ಇತರ ಚಿತ್ರಗಳ ಅಬ್ಬರದ ನಡುವೆಯೂ ಕೂಡ ನಾಲ್ಕೇ ದಿನದಲ್ಲಿ ಜೇಮ್ಸ್ ಚಿತ್ರ ಗಳಿಸಿರುವ ಅಸಲಿ ಗಳಿಕೆ ಎಷ್ಟು ಗೊತ್ತೇ??

ಇತರ ಚಿತ್ರಗಳ ಅಬ್ಬರದ ನಡುವೆಯೂ ಕೂಡ ನಾಲ್ಕೇ ದಿನದಲ್ಲಿ ಜೇಮ್ಸ್ ಚಿತ್ರ ಗಳಿಸಿರುವ ಅಸಲಿ ಗಳಿಕೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕೋಟ್ಯಾಂತರ ಕನ್ನಡಿಗರ ದುಃಖವನ್ನು ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಭಾಗಶಹ ನಿವಾರಿಸಿದೆ ಎಂದರೆ ತಪ್ಪಾಗಲಾರದು. ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಇನ್ನು ಮುಂದೆ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ದೊಡ್ಡಮಟ್ಟದ ಕೊರತೆಯನ್ನು ಕೊನೆಯ ಬಾರಿಗೆ ಮನಸ್ಸು ಪೂರ್ತಿ ಯಾಗುವವರೆಗೂ ಅವರನ್ನು ಜೇಮ್ಸ್ ಚಿತ್ರದ ಮೂಲಕ ನೋಡಬಹುದಾಗಿದೆ.

ಆದರೂ ಇನ್ನು ಮುಂದೆ ಕನ್ನಡ ಚಿತ್ರರಂಗಕ್ಕೆ ಮೈಕಲ್ ಜಾಕ್ಸನ್ ಹಾಗೆ ಡ್ಯಾನ್ಸ್ ಮಾಡುವ ಯಾವುದೇ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳನ್ನು ಮಾಡುವ ಯಾವುದೇ ಕಲ್ಮಶವಿಲ್ಲದ ನಗುವ ನಿಜ ಜೀವನದಲ್ಲಿ ಕೂಡ ಎಲ್ಲರ ಕಷ್ಟಕ್ಕೆ ಸ್ಪಂದಿಸುವಂತಹ ಮತ್ತೊಬ್ಬ ವ್ಯಕ್ತಿ ಸಿಗುವುದಿಲ್ಲ ಎನ್ನುವ ದುಃಖ ಜೀವನಪೂರ್ತಿ ಇದ್ದೇ ಇರುತ್ತದೆ. ಜೇಮ್ಸ್ ಚಿತ್ರ ಕೊನೆಯ ಬಾರಿಗೆ ಆದರೂ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ನೂರಕ್ಕೆ ನೂರರಷ್ಟು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.

ಚೇತನ್ ಕುಮಾರ್ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ ಎನ್ನುವುದಕ್ಕೆ ಕೂಡ ಸಂತೋಷವಾಗುತ್ತದೆ. ಮೇಜರ್ ಸಂತೋಷ್ ಆಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಪರದೆಯ ಮೇಲೆ ಮಿಂಚನ್ನು ಹರಿಸುತ್ತಾರೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಇಂತಹ ಸವ್ಯಸಾಚಿ ನಟನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತದೆ. ಅದೇನೇ ಇರಲಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದಾಖಲೆಯ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಚಿತ್ರ ಗಳಿಸಿದೆ.

