ರೋಹಿತ್ ಬಳಿಕ ನಾಯಕ ಯಾರು ಎಂಬುದಕ್ಕೆ ಉತ್ತರಿಸಿದ ರವಿ ಶಾಸ್ತ್ರೀ, ಈ ಮೂವರಲ್ಲಿ ಒಬ್ಬರು ಫಿಕ್ಸ್ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ರೋಹಿತ್ ಬಳಿಕ ನಾಯಕ ಯಾರು ಎಂಬುದಕ್ಕೆ ಉತ್ತರಿಸಿದ ರವಿ ಶಾಸ್ತ್ರೀ, ಈ ಮೂವರಲ್ಲಿ ಒಬ್ಬರು ಫಿಕ್ಸ್ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಸಿದ್ದತೆಯಲ್ಲಿ ತೊಡಗಿದ್ದು, ಆರಂಭದಿಂದಲೇ ಅಂಕಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಲು ಗೇಮ್ ಪ್ಲಾನ್ ಮಾಡುತ್ತಿವೆ.ಈ ನಡುವೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಈ ಭಾರಿಯ ಐಪಿಎಲ್ ನಿಂದ ತಮ್ಮ ನೆಚ್ಚಿನ ವೀಕ್ಷಕ ವಿವರಣೆಗಾರ ವೃತ್ತಿಗೆ ಮರಳಲಿದ್ದಾರೆ.ಅವರ ಕಂಚಿನ ಕಂಠದ ಧ್ವನಿ ಮತ್ತೇ ವೀಕ್ಷಕರ ಮನತಣಿಸಲಿವೆ.

ಇನ್ನು ಐಪಿಎಲ್ ಟೂರ್ನಿ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ , ಈ ಐಪಿಎಲ್ 2022 ಭಾರತ ತಂಡಕ್ಕೆ ವರದಾನವಾಗಲಿದೆ. ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕ ಯಾರಾಗುತ್ತಾರೆ ಎಂಬುದು ಸಹ ತಿಳಿಯಲಿದೆ ಎಂದು ಹೇಳಿದರು. ಈ ಮೂವರಲ್ಲಿ ಒಬ್ಬರು ಭಾರತ ತಂಡದ ಮುಂದಿನ ನಾಯಕರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಬನ್ನಿ ಆ ಮೂವರು ಯಾರು ಎಂಬುದನ್ನು ತಿಳಿಯೋಣ.

1.ಕೆ.ಎಲ್.ರಾಹುಲ್ : ಸದ್ಯ ಭಾರತ ತಂಡದ ಉಪನಾಯಕನಾಗಿರುವ ಕೆ.ಎಲ್.ರಾಹುಲ್ ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಇವರು ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕರಾಗುವ ಸಾಧ್ಯತೆ ಇದೆ ಎಂದು ರವಿಶಾಸ್ತ್ರಿ ಹೇಳಿದರು.

2.ಶ್ರೇಯಸ್ ಅಯ್ಯರ್ : ಕಳೆದ ಸೀಸನ್ ಗಳಲ್ಲಿ ದೆಹಲಿ ತಂಡದ ನಾಯಕರಾಗಿ, ಸದ್ಯ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಈ ಭಾರಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರಿಗೆ ನಾಯಕತ್ವ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶವಿದೆ.

3.ರಿಷಭ್ ಪಂತ್ : ಪಾಕೆಟ್ ಡೈನಮೋ ರಿಷಭ್ ಪಂತ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ. ಕಳೆದ ಬಾರಿ ಯಶಸ್ವಿಯಾಗಿ ಮುನ್ನಡೆಸಿದ್ದ ಪಂತ್ ಗೆ ಇದು ಸೆಕೆಂಡ್ ಚಾನ್ಸ್. ಈ ಭಾರಿ ಉತ್ತಮ ನಾಯಕತ್ವ ಪ್ರದರ್ಶನ ನೀಡಿದರೇ , ಟೀಮ್ ಇಂಡಿಯಾ ಆಯ್ಕೆಗಾರರು ಇವರ ಬಗ್ಗೆ ಕಣ್ಣಿಡುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.