ಈ ಬಾರಿಯ ಐಪಿಎಲ್ ಮ್ಯಾಚ್ ಗಳನ್ನು ಮೊಬೈಲ್ ನಲ್ಲಿ ಉಚಿತವಾಗಿ ನೋಡಲು ಸೂಪರ್ ಆಫರ್ ಕೊಟ್ಟ ಟೆಲಿಕಾಂ ಕಂಪನಿಗಳು, ಯಾವ್ಯಾವ ಸಿಮ್ ನಲ್ಲಿ ಯಾವ್ಯಾವ ಪ್ಯಾಕ್ ಗೊತ್ತೇ?

ಈ ಬಾರಿಯ ಐಪಿಎಲ್ ಮ್ಯಾಚ್ ಗಳನ್ನು ಮೊಬೈಲ್ ನಲ್ಲಿ ಉಚಿತವಾಗಿ ನೋಡಲು ಸೂಪರ್ ಆಫರ್ ಕೊಟ್ಟ ಟೆಲಿಕಾಂ ಕಂಪನಿಗಳು, ಯಾವ್ಯಾವ ಸಿಮ್ ನಲ್ಲಿ ಯಾವ್ಯಾವ ಪ್ಯಾಕ್ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಐಪಿಎಲ್ 2022ಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು ತುಂಬಾ ತಪ್ಪದೇ ಈ ಮ್ಯಾಚ್ ಗಳನ್ನು ನೋಡುತ್ತಾರೆ. ಈ ಬಾರಿ ಐಪಿಎಲ್ ನ್ನು ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಹಾಗಾಗಿ ಸಾಕಷ್ಟು ಜನ ಈ ಪ್ಲಾಟ್‌ಫಾರ್ಮ್‌ಗೆ ಚಂದಾದಾರರಾಗಲು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಯೋ, ಏರ್ಟೆಲ್, ವಿ ಐ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳಲ್ಲಿ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆಯನ್ನು ಅಳವಡಿಸಿಕೊಂಡಿವೆ. ನಿಮಗೂ ನೀವಿರುವ ಸ್ಥಳದಿಂದಲೇ ಐಪಿಎಲ್ ಲೈವ್ ವೀಕ್ಷಿಸಬೇಕೆಂದಿದ್ದರೆ, ಕೆಳಗಿನ ಯೋಜನೆಗಳಲ್ಲಿ ನಿಮಗೆ ಬೇಕಾದ ಯೋಜನೆಯನ್ನು ಆಯ್ಕೆಮಾಡಿಕೊಂಡು ರೀಚಾರ್ಜ್ ಮಾಡಿ.

ಏರ್‌ಟೆಲ್‌ನ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳು. ಭಾರತದ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್, “ಟ್ರೂಲಿ ಅನ್‌ಲಿಮಿಟೆಡ್” ಪ್ಯಾಕ್ ಘೋಷಿಸಿದ್ದು, ಇದು ರೂ. 599ಗಳ ಯೋಜನೆಯಾಗಿದೆ. 28ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯು ತನ್ನ ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ.

ಇದರೊಂದಿಗೆ, ಬಳಕೆದಾರರು ದಿನಕ್ಕೆ ಒಟ್ಟು 100 ಎಸ್ ಎಂ ಎಸ್, ಪ್ರತಿದಿನ 3 ಜಿ ಬಿ ಇಂಟರ್ನೆಟ್ ಡೇಟಾವನ್ನು ಸಹ ಕೊಡಲಾಗುವುದು. ಏರ್‌ಟೆಲ್ 838 ರೂ. ಯೋಜನೆಯು 56 ದಿನಗಳ ಮಾನ್ಯತೆಯ ಅವಧಿ ಹೊಂದಿದ್ದು, ಗ್ರಾಹಕರು 2 ಜಿ ಬಿ ದೈನಂದಿನ ಡೇಟಾ, ದಿನಕ್ಕೆ 100 ಎಸ್ ಎಂ ಎಸ್ ಮತ್ತು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಹೊಂದಿದೆ.

