ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ದಿನೇಶ್ ಕಾರ್ತಿಕ್, ಆರ್ಸಿಬಿ ಕುರಿತಂತೆ ಕೊಹ್ಲಿ ಬಳಿ ಮನವಿ ಮಾಡಿದ್ದೇನು ಗೊತ್ತೇ? ಇದು ಆರ್ಸಿಬಿ ಗತ್ತು.

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ದಿನೇಶ್ ಕಾರ್ತಿಕ್, ಆರ್ಸಿಬಿ ಕುರಿತಂತೆ ಕೊಹ್ಲಿ ಬಳಿ ಮನವಿ ಮಾಡಿದ್ದೇನು ಗೊತ್ತೇ? ಇದು ಆರ್ಸಿಬಿ ಗತ್ತು.

ನಮಸ್ಕಾರ ಸ್ನೇಹಿತರೇ ಐಪಿಎಲ್ ಗೆ ಇನ್ನು ಕೇವಲ ಐದು ದಿನ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸಿಗಳು ಆಟಗಾರರಿಗೆ ಕಠಿಣ ತಾಲೀಮಿನ ಶಿಬಿರವನ್ನು ಹಮ್ಮಿಕೊಂಡಿವೆ. ಶತಾಯಗತಾಯವಾಗಿ ಐಪಿಎಲ್ ಟ್ರೋಫಿ ಗೆಲ್ಲಲೇಬೆಕೆಂದು ತಂಡದ ಕೋಚ್ ಹಾಗೂ ಮ್ಯಾನೇಜ್ ಮೆಂಟ್ ಸೂಕ್ತ ರಣತಂತ್ರವನ್ನು ಸಿದ್ದಪಡಿಸುತ್ತಿದೆ. ಈ ನಡುವೆ ಬಿಡುವಿನ ವೇಳೆಯಲ್ಲಿ ಆಟಗಾರರು ತಮ್ಮ ನೆನಪಿನ ಅಂಗಳಕ್ಕೆ ಜಾರಿ ಅಲ್ಲಿ ನಡೆದ ಉತ್ತಮ ಘಟನೆಗಳನ್ನು ಶೇರ್ ಮಾಡುತ್ತಿದ್ದಾರೆ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಾಪಸ್ ಆಗಿರುವ ಭಾರತ ತಂಡದ ಹಿರಿಯ ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ , ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಂಡದ ನಿರೂಪಕ ಡ್ಯಾನೀಶ್ ಸೇಠ್ ಜೊತೆ ಮಾತನಾಡುತ್ತಾ ತಮ್ಮ ನೆನಪಿನ ಬುತ್ತಿಗೆ ಮರಳಿದರು.

ನಾನು ಆರ್ಸಿಬಿ ತಂಡಕ್ಕೆ ಸೇರಬೇಕು ಎಂದು ಅಂದುಕೊಂಡಿದ್ದೇನೆ ಎಂದು ಡಿಕೆ ವಿರಾಟ್ ಕೊಹ್ಲಿ ಯವರ ಬಳಿ ಹೇಳಿದ್ದರಂತೆ. ಅದಕ್ಕೆ ತಣ್ಣಗೆ ರಿಪ್ಲೈ ಮಾಡಿದ್ದ ವಿರಾಟ್, ಇದನ್ನು ನೀವು ಸಂಭಂದಪಟ್ಟವರ ಬಳಿ ಚರ್ಚಿಸಿ ಬ್ರೋ ಎಂದು ಹೇಳಿದ್ದರಂತೆ. ಆದರೇ ಕಾಕತಾಳೀಯ ಎಂಬಂತೆ ಆರ್ಸಿಬಿ ಮ್ಯಾನೇಜ್ ಮೆಂಟ್ ಈಗ ದಿನೇಶ್ ಕಾರ್ತಿಕ್ ರನ್ನು 5 ಕೋಟಿ ನೀಡಿ ಖರೀದಿಸಿದೆ. 36 ರ ಹರೆಯದ ದಿನೇಶ್ ಕಾರ್ತಿಕ್ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ತಮ್ಮ ಸಂಪೂರ್ಣ ಅನುಭವವನ್ನು ಆರ್ಸಿಬಿಗೆ ಧಾರೆ ಎರೆಯುವುದಾಗಿ ಹೇಳಿದ್ದಾರೆ. ಇನ್ನು ನೂತನ ನಾಯಕ ಫಾಪ್ ಡು ಪ್ಲೇಸಿಸ್ ತಾಂತ್ರಿಕವಾಗಿ ನಿಪುಣರಿದ್ದಾರೆ. ಅವರ ನೇತೃತ್ವದಲ್ಲಿ ಈ ಭಾರಿ ಆರ್ಸಿಬಿ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.