ಡೆಲ್ಲಿ ಆರ್ಸಿಬಿ ತಂಡಗಳ ಬೆನ್ನಲೇ ಲಕ್ನೋ ತಂಡಕ್ಕೆ ಕೂಡ ಬಿಗ್ ಶಾಕ್, ಕೋಟಿ ಕೋಟಿ ಖರ್ಚು ಮಾಡಿದ್ದು ವ್ಯರ್ಥ. ಯಾಕೆ ಗೊತ್ತೇ??

ಡೆಲ್ಲಿ ಆರ್ಸಿಬಿ ತಂಡಗಳ ಬೆನ್ನಲೇ ಲಕ್ನೋ ತಂಡಕ್ಕೆ ಕೂಡ ಬಿಗ್ ಶಾಕ್, ಕೋಟಿ ಕೋಟಿ ಖರ್ಚು ಮಾಡಿದ್ದು ವ್ಯರ್ಥ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಆರಂಭಕ್ಕೆ ಹದಿನೈದು ದಿನ ಮಾತ್ರ ಬಾಕಿ ಇರುವ ಈ ಸಮಯದಲ್ಲಿ ಒಂದಾದ ಮೇಲೆ ಒಂದರಂತೆ ಈಗ ಫ್ರಾಂಚೈಸಿಗಳಿಗೆ ಶಾಕ್ ಗಳು ಬರುತ್ತಿವೆ. ಹೌದು ಈ ಭಾರಿಯ ಕನ್ನಡಿಗರ ತಂಡ ಎಂದು ಹೆಸರುವಾಸಿಯಾಗಿರುವ, ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಈ ಭಾರಿ ಕನ್ನಡಿಗರದ್ದೇ ಸಿಂಹಪಾಲು. ಕೆ‌.ಎಲ್.ರಾಹುಲ್, ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್ ತಂಡದಲ್ಲಿ ಇದ್ದಾರೆ.

ಈಗ ಈ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು ತಂಡದ ಪ್ರಮುಖ ಬೌಲರ್ ಆಗಿದ್ದ ಇಂಗ್ಲೆಂಡ್ ನ ಮಾರ್ಕ್ ವುಡ್ ಈಗ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಗಂಟೆಗೆ 150 ಕೀ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ವುಡ್, ಸದ್ಯ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದರು. ಆದರೇ ಫೀಲ್ಡಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ.

ಈ ಗಾಯ ಗಂಭೀರ ಸ್ವರೂಪದ್ದಾಗಿದ್ದು ಕನಿಷ್ಠ ಒಂದು ವರ್ಷಗಳ ಕಾಲ ಕ್ರಿಕೇಟ್ ನಿಂದ ದೂರವುಳಿಯುವ ಪ್ರಸಂಗ ಎದುರಾಗಲಿದೆ ಎಂದು ಹೇಳಲಾಗಿದೆ. ಹೀಗಾದರೇ ಮಾರ್ಕ್ ವುಡ್ ಸೇವೆಯಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ವಂಚಿತವಾಗಲಿದೆ. ಈಗಾಗಲೇ ಲಕ್ನೋ ತಂಡದ ಬೌಲಿಂಗ್ ವಿಭಾಗದಲ್ಲಿ ವೇಗಿ ಆವೇಶ್ ಖಾನ್, ದುಷ್ಯಂತ ಚಾಮೀರಾ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಬಿಟ್ಟರೇ ಹೇಳಿಕೊಳ್ಳುವಂತಹ ಬೌಲರ್ ಗಳಿಲ್ಲ. ಇದು ತಂಡದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಮಾರ್ಕ್ ವುಡ್ ಬದಲು ಯಾವ ಬದಲಿ ಆಟಗಾರ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.