ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಡುಗಡೆಯಾದ ಕೆಲವೇ ವಾರಗಳಲ್ಲಿ ರಾಮಾಚಾರಿಗೆ ಮೊದಲನೇ ಶಾಕ್, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರು ನಡೆದ್ದದೇನು ಗೊತ್ತೇ??

580

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳಿಗೆ ಕರ್ನಾಟಕದ ಪ್ರೇಕ್ಷಕರು ಮನಸೋತಿದ್ದಾರೆ ಎನ್ನುವ ಕಾರಣಕ್ಕಾಗಿ ವಾಹಿನಿಗಳು ಹೊಸಹೊಸ ಧಾರವಾಹಿಗಳನ್ನು ಪ್ರಸಾರವ ಮಾಡುತ್ತಿದ್ದಾರೆ. ಅವುಗಳಲ್ಲಿ ಇತ್ತೀಚಿಗೆ ಪ್ರಾರಂಭವಾಗಿರುವ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿ ಕೂಡ ಒಂದು. ಧಾರವಾಹಿ ಪ್ರಸಾರವನ್ನು ಆರಂಭಿಸಿದ ದಿನದಿಂದಲೂ ಕೂಡ ಎಲ್ಲರ ಮನವನ್ನು ಗೆಲ್ಲುತ್ತ ಬಂದಿದೆ. ಇನ್ನು ಮೊದಲ ಬಾರಿಗೆ ಟಿ ಆರ್ ಪಿ ವಿಚಾರದಲ್ಲಿ ರಾಮಾಚಾರಿ ಧಾರವಾಹಿ ಪ್ರೇಕ್ಷಕರಿಗೆ ಆಶ್ಚರ್ಯಕರ ಫಲಿತಾಂಶವನ್ನು ನೀಡಿದೆ. ಹಾಗಿದ್ದರೆ ಟಾಪ್-5 ಧಾರವಾಹಿಗಳು ಯಾವುದು ಎನ್ನುವುದನ್ನು ತಿಳಿಯೋಣ ಬನ್ನಿ.

ಐದನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿ ಕಂಡುಬರುತ್ತದೆ. ಅಖಿಲಾಂಡೇಶ್ವರಿ ರವರ ಪುತ್ರ ಆದಿತ್ಯನ ವಿವಾಹ ಪಾರು ಜೊತೆಗೆ ನಡೆದಿರುವುದು ಧಾರವಾಹಿಯ ಕಥಾವಸ್ತುವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದೆ. ಪ್ರೇಕ್ಷಕರು ಪಾರು ಧಾರಾವಾಹಿಯನ್ನು ಇತ್ತೀಚಿಗೆ ಸಾಕಷ್ಟು ಇಷ್ಟಪಡುತ್ತಿದ್ದಾರೆ.

ರೇಟಿಂಗ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಧಾರವಾಹಿ ಕಂಡುಬರುತ್ತದೆ. ಅನುಸಿರಿಮನೆ ಈಗಾಗಲೇ ಆರ್ಯವರ್ಧನ ನಿಜಬಣ್ಣ ಬಯಲಾಗಿದೆ. ಆತನ ನಿಜ ಹೆಸರು ಸುಭಾಷ್ ಪಾಟೀಲ್ ಎನ್ನುವುದು ಕೂಡ ತಿಳಿದುಬಂದಿದೆ. ಜಲಂಧರ್ ಹಾಗೂ ರಾಜ ನಂದಿನಿಯ ಪರಿಚಯದ ಕೂಡ ಈಗಾಗಲೇ ಅನುಗೆ ಆಗಿದೆ. ಈಗ ಆರ್ಯವರ್ಧನ್ ಸೀಕ್ರೆಟ್ ರೂಮ್ ಅನ್ನು ಅನುಗೆ ತೋರಿಸಲು ಸಜ್ಜಾಗಿದ್ದಾನೆ. ಹೀಗಾಗಿ ಅದರಲ್ಲಿ ಏನಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಕೂಡ ಹೆಚ್ಚಾಗಿದೆ.