ಹೌದು ಅಮೇರಿಕಾದಲ್ಲಿ 66 ಲಕ್ಷ ರೂಪಾಯಿಗಳನ್ನು ಆಸ್ಟ್ರೇಲಿಯಾದಲ್ಲಿ 18 ಲಕ್ಷ ರೂಪಾಯಿಗಳನ್ನು ಜೇಮ್ಸ್ ಚಿತ್ರ ಗಳಿಸಿದೆ. ಇನ್ನು ನಿರ್ಮಾಪಕರು ಹೇಳುವಂತೆ ಮೊದಲ ದಿನವೇ ಟಿವಿ ಹಾಗೂ ಸ್ಯಾಟಲೈಟ್ ರೈಟ್ಸ್ ಗಳನ್ನು ಸೇರಿಸಿ ಚಿತ್ರಮಂದಿರದ ಕಲೆಕ್ಷನ್ ಪ್ರಕಾರ ನೂರು ಕೋಟಿ ರೂಪಾಯಿಯನ್ನು ದಾಟಿತ್ತು ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ನಾಲ್ಕು ದಿನಗಳ ಕೇವಲ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೇಮ್ಸ ಚಿತ್ರದ ಮೊದಲ ದಿನದ ಕಲೆಕ್ಷನ್ 32 ಕೋಟಿಗೂ ಅಧಿಕ ಎಂಬುದಾಗಿ ಎಲ್ಲಾ ಕಡೆ ಸುದ್ದಿಯಾಗಿತ್ತು. ಎರಡನೇ ದಿನ 21.8 ಕೋಟಿ ರೂಪಾಯಿ ಗಳಿಕೆಯನ್ನು ಜೇಮ್ಸ್ ಚಿತ್ರ ಪಡೆದಿತ್ತು. ಇನ್ನು ಮೂರನೇ ದಿನದ ವಿಚಾರಕ್ಕೆ ಬಂದರೆ ಶನಿವಾರ ಆಗಿದ್ದರಿಂದಾಗಿ ಬಾಕ್ಸಾಫೀಸ್ ಗಳಿಕೆ ಇನ್ನಷ್ಟು ಹೆಚ್ಚಾಗಿ 26.4 ಕೋಟಿ ರೂಪಾಯಿ ಗಳಿಸಿತ್ತು. ಇನ್ನು ನಾಲ್ಕನೇ ದಿನ ವಾಗಿರುವ ಭಾನುವಾರ ಎಲ್ಲಾ ಪ್ರೇಕ್ಷಕರು ಕೂಡ ಮತ್ತೊಮ್ಮೆ ಚಿತ್ರಮಂದಿರಕ್ಕೆ ಅಪ್ಪು ರವರನ್ನು ನೋಡಲು ಗುಂಪುಗುಂಪಾಗಿ ಬಂದಿದ್ದರು. ಈ ಕಾರಣಕ್ಕಾಗಿ ಜೇಮ್ಸ್ ಚಿತ್ರ ನಾಲ್ಕನೇ ದಿನ ಬರೋಬ್ಬರಿ ಮತ್ತೊಮ್ಮೆ 30 ಕೋಟಿ ರೂಪಾಯಿ ಗಳಿಕೆಯನ್ನು ಮೀರಿಸಿತ್ತು.

ಹೀಗಾಗಿ ನಾಲ್ಕು ದಿನಗಳ ಒಟ್ಟಾರೆ ಟೋಟಲ್ ಕಲೆಕ್ಷನ್ 110 ಕೋಟಿ ರೂಪಾಯಿಗಳನ್ನು ಮೀರಿಸಿದೆ ಎಂಬುದಾಗಿ ಅಧಿಕೃತವಾಗಿ ಚಿತ್ರತಂಡದಿಂದ ಘೋಷಣೆ ಹೊರಬಂದಿದೆ. ಮುಂದಿನ ವಾರಾಂತ್ಯದ ಒಳಗಡೆ 150 ಕೋಟಿ ಗೂ ಅಧಿಕ ಕಲೆಕ್ಷನ್ ಜೇಮ್ಸ್ ಚಿತ್ರ ಮಾಡಲಿದೆ ಎಂಬುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂತಹ ಸಾಧನೆಯನ್ನು ಮಾಡಿರುವ ಅದರಲ್ಲೂ ಕೂಡ ಕೆಜಿಎಫ್ ಚಿತ್ರಕ್ಕಿಂತ ಅಧಿಕ ವೇಗವಾಗಿ ಕಲೆಕ್ಷನ್ ಮಾಡಿರುವ ಜೇಮ್ಸ್ ಚಿತ್ರ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಂತಹ ದಾಖಲೆಯನ್ನು ಮಾಡಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.