ಅಪ್ಪು ರವರ ಕೊನೆಯ ಚಿತ್ರದ ಫೋಟೋಗಳು ವೈರಲ್, ಒಂದೊಂದು ಲುಕ್ ನಲ್ಲಿ ಹೇಗೆ ಕಾಣುತ್ತಾರೆ ಗೊತ್ತೇ?? ಸೈನಿಕನಾಗಿರುವ ಅಪರೂಪದ ಲುಕ್ ಗಳು.

ಅಪ್ಪು ರವರ ಕೊನೆಯ ಚಿತ್ರದ ಫೋಟೋಗಳು ವೈರಲ್, ಒಂದೊಂದು ಲುಕ್ ನಲ್ಲಿ ಹೇಗೆ ಕಾಣುತ್ತಾರೆ ಗೊತ್ತೇ?? ಸೈನಿಕನಾಗಿರುವ ಅಪರೂಪದ ಲುಕ್ ಗಳು.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರವನ್ನು ಅವರ ಜನ್ಮದಿನದಂದು ಹಬ್ಬದ ರೀತಿಯಂತೆ ರಾಜ್ಯಾದ್ಯಂತ ವಿಶ್ವಾದ್ಯಂತ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪು ಅವರು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಇನ್ನು ಮುಂದೆ ಅವರ ನಟನೆಯನ್ನು ನೋಡಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಕನಸಿನಲ್ಲಿ ಅಂದುಕೊಂಡರು ಕೂಡ ನಡುಕ ಮೂಡಿಬರುತ್ತದೆ.

ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ನಾಯಕಿಯಾಗಿ ರಾಜಕುಮಾರ ಚಿತ್ರದ ಖ್ಯಾತಿಯ ನಟಿ ಪ್ರಿಯಾ ಆನಂದ್ ಅವರು ನಟಿಸಿದ್ದಾರೆ. ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ. ದ್ವಿತೀಯಾರ್ಧದಲ್ಲಿ ಅಪ್ಪು ಅವರ ಧ್ವನಿಗೆ ಧ್ವನಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ ಎಂಬ ವಿಚಾರವೂ ಕೂಡ ಇತ್ತೀಚೆಗೆ ತಿಳಿದುಬಂದಿದೆ. ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಒಂದು ಲುಕ್ ಸಾಕಷ್ಟು ಸೋಶಿಯಲ್ ಮೀಡಿಯಾ ಗಳಲ್ಲಿ ಸದ್ದು ಮಾಡುತ್ತಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ಆರ್ಮಿ ಆಫೀಸರ್ ಲುಕ್ ಈಗಾಗಲೇ ಎಲ್ಲಾ ಕಡೆ ವೈರಲ್ ಆಗಿದ್ದು ಈ ಕುರಿತಂತೆ ಸಲಾಂ ಸೋಲ್ಜರ್ ಎನ್ನುವ ಹಾಡು ಕೂಡ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗಿದೆ. ಆರ್ಮಿ ಆಫೀಸರ್ ಪಾತ್ರವೆಂದರೆ ಖಂಡಿತವಾಗಿ ಮಹತ್ವದ ಹಾಗೂ ದೇಶಭಕ್ತಿ ಇರುವಂತಹ ಸಬ್ಜೆಕ್ಟ್ ಅನ್ನು ಚಿತ್ರ ಒಳಗೊಂಡಿದೆ ಎಂಬುದಾಗಿ ಈಗಾಗಲೆ ಅಭಿಮಾನಿಗಳು ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ. ಅದೇನೇ ಇರಲಿ ಜೇಮ್ಸ್ ಚಿತ್ರವನ್ನು ನೋಡಲು ಈಗಾಗಲೇ ಕೇವಲ ಅವರ ಅಭಿಮಾನಿಗಳು ಮಾತ್ರವಲ್ಲದೆ ಪರಭಾಷಿಗರು ಕೂಡ ಕಾತರರಾಗಿದ್ದಾರೆ. ಹೀಗಾಗಿ ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಬ್ರೇಕ್ ದಾಖಲೆ ಮಾಡಲಿದೆ ಎಂಬುದಂತೂ ಸತ್ಯ.