ಹಿಂದಿ ಸಿನೆಮಾಗೆ ಕೊಟ್ಟಿದ್ದೀರಾ, ಅಪ್ಪು ಸಿನೆಮಾಗೆ ನೀಡಿ, ಜೇಮ್ಸ್ ಕುರಿತಂತೆ ಹೊಸ ಮನವಿ ಮುಂದಿಟ್ಟ ಅಪ್ಪು ಫ್ಯಾನ್ಸ್,ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರ ಸಿಎಂ?? ಏನು ಗೊತ್ತೇ??

ಹಿಂದಿ ಸಿನೆಮಾಗೆ ಕೊಟ್ಟಿದ್ದೀರಾ, ಅಪ್ಪು ಸಿನೆಮಾಗೆ ನೀಡಿ, ಜೇಮ್ಸ್ ಕುರಿತಂತೆ ಹೊಸ ಮನವಿ ಮುಂದಿಟ್ಟ ಅಪ್ಪು ಫ್ಯಾನ್ಸ್,ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರ ಸಿಎಂ?? ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರ ಬಿಡುಗಡೆಯಾಗಲು ಕ್ಷಣಗಣನೆ ಗಳು ಮಾತ್ರ ಬಾಕಿ ಉಳಿದಿವೆ. ಮಾರ್ಚ್ 17ರಂದು ಅಪ್ಪು ಅವರ ಜನ್ಮದಿನದ ವಿಶೇಷವಾಗಿ ದೇಶವಿದೇಶಗಳಲ್ಲಿ ಜೇಮ್ಸ್ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರ ಎನ್ನುವ ಕಾರಣಕ್ಕಾಗಿ ಜೇಮ್ಸ್ ಚಿತ್ರ ಈಗಾಗಲೇ ದಾಖಲೆಯ ಅಡ್ವಾನ್ಸ್ ಬುಕಿಂಗ್ ಅನ್ನು ಕೂಡ ಪಡೆದುಕೊಂಡಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದ ಅಂತಹ ಕಲೆಕ್ಷನ್ ಜೇಮ್ಸ್ ಚಿತ್ರಕ್ಕೆ ಸಿಗಲಿದೆ ಎನ್ನುವ ಲೆಕ್ಕಾಚಾರಗಳು ಈಗ ಸಿದ್ಧವಾಗಿದೆ. ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಿಂದೆಂದೂ ಕಾಣಿಸಿಕೊಂಡಿರದಂತಹ ಫುಲ್ ಆಂಡ್ ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮನವಿಯೊಂದನ್ನು ಮಾಡಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇದುವರೆಗೂ ಸರ್ಕಾರಿ ಜಾಹೀರಾತುಗಳಿಗಾಗಿ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಂಡಿಲ್ಲ.

ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಕಾಶ್ಮೀರಿ ಫೈಲ್ಸ್ ಎನ್ನುವ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ರೈತ ಪ್ರದರ್ಶನವನ್ನು ಅನುವು ಮಾಡಿಕೊಟ್ಟಿದೆ. ಇದೇ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರಕ್ಕೆ ಕೂಡ ತೆರಿಗೆ ರಹಿತ ಪ್ರದರ್ಶನವನ್ನು ಮಾಡಿಕೊಡಲು ಅನುವುಮಾಡಿಕೊಡಬೇಕು ಎಂಬುದಾಗಿ ಅಭಿಮಾನಿಗಳು ಆಗ್ರಹಿಸಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಕೂಡಾ ರಾಜ್ ಕುಟುಂಬದವರಿಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಸಾಕಷ್ಟು ಸಹಾಯ ಮಾಡಿದ್ದರು. ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ಘೋಷಿಸಿದ್ದರು. ಅಪ್ಪು ಅವರು ಎಂದರೆ ಮುಖ್ಯಮಂತ್ರಿಗಳಿಗೂ ಕೂಡ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅಭಿಮಾನಿಗಳ ಈ ಕೋರಿಕೆಯನ್ನು ಈಡೇರಿಸುತ್ತಾರ ಎಂಬುದನ್ನು ಕಾದುನೋಡಬೇಕಾಗಿದೆ.