ರಿಲಯನ್ಸ್ ಜಿಯೋ ಡಿಸ್ನಿ + ಹಾಟ್‌ಸ್ಟಾರ್ ಯೋಜನೆಗಳು. 601 ರೂ.ಗಳ ಯೋಜನೆಯಾಗಿದ್ದು, ಇದರ ಮಾನ್ಯತೆ 28 ದಿನಗಳು. ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಉಚಿತ ಎಸ್ ಎಂ ಎಸ್ ಜೊತೆಗೆ ದಿನಕ್ಕೆ 3ಜಿ ಬಿ ಡೇಟಾವನ್ನು ಪ್ರಯೋಜನ ಪಡೆಯಬಹುದು. ಈ ಯೋಜನೆಯು ಹೆಚ್ಚುವರಿ 6ಜಿ ಬಿ ಡೇಟಾವನ್ನು ಸಹ ನೀಡುತ್ತದೆ.

ಇನ್ನು ಈ 499 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಇದು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ ಎಂ ಎಸ್, 2 ಜಿ ಬಿ ಡೇಟಾ ಹೊಂದಿರುವ 28 ​​ದಿನಗಳ ವ್ಯಾಲಿಡಿಟಿ ಯೋಜನೆ ಇದಾಗಿದೆ. ಈ ಎರಡೂ ಯೋಜನೆಗಳಲ್ಲಿ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರವೇಶದೊಂದಿಗೆ ಬರುತ್ತವೆ. ಇದರಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ವಿವಿಧ ಜಿಯೋ ಅಪ್ಲಿಕೇಶನ್‌ ಸೌಲಭ್ಯಗಳನ್ನೂ ಕೂಡ ಕೊಡಲಾಗುವುದು. ಇನ್ನು ದೈನಂದಿನ ಡೇಟಾ ಮಿತಿಯನ್ನು ಬಳಸಿದ ನಂತರ, ಬಳಕೆದಾರರು 64 ಕೆಬಿಪಿಎಸ್ ಇಂಟರ್ನೆಟ್ ವೇಗವನ್ನು ಪಡೆಯಬಹುದು.

ವಿ ಐನಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳನ್ನ ನೋಡುವುದಾದರೆ, 601 ರೂಪಾಯಿಗಳ ಯೋಜನೆ. ಇದರಲ್ಲಿ ದಿನಕ್ಕೆ 100 ಎಸ್ ಎಂ ಎಸ್ ನೊಂದಿಗೆ ಅನಿಯಮಿತ ಕರೆ ಸೌಲಭ್ಯವನ್ನು ಹೊಂದಿದೆ. ಈ ಯೋಜನೆಯು ದಿನಕ್ಕೆ 3ಜಿ ಬಿ ಡೇಟಾವನ್ನು ನೀಡುತ್ತದೆ ವ್ಯಾಲಿಡಿಟಿ 28 ದಿನಗಳು ಮಾತ್ರ. ಇನ್ನು 901 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ದಿನಕ್ಕೆ 3 ಜಿ ಬಿ ಡಾಟಾ ನೀಡಲಾಗುವುದು.

ಇದು 70 ದಿನಗಳ ಮಾನ್ಯತೆಯ ಅವಧಿ ಹೊಂದಿದೆ. ದಿನಕ್ಕೆ 100 ಎಸ್ ಎಂ ಎಸ್, ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಇನ್ನು ಈ ಯೋಜನೆಗಳಲ್ಲಿ ಟೆಲ್ಕೋ ಡಿಸ್ನಿ + ಹಾಟ್‌ಸ್ಟಾರ್ ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಇದಲ್ಲದೆ, ಬಳಕೆದಾರರು ರೂ. 601 ಮತ್ತು ರೂ. 901 ಯೋಜನೆಗಳಲ್ಲಿ ಕ್ರಮವಾಗಿ ಹೆಚ್ಚುವರಿ 16ಜಿ ಬಿ ಮತ್ತು 48ಜಿ ಬಿ ಡೇಟಾವನ್ನು ಪಡೆಯಬಹುದು. ಇವಿಷ್ಟು ಯೋಜನೆಗಳಲ್ಲಿ ನಿಮ್ಮ ಅಗತ್ಯವಾದ ಯೋಜನೆಯನ್ನು ಆಯ್ದುಕೊಂಡು ಇಂದೇ ರಿಚಾರ್ಜ್ ಮಾಡಿಸಿ.