ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಐಪಿಎಲ್ ಆರಂಭಕ್ಕೂ ಮುನ್ನವೇ ಒಮ್ಮೆ ಎಲ್ಲಾ ಫ್ರಾಂಚೈಸ್ ಗಳಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ, ಅಸಮಾಧಾನಗೊಂಡ ತಂಡಗಳು, ಯಾಕೆ ಗೊತ್ತೇ??

776

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಆವೃತ್ತಿ ಇದೇ ಮಾರ್ಚ್ 26 ರಿಂದ ನಡೆಯಲಿದೆ. ಈಗಾಗಲೇ ಐಪಿಎಲ್ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಈ ಭಾರಿ ಐಪಿಎಲ್ ಮುಂಬೈ ನ ನಾಲ್ಕು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿದೆ. ಮಾರ್ಚ್ 26 ರಿಂದ ಆರಂಭವಾಗುವ ಈ ಟೂರ್ನಿಯ ಲೀಗ್ ಪಂದ್ಯಗಳು ಮೇ 19 ರಿಂದ ನಡೆಯಲಿವೆ. ಪ್ಲೇ ಆಫ್ ಪಂದ್ಯಗಳು ಟೂರ್ನಿಯ ಮಧ್ಯಂತರದಲ್ಲಿ ಘೋಷಿಸುವ ಸಾಧ್ಯತೆ ಇದೆ. ಐಪಿಎಲ್ ನ ಫೈನಲ್ ಪಂದ್ಯ ಮೇ 29 ರಂದು ನಡೆಯಲಿದೆ.

ಈಗಾಗಲೇ ಎಲ್ಲಾ ಐಪಿಎಲ್ ಹೊತ್ತು ತಂಡಗಳು ತಾವು ಹರಾಜಿನಲ್ಲಿ ಖರೀದಿಸಿದ ಆಟಗಾರರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿವೆ. ಭಾರತ ಮತ್ತು ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಸ್ಥಾನ ಸಿಗದ ಆಟಗಾರರನ್ನು ಈಗಿನಿಂದಲೇ ತರಬೇತಿ ಶಿಬಿರದಲ್ಲಿ ಸೇರಿಸುವ ಯೋಜನೆ ಹಾಕಿಕೊಂಡಿತ್ತು. ಆದರೇ ಫ್ರಾಂಚೈಸಿಗಳ ಈ ಆಸೆಗೆ ಬಿಸಿಸಿಐ ತಣ್ಣೀರು ಎರಚಿದೆ. ಹೌದು ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯದ ಆಟಗಾರರು ನೇರವಾಗಿ ಐಪಿಎಲ್ ಶಿಬಿರಗಳಲ್ಲಿ ಭಾಗವಹಿಸಬಾರದು ಎಂದು ಹೇಳಿದೆ.

ಅದರ ಬದಲು ಬೆಂಗಳೂರಿನಲ್ಲಿರುವ ಎನ್.ಸಿ.ಎ ಶಿಬಿರದಲ್ಲಿ ಭಾಗವಹಿಸಲು ಸೂಚಿಸಿದೆ. ಅಲ್ಲಿ ಮುಖ್ಯಸ್ಥರಾದ ವಿ.ವಿ.ಎಸ್.ಲಕ್ಷ್ಮಣ್ ಮೇಲ್ವಿಚಾರಣೆಯಲ್ಲಿ ಆಟಗಾರರ ಫಿಟ್ ನೆಸ್ ಹಾಗೂ ಯೋ ಯೋ ಟೆಸ್ಟ್ ನಡೆಯಲಿದೆ. ಅಲ್ಲಿ ಉತ್ತೀರ್ಣರಾದರಷ್ಟೆ ಐಪಿಎಲ್ ಆಡಲು ಅನುಮತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆಟಗಾರರು ಫಿಟ್ ಇಲ್ಲದೇ ಐಪಿಎಲ್ ಆಡಿದರೇ ಗಾಯಗೊಳ್ಳುವ ಸಾಧ್ಯತೆ ಇದೆ. ಇದು ಐಪಿಎಲ್ ನಂತರ ಮುಂಬರುವ ಸರಣಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಭಾರತ ತಂಡದ ಸೀಮಿತ ಓವರ್ ಗಳ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ವೆಂಕಟೇಶ್ ಅಯ್ಯರ್, ಎನ್‌.ಸಿ.ಎ ಯಲ್ಲಿ ಇದ್ದಾರೆ. ಹಾರ್ದಿಕ್ ಪಾಂಡ್ಯ ಸಹ ಶೀಘ್ರದಲ್ಲೇ ಆಗಮಿಸುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.