ಅಂತೂ ಇಂತೂ ಪುನೀತ್ ಕನಸಿಗೆ ಜೀವ ತುಂಬಿದ ರಾಜ್ಯ ಬಜೆಟ್, ಸ್ವರ್ಗದಿಂದಲೇ ಅಪ್ಪು ಖುಷಿ ಪಡುವುದು ಖಚಿತ. ಹೊಸ ಆದೇಶ ಏನು ಗೊತ್ತೇ??

ಅಂತೂ ಇಂತೂ ಪುನೀತ್ ಕನಸಿಗೆ ಜೀವ ತುಂಬಿದ ರಾಜ್ಯ ಬಜೆಟ್, ಸ್ವರ್ಗದಿಂದಲೇ ಅಪ್ಪು ಖುಷಿ ಪಡುವುದು ಖಚಿತ. ಹೊಸ ಆದೇಶ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪುನೀತ್ ರಾಜಕುಮಾರ್ ರವರ ನಡೆಸುತ್ತಿರುವ ಅಂತಹ ಶಕ್ತಿಧಾಮ ಸಂಸ್ಥೆಯ ಕುರಿತಂತೆ ಅವರ ಮರಣದ ನಂತರವೇ ಎಲ್ಲರಿಗೂ ಸರಿಯಾಗಿ ತಿಳಿದಿದ್ದು. ಅಸಹಾಯಕ ಹೆಣ್ಣು ಮಕ್ಕಳಿಗೆ ಶಕ್ತಿಧಾಮ ಸಂಸ್ಥೆಯ ಮೂಲಕ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ದಂಪತಿಗಳು ಮಾಡುತ್ತಿದ್ದ ಕೆಲಸವನ್ನು ಗೆದ್ದಿತ್ತು. ಈ ಸಂಸ್ಥೆಯನ್ನು ಮೂಲತಹ ಪ್ರಾರಂಭಿಸಿದ್ದು ದೊಡ್ಡಮನೆಯ ತಾಯಿಯಾಗಿದ್ದ ಪಾರ್ವತಮ್ಮನವರು. ಅವರ ನಂತರ ಈ ಸಂಸ್ಥೆಯನ್ನು ಸಂಪೂರ್ಣವಾಗಿ ಅಧೀನಕ್ಕೆ ತೆಗೆದುಕೊಂಡಿದ್ದು ಪುನೀತ್ ರಾಜಕುಮಾರ್ ಅವರು.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದಂತಹ ಬಹುತೇಕ ಎಲ್ಲ ಹಣವನ್ನು ಈ ಆಶ್ರಮದ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದಾರೆ. ಈಗಾಗಲೇ ಈ ಸಂಸ್ಥೆಯಲ್ಲಿ 200 ಜನ ಹೆಣ್ಣು ಮಕ್ಕಳು ಇದ್ದಾರೆ. ಇವರು ಬೇರೆ ಬೇರೆ ಕಾಲೇಜು ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರಂತೆ. ಹೀಗಾಗಿ ಪುನೀತ್ ರಾಜಕುಮಾರ್ ರವರಿಗೆ ಎಲ್ಲರೂ ಕೂಡ ಶಕ್ತಿಧಾಮ ದ ಪ್ರಾಂಗಣದಲ್ಲೇ ಶಾಲೆಯಲ್ಲಿ ಕಲಿಯಲಿ ಎಂಬುದಾಗಿ ಆಸೆಯನ್ನು ಪಟ್ಟಿದ್ದರು. ಇದಕ್ಕಾಗಿ ಶಾಲೆಯನ್ನು ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ನಾಲ್ಕು ಸಕ್ಕರೆ ಜಾಗವನ್ನು ಕೂಡ ಗುರುತು ಹಾಕಿ 15 ಕೋಟಿ ರೂಪಾಯಿ ವೆಚ್ಚದ ನೀಲಿನಕ್ಷೆಯನ್ನು ಕೂಡ ಸಿದ್ಧಪಡಿಸಲಾಗಿತ್ತು. 1ರಿಂದ 8ನೇ ತರಗತಿಯವರೆಗೆ ಶಾಲೆಯನ್ನು ನಿರ್ಮಿಸುವ ಯೋಜನೆ ಹಾಕಲಾಗಿತ್ತು. ಅಧಿಕಾರಿಗಳು ಈ ಕುರಿತಂತೆ ಜಾಗವನ್ನು ಸರ್ವೆ ಮಾಡಲು ಕೂಡ ಬಂದಿದ್ದರಂತೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕನಸು ನನಸಾಗುವ ಮುನ್ನವೇ ಅವರು ಬಾರದ ಲೋಕಕ್ಕೆ ಹೋಗಿದ್ದರು. ಹೀಗಾಗಿ ಅವರ ಕನಸು ಅಪೂರ್ಣವಾಗಿ ಉಳಿದುಕೊಂಡಿತ್ತು.

ಆದರೆ ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ಮಂಡಿಸಿರುವ ಬಜೆಟ್ ನಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಆಗಿರುವ ಕೆಂಪಯ್ಯನವರ ಮನವಿ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಅದರಲ್ಲೂ ಅಪ್ಪು ರವರ ಮರಣದ ನಂತರ ಶಿವಣ್ಣ ಶಕ್ತಿಧಾಮ ಆಶ್ರಮದ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗಲಿ ಎಂಬ ಕಾರಣಕ್ಕಾಗಿ ಪಡುತ್ತಿರುವ ಶ್ರಮ ನಿಜಕ್ಕೂ ಕೂಡ ಗಮನಾರ್ಹವಾದದ್ದು. ನಿಜಕ್ಕೂ ಇವನ್ನೆಲ್ಲಾ ನೋಡಿ ತನ್ನ ಕನಸು ನನಸಾಯ್ತು ಎಂಬುದಾಗಿ ಅಪ್ಪು ರವರ ಆತ್ಮ ಸಂತೋಷಪಡುವುದು ನಿಜ.