ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪುಟಕ್ಕನ್ನ ಮಕ್ಕಳು ಧಾರಾವಾಹಿಯಲ್ಲಿ ಮೆಗಾ ಟ್ವಿಸ್ಟ್, ಕಂಠಿಗೆ ಅಗ್ನಿ ಪರೀಕ್ಷೆ, ಮತ್ತೊಂದು ಸಂಕಷ್ಟದಲ್ಲಿ ಪುಟ್ಟಕ್ಕ. ಮುಂದೇನು ನಡೆಯುತ್ತದೆ ಗೊತ್ತೇ??

79

ನಮಸ್ಕಾರ ಸ್ನೇಹಿತರೆ, ಈವರೆಗೆ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟಿ ಉಮಾಶ್ರೀ, ಜನರಿಗೆ ಇನ್ನಷ್ಟು ಹತ್ತಿರವಾಗಿದ್ದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ. 3 ಜನ ಹೆಣ್ಣುಮಕ್ಕಳನ್ನು ಹೆತ್ತ ತಾಯಿಯೊಬ್ಬಳು ಮಕ್ಕಳಿಗಾಗಿ ಪಡುವಕಷ್ಟವೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮುಖ್ಯ ಕಥಾವಸ್ತು. ದಿನ ಸಂಜೆಯಾದರೆ ಪುಟ್ಟಕ್ಕನ ಮಕ್ಕಳು ಒಂದೊಂದು ಕಥೆಯ ಮೂಲಕ ತೆರೆಯ ಮೇಲೆ ಎಂಟ್ರಿ ಕೊಡ್ತಾರೆ. ಈ ಬಾರಿ ಪುಟ್ಟಕ್ಕನ ಮನೆಗೆ ಎಂಟ್ರಿಕೊಟ್ಟಿದ್ದು ಬೇರೆ ಯಾರು ಅಲ್ಲ ಬಂಗಾರಮ್ಮ.

ಹೌದು ಪುಟ್ಟಕ್ಕನ ಮಕ್ಕಳು ದಿನಕ್ಕೊಂದು ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಪುಟ್ಟಕ್ಕನ ಪತಿಯೊಂದಿಗೆ ಸೇರಿಕೊಂಡ ರಾಜೇಶ್ವರಿ, ಪುಟ್ಟಕ್ಕನನ್ನು ಮನೆಯಿಂದ ಮಾತ್ರವಲ್ಲ ಊರಿನಿಂದಲೇ ಓಡಿಸುವ ಹುನ್ನಾರ ನಡೆಸಿದ್ದಾಳೆ. ಅದಕ್ಕಾಗಿ ಸಾಕಷ್ಟು ಡ್ರಾಮಾ ಕ್ರಿಯೇಟ್ ಮಾಡುತ್ತಿದ್ದಾಳೆ. ಈ ಬಾರಿ ಪುಟ್ಟಕ್ಕನನ್ನು ಮನೆಯಿಂದ ಓಡಿಸಲು ಆಕೆ ಅಸ್ತ್ರವಾಗಿ ಬಳಸುತ್ತಿರುವುದು ಬಂಗಾರಮ್ಮ ಅವರನ್ನು. ಆದ್ರೆ ಪುಟ್ಟಕ್ಕನ ಬಗ್ಗೆ ಗೊತ್ತಿರುವ ಬಂಗಾರಮ್ಮ ಪುಟ್ಟಕ್ಕನ ಜೊತೆ ಜಗಳವಾಡುವ ಬದಲು ಮಾತನಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟಕ್ಕನ ಪರವಾಗಿ ಬಂಗಾರಮ್ಮ ನಿಲ್ಲುವ ಸಾಧ್ಯತೆಗಳು ಇದ್ದರೂ ಕೂಡ, ಈಗ ಸ್ನೇಹ ಗೊತ್ತಿಲ್ಲದೆ ಮಾಡುವ ಒಂದು ಎಡವಟ್ಟು ಹಲವು ಸಮಸ್ಯೆಗಳನ್ನು ತಂದಿಡುವ ಸಾಧ್ಯತೆಗಳಿವೆ.

ಮೊದಲನೆಯದಾಗಿ ಬಂಗಾರಮ್ಮನಿಗೆ ಸ್ನೇಹ, ಪುಟ್ಟಕ್ಕನ ಮಗಳು ಎಂಬ ಸತ್ಯ ಗೊತ್ತಿಲ್ಲ. ಆದರೆ ಸ್ನೇಹ ಜೊತೆಗೆ ಜಗಳ ಆಡಿರುವ ಬಂಗಾರಮ್ಮ, ಸ್ನೇಹ ಬಗ್ಗೆ ಸಾಕಷ್ಟು ಕೆಟ್ಟ ಅಭಿಪ್ರಾಯಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಬಂಗಾರಮ್ಮ ಅವರಿಗೆ ಸ್ನೇಹ ಪುಟ್ಟಕ್ಕನ ಮಗಳು ಎಂದು ತಿಳಿದರೆ ಪುಟ್ಟಕ್ಕನಿಗೆ ಸಮಸ್ಯೆ ಆಗುವುದರಲ್ಲಿ ನೋ ಡೌಟ್.

ಇದೇ ವೇಳೆ ಬಂಗಾರಮ್ಮ ತಮ್ಮ ಮನೆಗೆ ಬಂದಿರುವ ವಿಷಯ ಅರಿವಿಲ್ಲದ ಸ್ನೇಹ, ಬಂಗಾರಮ್ಮಳ ಮಗ ಕಂಠ ಜೊತೆ ತನ್ನ ಮನೆಗೆ ಬರುತ್ತಿದ್ದಾಳೆ. ಇತ್ತ ಕಂಠಿಗೆ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡಲು ಮುಂದಾಗಿರುವ ಬಂಗಾರಮ್ಮ, ಸ್ನೇಹ ಜೊತೆ ಕಂಠಿಯನ್ನು ನೋಡಿದರೆ ಕೋಲಾಹಲವೇ ಸೃಷ್ಟಿಯಾಗಬಹುದು. ಹಾಗಾಗಿ ಮುಂದಿನ ಎಪಿಸೋಡ್ ಗಳಲ್ಲಿ ಏನಾಗಬಹುದು ಎಂದು ಜನರಿಗೆ ಊಹಿಸಲು ಕಷ್ಟವಾಗುತ್ತದೆ.

ಅತ್ಯಂತ ಉತ್ತಮವಾದ ಕಥೆಯನ್ನು ಇಟ್ಟುಕೊಂಡ ನಿರ್ದೇಶಕರು, ಮುಂದಿನ ದಿನಗಳಲ್ಲಿ ಪುಟ್ಟಕ್ಕ ಹಾಗೂ ಪುಟ್ಟಕ್ಕನ ಮಕ್ಕಳನ್ನು ಯಾವ ರೀತಿ ಜನರ ಮುಂದೆ ತರುತ್ತಾರೆ ಎಂದು ಕಾದುನೋಡಬೇಕು. ಸದ್ಯ ಬಂಗಾರಮ್ಮ ಹಾಗೂ ಬುಲೆಟ್ ರಾಣಿ ಸ್ನೇಹ ನಡುವೆ ಯುದ್ಧ ನಡೆಯುತ್ತಾ ಅನ್ನೋದನ್ನ ಮುಂದಿನ ಎಪಿಸೋಡ್ ನೋಡಿ ನೀವು ತಿಳಿದುಕೊಳ್ಳಬೇಕು.