ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯಲೇ ಬಾರದು ಎಂದ ವಸೀಂ ಜಾಫರ್, ಯಾಕಂತೆ ಗೊತ್ತೇ? ಪರ್ಫೆಕ್ಟ್ ಆರ್ಸಿಬಿ ಆರಂಭಿಕರು ಯಾರಂತೆ ಗೊತ್ತೇ??

ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯಲೇ ಬಾರದು ಎಂದ ವಸೀಂ ಜಾಫರ್, ಯಾಕಂತೆ ಗೊತ್ತೇ? ಪರ್ಫೆಕ್ಟ್ ಆರ್ಸಿಬಿ ಆರಂಭಿಕರು ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಆರಂಭಕ್ಕೆ ಐದು ದಿನ ಬಾಕಿ ಇರುವ ನಡುವೆ ಎಲ್ಲಾ ತಂಡಗಳು ಅಭ್ಯಾಸದಲ್ಲಿ ತೊಡಗಿಕೊಂಡಿವೆ. ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ನಿಟ್ಟಿನಲ್ಲಿ ಸೂಕ್ತ ರಣತಂತ್ರ ಹೆಣೆಯುತ್ತಿವೆ. ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆಯೂ ಚರ್ಚೆ ನಡೆಸುತ್ತಿವೆ. ಈ ನಡುವೆ ಆರ್ಸಿಬಿ ತಂಡ ಮೊದಲ ಪಂದ್ಯಕ್ಕೆ ಲಭ್ಯವಿರುವ ಆಟಗಾರರ ಹೇಗೆ ಬಳಸಿಕೊಳ್ಳುತ್ತದೆ ಎಂಬ ಚರ್ಚೆ ಸಹ ನಡೆಯುತ್ತಿದೆ. ಈ ವೇಳೆ ಆರ್ಸಿಬಿಗೆ ಗೊಂದಲವಿರುವ ಆರಂಭಿಕ ಆಟಗಾರರ ಸ್ಥಾನದ ಬಗ್ಗೆ ಮಾಜಿ ಆರ್ಸಿಬಿ ಆಟಗಾರ ಹಾಗೂ ಭಾರತ ತಂಡದ ಮಾಜಿ ಆಟಗಾರ ವಾಸೀಂ ಜಾಫರ್ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

ಕಳೆದ ಭಾರಿ ಆರ್ಸಿಬಿ ತಂಡದ ಆರಂಭಿಕರಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಆದರೇ ವಿರಾಟ್ ಆರಂಭಿಕನಾಗಿ ಅಷ್ಟೊಂದು ಯಶ ಕಂಡಿರಲಿಲ್ಲ. ಹಾಗಾಗಿ ಈ ಭಾರಿ ವಿರಾಟ್ ಕೊಹ್ಲಿ ನಾಯಕ ಫಾಪ್ ಡು ಪ್ಲೇಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವ ನಿರ್ಧಾರ ಕೈ ಬಿಡಬೇಕು ಎಂದು ಜಾಫರ್ ಹೇಳಿದ್ದಾರೆ. ತಂಡದಲ್ಲಿ ಈ ಭಾರಿ ಎಬಿ ಡಿ ವಿಲಿಯರ್ಸ್ ಇಲ್ಲ. ಹಾಗಾಗಿ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ಆ ನಿಟ್ಟಿನಲ್ಲಿ ವಿರಾಟ್ ಆರಂಭಿಕರ ಬದಲು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ.

ಆಗ 15 ರಿಂದ 16 ನೇ ಓವರ್ ತನಕ ಕಣದಲ್ಲಿ ಉಳಿಯಬಹುದು. ತಂಡದ ಆರಂಭಿಕರಾಗಿ ನಾಯಕ ಫಾಪ್ ಡು ಪ್ಲೇಸಿಸ್ ಜೊತೆ ಭಾರತೀಯ ಪ್ರತಿಭೆ ಎಡಗೈ ಆಟಗಾರ ಅನುಜ್ ರಾವತ್ ಕಣಕ್ಕಿಳಿದರೇ ಉತ್ತಮ. ಲೆಫ್ಟ್ ರೈಟ್ ಕಾಂಬಿನೇಷನ್ ಸಹ ವರ್ಕೌಟ್ ಆಗುತ್ತದೆ. ತಂಡದ ಬ್ಯಾಟಿಂಗ್ ಡೆಪ್ತ್ ಸಹ ಉತ್ತಮವಾಗಿರುತ್ತದೆ ಎಂಬ ಸಲಹೆ ನೀಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸ್ವೆಲ್ ಸಹ ಮದುವೆಯಾಗಿರುವ ಕಾರಣ ಮೊದಲ ವಾರದ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ. ಹಾಗಾಗಿ ವಿರಾಟ್ ತಮ್ಮ ನೆಚ್ಚಿನ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂದು ಜಾಫರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.