್ನೇಹಿತರೇ ಕೊನೆಗೂ ಐಪಿಎಲ್ ಹಬ್ಬ ಪ್ರಾರಂಭವಾಗಿ ಬಿಡ್ತು. ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಹಬ್ಬ ಅದ್ದೂರಿಯಾಗಿ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಐಪಿಎಲ್ ಪ್ರಾರಂಭವಾಯಿತು ಎಂದರೆ ಕೇವಲ ಆಟಗಾರರನ್ನು ಮಾತ್ರವಲ್ಲದೆ ಆಂಕರ್ ಗಳನ್ನು ಕೂಡ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿರುವ ಆಂಕರ್ ಗಳು ಯಾರೆಲ್ಲ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಸಂಜನಾ ಗಣೇಶನ್; ಬಹುತೇಕ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಸಂಜನ ಗಣೇಶನ್ ಯಾರು ಎನ್ನುವುದು ತಿಳಿದಿದೆ. ಹೌದು ಸಂಜನಾ ಗಣೇಶನ್ ರವರು ನಿರೂಪಕಿಯಾಗಿ ಎಷ್ಟು ಜನಪ್ರಿಯರಾಗಿದ್ದಾರೋ ಅಷ್ಟೇ ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ರವರ ಪತ್ನಿ ಯಾಗಿಯೂ ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. ಇವರು ಕೂಡ ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಮುದ್ದುಮುಖದ ಮೂಲಕ ಎಲ್ಲರ ಮನ ಗೆಲ್ಲಲು ಸಿದ್ಧರಾಗಿದ್ದಾರೆ. ಈಗಾಗಲೇ ಮಹಿಳಾ ವಿಶ್ವಕಪ್ ನಲ್ಲಿ ಕೂಡ ತಮ್ಮ ಆಂಕರಿಂಗ್ ಮುಗಿಸಿಕೊಂಡು ಈಗ ಐಪಿಎಲ್ ಗೆ ಬರುತ್ತಿದ್ದಾರೆ.

ತಾನಿಯಾ ಪುರೋಹಿತ್; ತಾನಿಯ ಪುರೋಹಿತರು ಐಪಿಎಲ್ನ ಚಿರಪರಿಚಿತ ನಿರೂಪಕರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಇನ್ನು ಇವರು ಅನುಷ್ಕಾ ಶರ್ಮಾ ನಟಿಸಿರುವ ಎನ್ ಹೆಚ್ 10 ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಅವರು ಅಗರ್ವಾಲ್ ಯೂನಿವರ್ಸಿಟಿಯಿಂದ ಪದವಿಯನ್ನು ಪಡೆದುಕೊಂಡಿದ್ದಾರೆ ಎಂಬುದು ಕೂಡ ಗಮನಿಸಬೇಕಾಗಿರುವಂತಹ ಅಂಶವಾಗಿದೆ. ಇನ್ನು ಪ್ರತಿಬಾರಿಯಂತೆ ಈ ಬಾರಿಯೂ ಕೂಡ ತಾನಿಯ ಪೂರ್ವ ತಮ್ಮ ಅದ್ಭುತ ನಿರೂಪಣೆಯ ಮೂಲಕ ಐಪಿಎಲ್ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.

ನಶ್ ಪ್ರೀತ್ ಕೌರ್; ನಶ್ ಪ್ರೀತ್ ಕೌರ್ ರವರು ಹುಟ್ಟಿಬೆಳೆದದ್ದು ಆಸ್ಟ್ರೇಲಿಯಾದಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಇವರು ಪ್ರಸಿದ್ಧರಾಗಿದ್ದಾರೆ. ಇನ್ನು ಮಹಿಳಾ ಕ್ರಿಕೆಟ್ ನಿರೂಪಕಿಯಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿರುವ ಇವರು ಈ ಬಾರಿಯ ಐಪಿಎಲ್ ನಲ್ಲಿ ಕೂಡ ತಮ್ಮ ಸುಂದರ ಹಾಗೂ ಆಕ್ಟಿವ್ ನಿರೂಪಣೆಯಿಂದಾಗಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲಲು ಸಿದ್ಧರಾಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಇವರ ಆಂಕರಿಂಗ್ ನೋಡಿ ನೀವು ಕೂಡ ಫಿದಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಯಾಂತಿ ಲ್ಯಾಂಗರ್; ಇವರ ಕುರಿತಂತೆ ಯಾವುದೇ ಪರಿಚಯ ನೀಡುವ ಅಗತ್ಯವೇ ಇಲ್ಲ. ಮೊದಲ ಐಪಿಎಲ್ ನಿಂದಲೂ ಕೂಡ ಇವರು ಜನಪ್ರಿಯತೆಯಲ್ಲಿ ಇದ್ದವರು. ಇನ್ನು ಇವರು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಆಗಿರುವ ಸ್ಟುವರ್ಟ್ ಬಿನ್ನಿ ಅವರ ಪತ್ನಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಇವರು ನಿರೂಪಣೆ ಮಾಡುತ್ತಿಲ್ಲ. ಇನ್ನು ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಬಾರಿ ಐಪಿಎಲ್ ಆಂಕರಿಂಗ್ ಲಿಸ್ಟಿನಲ್ಲಿ ಇವರು ಮತ್ತೊಮ್ಮೆ ವಾಪಸಾಗಿದ್ದಾರೆ. ಕೊನೆಗೂ ಅಭಿಮಾನಿಗಳ ನಿರೀಕ್ಷೆ ನೆರವೇರಿದೆ ಎಂಬುದಾಗಿ ಎಲ್ಲರೂ ಖುಷಿಪಟ್ಟಿದ್ದಾರೆ. ಆದರೆ ಮೊದಲಿನಂತೆ ಇವರು ಮೈದಾನದಲ್ಲಿ ಕ್ರಿಕೆಟ್ ಆಟಗಾರರ ಸಂದರ್ಶನ ಮಾಡುವುದಿಲ್ಲ ಬದಲಾಗಿ ಸ್ಟುಡಿಯೋದಲ್ಲೇ ನಿರೂಪಣೆ ಮಾಡುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ನೆರೊಲಿ ಮೆಡೋಸ್; ಇನ್ನು ಈ ಬಾರಿಯ ಐಪಿಎಲ್ ಆಂಕರಿಂಗ್ ಲಿಸ್ಟಿನಲ್ಲಿ ವಿದೇಶಿ ಆಂಕರ್ ಕೂಡ ಸೇರ್ಪಡೆಯಾಗಿದ್ದಾರೆ. ಆಸ್ಟ್ರೇಲಿಯ ಮೂಲದ ಆಂಕರ್ ಆಗಿರುವ ನೇರೋಲಿ ಮೆಡೋಸ್ ಈ ಬಾರಿಯ ಐಪಿಎಲ್ ನಲ್ಲಿ ಆಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.