ಉತ್ತಮ ಪ್ರದರ್ಶನ ನೀಡಿ, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ಕೂಡ ಓಲ್ಡ್ ಮಾಂಕ್ ಚಿತ್ರಕ್ಕೆ ಶಾಕ್, ಕನ್ನಡ ಸಿನಿಮಾಗಳೇ ಕಥೆನೇ ಇಷ್ಟಾಯಿತೇ??

ಉತ್ತಮ ಪ್ರದರ್ಶನ ನೀಡಿ, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ಕೂಡ ಓಲ್ಡ್ ಮಾಂಕ್ ಚಿತ್ರಕ್ಕೆ ಶಾಕ್, ಕನ್ನಡ ಸಿನಿಮಾಗಳೇ ಕಥೆನೇ ಇಷ್ಟಾಯಿತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಚಲಿಸುವುದೇ ಕಷ್ಟಕರವಾಗಿ ಬಿಟ್ಟಿತ್ತು ಯಾಕೆಂದರೆ ಲಾಕ್ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಆದರೆ ಕೊನೆಗೂ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಭರದಿಂದ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಇತ್ತೀಚಿಗೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದು ಕಳೆದವಾರವಷ್ಟೇ ಬಿಡುಗಡೆಯಾಗಿರುವ ಶ್ರೀನಿ ನಿರ್ದೇಶಿಸಿ ನಟಿಸಿರುವ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿರುವ ಓಲ್ಡ್ ಮಾಂಕ್ ಚಿತ್ರ ಪ್ರೇಕ್ಷಕರಿಂದ ವ್ಯಾಪಕವಾಗಿ ಜನಮನ್ನಣೆಗೆ ಪಾತ್ರವಾಗಿತ್ತು.

ಇಷ್ಟೊಂದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಚಿತ್ರವು ಕೂಡ ಈಗ ಚಿಂತೆ ಮಾಡಿಕೊಳ್ಳುವಂತಾಗಿದೆ. ಹೌದು ಜನರು ಚಿತ್ರತಂಡವನ್ನು ನಮ್ಮ ಊರಿನ ಸಿನಿಮಾ ಥಿಯೇಟರ್ನಲ್ಲಿ ನಿಮ್ಮ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ ಎಂಬುದಾಗಿ ಅಸಮಧಾನವನ್ನು ವ್ಯಕ್ತಪಡಿಸುವಂತೆ ಮಾಡಿದೆ. ಇದಕ್ಕಿರುವ ನಿಜವಾದ ಕಾರಣಗಳನ್ನು ಸ್ವತಹ ನಟ ಹಾಗೂ ನಿರ್ದೇಶಕ ಶ್ರೀನಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಇಷ್ಟೊಂದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಓಲ್ಡ್ ಮಾಂಕ್ ಚಿತ್ರಕ್ಕೂ ಕೂಡ ಬಂದೊದಗಿರುವ ಗಂಡಾಂತರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಈ ಸಮಸ್ಯೆ ಕುರಿತಂತೆ ಸ್ವತಹ ಶ್ರೀನಿ ಯವರೆ ಮಾತನಾಡುತ್ತಾ ಮೊದಲನೇದಾಗಿ ಪರ ಭಾಷೆಗಳಿಗಿಂತ ನಮ್ಮ ಸಿನಿಮಾಗಳಿಗೆ ಚಿತ್ರಮಂದಿರಗಳನ್ನು ಕಡಿಮೆ ಇಡಲಾಗುತ್ತಿದೆ, ನಮ್ಮದು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ಚಿತ್ರ ಮಂದಿರಗಳು ನಮ್ಮ ಸಿನೆಮ ಪ್ರದರ್ಶನ ಮಾಡುತ್ತಿಲ್ಲ. ಇನ್ನೊಂದು ಪ್ರಮುಖವಾದ ವಿಚಾರ ನಮ್ಮವರೇ ಕನ್ನಡ ಸಿನಿಮಾ ಗಳಿಗಿಂತ ಹೆಚ್ಚಾಗಿ ಪರಭಾಷೆಯ ಸಿನಿಮಾಗಳನ್ನು ನೋಡುವುದನ್ನೇ ಮೊದಲ ಪ್ರಾಶಸ್ತ್ಯ ವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ ಎಂಬುದಾಗಿ ದುಃಖವನ್ನು ತೋಡಿಕೊಂಡಿದ್ದಾರೆ‌. ಇನ್ನು ಈಗಾಗಲೇ ಅದಿತಿ ಪ್ರಭುದೇವ ರವರು ಕೂಡ ವಿಡಿಯೋ ಮೂಲಕ ಪ್ರೇಕ್ಷಕರಲ್ಲಿ ಈ ಕುರಿತಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಾವೆಲ್ಲ ಕನ್ನಡಿಗರು ಇಂತಹ ಒಳ್ಳೆಯ ಸಿನಿಮಾವನ್ನು ಸಿನಿಮಾ ಥಿಯೇಟರ್ ನಲ್ಲಿ ನೋಡಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಿನಿಮಾದ ಉಳಿವಿಗಾಗಿ ಕಾರಣವಾಗಬಹುದಾಗಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾವನ್ನು ನೋಡುವವರು ಕಡಿಮೆ ಇದ್ದಾರೆ ಎಂದರೆ ಕನ್ನಡಿಗರಾದ ನಮಗೆ ಅವಮಾನ ಅಲ್ಲವೇ ಯೋಚಿಸಿ.