ಇದಪ್ಪ ಮಾತು ಅಂದ್ರೆ, ಆಪರೇಷನ್ ಗಂಗಾಯಿಂದ ವಾಪಸ್ಸಾದ ಯುವಕ ಕೃತಜ್ಞತೆ ಸಲ್ಲಿಸಲು ಏನು ಮಾಡುತ್ತಾರಂತೆ ಗೊತ್ತೆ??

ಇದಪ್ಪ ಮಾತು ಅಂದ್ರೆ, ಆಪರೇಷನ್ ಗಂಗಾಯಿಂದ ವಾಪಸ್ಸಾದ ಯುವಕ ಕೃತಜ್ಞತೆ ಸಲ್ಲಿಸಲು ಏನು ಮಾಡುತ್ತಾರಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ವಿಶ್ವ ಹಲವಾರು ವಿಚಾರಗಳಿಂದ ತತ್ತರಿಸಿ ಹೋಗಿದೆ ಎಂದರೆ ತಪ್ಪಾಗಲಾರದು. ಹೌದು ಈಗಾಗಲೇ ಈ ಹಿಂದೆ ಮಹಾಮಾರಿಯ ಕಾರಣದಿಂದಾಗಿ ಅದೆಷ್ಟೋ ಜನರು ಮರಣವನ್ನು ಹೊಂದಿದರು. ಆದರೆ ಈಗ ಉಕ್ರೇನ್ ಹಾಗೂ ರಷ್ಯಾ ನಡುವಣ ಸಮರದಿಂದಾಗಿ ಮೂರನೇ ಮಹಾಯುದ್ಧ ಕಪ್ಪು ಛಾಯೆಗಳು ಈಗಾಗಲೇ ಆವರಿಸಿವೆ. ಶಾಂತಿಯುತವಾಗಿ ಬಗೆಹರಿಸಬೇಕಾಗಿದ್ದಂತಹ ಈ ವಿಚಾರ ಈಗ ಆಕ್ರಮಣಕಾರಿ ನೀತಿಯತ್ತ ಮುಂದುವರೆಯುತ್ತಿದೆ. ಸದ್ಯಕ್ಕೆ ಈಗಾಗಲೇ ಭಾರತ ಸರ್ಕಾರ ತಮ್ಮ ಭಾರತೀಯ ಪ್ರಜೆಗಳನ್ನು ಉಕ್ರೇನ್ ನಿಂದ ಭಾರತಕ್ಕೆ ತರುವಂತಹ ಶತಾಯಗತಾಯ ಪ್ರಯತ್ನ ಮಾಡುತ್ತಿರುವುದು ನಮಗೆಲ್ಲ ಗೊತ್ತಿದೆ. ಇದು ಅಷ್ಟೊಂದು ಸುಲಭದ ಕೆಲಸವಲ್ಲ ಗೆಳೆಯರೇ.

ಯುದ್ಧಗ್ರಸ್ತ ದೇಶದಿಂದ ಎಷ್ಟೋ ಸಾವಿರ ಕಿಲೋಮೀಟರ್ ದೂರದಲ್ಲಿರುವ ನಮ್ಮ ದೇಶದ ಪ್ರಜೆಗಳನ್ನು ವಾಪಸು ಸುರಕ್ಷಿತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾರತಕ್ಕೆ ಕರೆತರುವುದು ಎಂದರೆ ಅಸಾಧ್ಯ ಪದಕ್ಕಿಂತ ಹೆಚ್ಚಿನ ಕಷ್ಟದ ಕೆಲಸವಾಗಿದೆ. ಆದರೂ ಕೂಡ ನಮ್ಮ ಭಾರತದ ಎಂಬೆಸ್ಸಿ ಈಗಾಗಲೇ ಸಹಸ್ರಾರು ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ, ಅದರಲ್ಲೂ ಕೆಲವೊಂದು ಅತೃಪ್ತ ಆತ್ಮಗಳು ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಈ ಆಪರೇಷನ್ ಗೆ “ಆಪರೇಷನ್ ಗಂಗಾ” ಎನ್ನುವುದಾಗಿ ನಾಮಕರಣ ಮಾಡಲಾಗಿತ್ತು.

ಈಗ ಇದೆ ಆಪರೇಷನ್ ಗಂಗಾ ಮೂಲಕ ಕೀವ್ ಪ್ರದೇಶದಿಂದ ರಕ್ಷಿಸಲ್ಪಟ್ಟ ಕೇರಳ ಮೂಲದ ಹೋಟೆಲ್ ಉದ್ಯಮಿ ಅಭಿಜಿತ್ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದು, ನಾನು ಉಕ್ರೇನ್ (ಕೈವ್) ನಲ್ಲಿ ಸಣ್ಣ ರೆಸ್ಟೋರೆಂಟ್ ನಡೆಸುತ್ತಿದ್ದೇನೆ. ನಾನು ಕೈವ್‌ನಲ್ಲಿ ಸಿಕ್ಕಿಬಿದ್ದಿದ್ದೇ ಆಗ ಗಂಗಾ ಆಪರೇಷನ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಸಹಾಯದಿಂದ ನನ್ನನ್ನು ರಕ್ಷಿಸಿ ಸುರಕ್ಷಿತವಾಗಿ ಪೋಲೆಂಡ್‌ಗೆ ಕರೆದೊಯ್ಯಲಾಯಿತು. ಇದಕ್ಕಾಗಿ ಭಾರತಕ್ಕೆ ಧನ್ಯವಾದಗಳು. ಇದೇ ಸಮಯದಲ್ಲಿ ಈ ಆಪರೇಷನ್ಗೆ ಕೃತಜ್ಞತೆಯನ್ನು ಸಲ್ಲಿಸಲು ತಾನು ಏನು ಮಾಡುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಈಗಾಗಲೇ ಅವರ ಹೆಂಡತಿ ಪೋಲ್ಯಾಂಡ್ ನಲ್ಲಿ ಮಗುವಿಗೆ ಜನ್ಮವನ್ನು ನೀಡಿದ್ದಾರೆ. ನನ್ನ ಪ್ರಾಣ ಉಳಿಸಿದ ಈ ಆಪರೇಷನ್ ಹೆಸರನ್ನು ನನ್ನ ಮಗುವಿಗೆ ಗಂಗಾ ಎಂದು ಹೆಸರು ಇಡುತ್ತೇನೆ ಎಂಬುದಾಗಿ ಹೇಳಿ ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದಾರೆ. ಇದೇ ಮಾರ್ಚ್ 26ರಂದು ಮಗು ಹಾಗೂ ತಾಯಿ ಇಬ್ಬರನ್ನು ಕೂಡ ಎದುರು ಕಾಣುವ ನಿರೀಕ್ಷೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.