ಇಹಲೋಕ ತ್ಯಜಿಸಿದ ಶೇನ್ ವಾರ್ನ್ ರವರ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಗವಾಸ್ಕರ್, ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಯಾಕೆ ಗೊತ್ತೇ??

ಇಹಲೋಕ ತ್ಯಜಿಸಿದ ಶೇನ್ ವಾರ್ನ್ ರವರ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಗವಾಸ್ಕರ್, ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರೆಂದರೇ ಮೊದಲು ನೆನಪಿಗೆ ಬರುವುದು ವಿಶ್ವ ಕ್ರಿಕೆಟ್ ನ ದಂತಕತೆ, ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇವರ ದಾಖಲೆಯನ್ನು ಮುರಿಯುವುದು ಸದ್ಯದ ಮಟ್ಟಿಗೆ ಅಸಾಧ್ಯ. ಆದರೇ ಅಂತಹ ಗಟ್ಟಿಗ ಶೇನ್ ವಾರ್ನ್ ನಿನ್ನೆಯ ದಿನಾ ಏಕಾಏಕಿ ಇಹಲೋಕ ತ್ಯಜಿಸಿರುವುದು ವಿಶ್ವ ಕ್ರಿಕೆಟ್ ಜಗತ್ತನ್ನು ದುಖಃದಲ್ಲಿ ಮುಳುಗಿಸಿತ್ತು.

ಕ್ರಿಕೆಟ್ ಲೋಕದ ದಿಗ್ಗಜ ಆಟಗಾರರು ಶೇನ್ ವಾರ್ನ್ ಜೊತೆ ತಾವು ಕಳೆದ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡು ಅಗಲಿದ ಕ್ರಿಕೇಟಿಗನಿಗೆ ಸಂತಾಪ ಸೂಚಿಸಿದರು. ಆದರೇ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಮಾತ್ರ ಶೇನ್ ವಾರ್ನ್ ಶ್ರೇಷ್ಠ ಸ್ಪಿನ್ನರ್ ಆಗಿರಲಿಲ್ಲ ಎಂದು ಹೇಳಿದರು. ಇದು ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಸುನಿಲ್ ಗವಾಸ್ಕರ್ ನೀಡಿದ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಖಂಡಿಸುತ್ತಿದ್ದಾರೆ. ಗವಾಸ್ಕರ್ ಆ ರೀತಿಯ ಹೇಳಿಕೆಯನ್ನು ಏಕೆ ನೀಡಿದ್ದರೆಂಬುದನ್ನು ಒಮ್ಮೆ ತಿಳಿಯೋಣ ಬನ್ನಿ.

ಸುನಿಲ್ ಗವಾಸ್ಕರ್ ರವರ ಪ್ರಕಾರ ಶ್ರೇಷ್ಠ ಸ್ಪಿನ್ನರ್ ಎಂದರೇ ಶ್ರೀಲಂಕಾ ದ ಮುತ್ತಯ್ಯ ಮುರಳೀಧರನ್ ಹಾಗೂ ಭಾರತದ ಸ್ಪಿನ್ನರ್ ಗಳು. ಸ್ಪಿನ್ನರ್ ಗಳ ಸ್ವರ್ಗ ಎಂದು ಕರೆಯುವ ಭಾರತದ ಪಿಚ್ ಗಳಲ್ಲಿ ಶೇನ್ ವಾರ್ನ್ ದಾಖಲೆಯನ್ನು ಒಮ್ಮೆ ನೋಡಿ. ದಶಕಗಳ ಕಾಲ ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ವಾರ್ನ್ ಭಾರತದಲ್ಲಿ ಹಲವಾರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೇ ಕೇವಲ ಒಂದೇ ಒಂದು ಪಂದ್ಯದಲ್ಲಿ ಐದು ವಿಕೇಟ್ ಗೊಂಚಲು ಪಡೆದಿದ್ದಾರೆ. ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಹೀಗೆ ಪ್ರದರ್ಶನ ನೀಡಿರುವ ಇವರನ್ನು ವಿಶ್ವದ ಶ್ರೇಷ್ಠ ಸ್ಪಿನ್ನರ್ ಎಂದು ಹೇಗೆ ಕರೆಯುತ್ತಿರಿ, ಅವರು ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೇ ಶ್ರೇಷ್ಠ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ವಾರ್ನ್ ಅಗಲಿಕೆಗೆ ವಿಶ್ವದ ಎಲ್ಲಾ ಕ್ರಿಕೇಟರ್ ಗಳು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.