ಮೂರನೇ ಸ್ಥಾನದಲ್ಲಿ ದಿಲೀಪ್ ರಾಜ್ ನಿರ್ಮಾಣದ ಹಿಟ್ಲರ್ ಕಲ್ಯಾಣ ಧಾರಾವಾಹಿ ಕಂಡುಬರುತ್ತದೆ. ಎಜೆ ಹಾಗೂ ಲೀಲಾ ನಡುವಿನ ಮುಸುಕಿನ ಗುದ್ದಾಟ ದಂತಿರುವ ಕಥನವನ್ನು ಹೊಂದಿರುವ ಹಿಟ್ಲರ್ ಕಲ್ಯಾಣ ಧಾರವಾಹಿ ದಿನೇದಿನೇ ಹೊಸ ಟ್ವಿಸ್ಟ್ ಹಾಗೂ ಟರ್ನ್ ಗಳಿಂದಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎರಡನೇ ಸ್ಥಾನದಲ್ಲಿ ರಕ್ಷ ನಟನೆಯ ಗಟ್ಟಿಮೇಳ ಧಾರವಾಹಿ ಕಂಡುಬರುತ್ತದೆ. ಗಟ್ಟಿಮೇಳ ಧಾರವಾಹಿ ಮೊದಲಿನಿಂದಲೂ ಕೂಡ ಪ್ರೇಕ್ಷಕರನ್ನು ಹೆಚ್ಚಿಸಿಕೊಂಡು ಬಂದಂತಹ ಸೂಪರ್ಹಿಟ್ ಧಾರವಾಹಿ. ಸುಹಾಸಿನಿ ಕಾರಣದಿಂದಾಗಿ ವೇದಾಂತ್ ಹಾಗೂ ವಿಕ್ರಮ್ ನಡುವಿನ ಭಿನ್ನಾಭಿಪ್ರಾಯವು ಇತ್ತೀಚಿನ ದಿನಗಳಲ್ಲಿ ಧಾರವಾಹಿಯ ಪ್ರಮುಖ ಕಥಾವಸ್ತುವಾಗಿದೆ. ಇದು ಈಗ ಪ್ರೇಕ್ಷಕರನ್ನು ಕುತೂಹಲದಲ್ಲಿ ಇಟ್ಟುಕೊಂಡಿರುವ ಅಂಶವಾಗಿದೆ.

ಮೊದಲನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಂಡುಬರುತ್ತದೆ. ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೆಲವು ಸಮಯಗಳ ಹಿಂದಷ್ಟೇ ಪ್ರಾರಂಭವಾಗಿದ್ದು ಪ್ರಾರಂಭವಾದ ದಿನದಿಂದಲೂ ಕೂಡ ಇಲ್ಲಿಯವರೆಗೆ ಮೊದಲನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ. ಕುಟುಂಬ ಸಮೇತರಾಗಿ ಈ ಧಾರವಾಹಿಯನ್ನು ಕುಳಿತು ನೋಡುತ್ತಿದ್ದಾರೆ ಎನ್ನುವುದು ಕೂಡ ತಿಳಿದುಬಂದಿದೆ.

ಈಗ ರಾಮಾಚಾರಿ ಧಾರಾವಾಹಿ ನಿಮಗೆಲ್ಲ ತಿಳಿದಿರುವಂತೆ ಯಾವಾಗಲೂ ಟಾಪ್ 5 ರ ಸ್ಥಾನದಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ಟಾಪ್ ಐದರ ಸ್ಥಾನದಿಂದ ರಾಮಾಚಾರಿ ಧಾರವಾಹಿ ಹೊರಬಂದಿದೆ. ಪ್ರಾರಂಭದಿಂದಲೂ ಕೂಡ ಕಲರ್ಸ್ ಕನ್ನಡ ವಾಹಿನಿಯ ಇತ್ತೀಚಿನ ದಿನಗಳಲ್ಲಿ ಟಾಪ್ ಧಾರಾವಾಹಿಯಾಗಿ ರಾಮಚಾರಿ ಕಂಡುಬಂದಿತ್ತು. ಎಲ್ಲಾ ಬಗೆಯ ಪ್ರೇಕ್ಷಕರ ಮನವನ್ನು ಗೆದ್ದಂತಹ ಧಾರವಾಹಿ ಈಗ ಇದರ ಸ್ಥಾನದಿಂದ ಹೊರಗೆ ಬಿದ್ದಿರುವುದು ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ. ಕಲರ್ಸ್ ಕನ್ನಡ ವಾಹಿನಿ ಧಾರಾವಾಹಿ ಟಿ ಆರ್ ಪಿ ರೇಟಿಂಗ್ ನಲ್ಲಿ ಹಿಂದೆ ಬಿದ್ದಿತ್ತು. ರಾಮಾಚಾರಿ ಧಾರವಾಹಿ ಬಂದನಂತರ ಇದರಲ್ಲಿ ಕಂಡುಬಂದಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರವೂ ಕೂಡ ಇಂತಹ ಬೆಳವಣಿಗೆ ಕಂಡು ಬಂದಿರುವುದು ಆಶ್ಚರ್ಯಕರವಾಗಿದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಧಾರವಾಹಿ ಯಾವುದು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.

Get real time updates directly on you device, subscribe now.