ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಲಕ್ನೋ ತಂಡದಲ್ಲಿ, ಕೆ.ಎಲ್.ರಾಹುಲ್ ನಾಯಕತ್ವದಡಿಯಲ್ಲಿ ಆಡಲಿರುವ ಐವರು ಮಾಜಿ ಆರ್ಸಿಬಿ ಆಟಗಾರರು ಯಾರ್ಯಾರು ಗೊತ್ತೇ??

55

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಸೀಸನ್ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. ಈ ಭಾರಿ ಹೊಸ ತಂಡವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹ ಸಾಕಷ್ಟು ಗಮನ ಸೆಳೆಯುತ್ತಿದೆ. ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವ ಈ ತಂಡಕ್ಕಿದೆ. ಈ ಹಿಂದೆ ಆರ್ಸಿಬಿ ತಂಡಕ್ಕೆ ಆಡಿ ಈಗ ರಾಹುಲ್ ನಾಯಕತ್ವದಡಿಯಲ್ಲಿ ಲಕ್ನೋ ತಂಡದ ಪರ ಆಡುತ್ತಿರುವ ಐವರು ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

1.ಮಾರ್ಕಸ್ ಸ್ಟೋಯಿನಿಸ್ – ಆಸ್ಟ್ರೇಲಿಯಾದ ಈ ಆಲ್ ರೌಂಡರ್ 2019ರಲ್ಲಿ ಆರ್ಸಿಬಿ ತಂಡದ ಆಟಗಾರರಾಗಿದ್ದರು. ನಂತರ ಡೆಲ್ಲಿ ತಂಡದ ಪರ ಆಡಿದ್ದರು. ಈ ಭಾರಿ ಲಕ್ನೋ ತಂಡ ಅವರನ್ನು ಖರೀದಿಸಿದೆ.

2.ಆವೇಶ್ ಖಾನ್ – ವೇಗದ ಬೌಲರ್ ಆವೇಶ್ ಖಾನ್ 2017 ರಲ್ಲಿ ಆರ್ಸಿಬಿ ತಂಡದ ಆಟಗಾರರಾಗಿದ್ದರು. ಆದರೇ ಅಂದು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ನಂತರ ಡೆಲ್ಲಿ ತಂಡದ ಪರ ಆಡಿ ಎಲ್ಲರ ಗಮನ ಸೆಳೆದರು. ಈ ಭಾರಿ ಅವರನ್ನು ಬರೋಬ್ಬರಿ 10 ಕೋಟಿಗೆ ಲಕ್ನೋ ತಂಡ ಖರೀದಿಸಿದೆ.

3.ಕ್ವಿಂಟನ್ ಡಿ ಕಾಕ್ – ಸೌತ್ ಆಫ್ರಿಕಾದ ವಿಕೇಟ್ ಕೀಪರ್ ಬ್ಯಾಟ್ಸಮನ್ ಡಿ ಕಾಕ್ 2018ರಲ್ಲಿ ಆರ್ಸಿಬಿ ತಂಡದ ಪ್ರಮುಖ ಭಾಗವಾಗಿದ್ದರು. ನಂತರ ಹರಾಜಿನಲ್ಲಿ ಮುಂಬೈ ತಂಡ ಸೇರಿಕೊಂಡಿದ್ದರು. ಈ ಭಾರಿ ಅವರು ಲಕ್ನೋ ತಂಡದ ಪರ ಆಡಲಿದ್ದಾರೆ.

4.ಮನೀಶ್ ಪಾಂಡೆ – ಕನ್ನಡಿಗ ಮನೀಶ್ ಪಾಂಡೆ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ ಅನ್ ಕ್ಯಾಪ್ಡ್ ಪ್ಲೇಯರ್. ಇವರು 2009ರಲ್ಲಿ ಆರ್ಸಿಬಿ ತಂಡದ ಆಧಾರಸ್ತಂಭವಾಗಿದ್ದರು. ನಂತರ ಇವರು ಬೇರೆ ಬೇರೆ ಫ್ರಾಂಚೈಸಿಗಳ ಪರ ಆಡಿದರು. ಇವರು ಸದ್ಯ ಲಕ್ನೋ ತಂಡದ ಪಾಲಾಗಿದ್ದಾರೆ. ಮೈದಾನದಲ್ಲಿ ರಾಹುಲ್ ಮತ್ತು ಇವರ ಮಧ್ಯೆ ಕನ್ನಡದ ಸಂಭಾಷಣೆಯನ್ನು ನಾವು ಕೇಳಬಹುದು.

5.ಮನನ್ ವೋಹ್ರಾ – 2018 ರಲ್ಲಿ ಆರ್ಸಿಬಿ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿದ್ದ ಮನನ್ ವೋಹ್ರಾ ಈ ಭಾರಿ ಲಕ್ನೋ ತಂಡದ ಪರ ಆಡುತ್ತಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.