ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಐಪಿಎಲ್ ಗೆ ಹೊಸ ರೂಪ ಕೊಟ್ಟ ಬಿಸಿಸಿಐ, ತಂಡಗಳ ಗುಂಪು ಪ್ರಕಟಣೆ, ಹೇಗಿರಲಿದೆ ಗೊತ್ತೇ ಈ ಬಾರಿಯ ಐಪಿಎಲ್ ಪಂದ್ಯಗಳು??

962

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ -2022 ಈ ವರ್ಷದ ಸೀಸನ್ ಮಾರ್ಚ್ 26ರಿಂದ ಆರಂಭವಾಗಲಿದೆ. ಹಾಗೂ ಈ ಸೀಸನ್ ನ ಅಂತಿಮ ಪಂದ್ಯ ಅಂದರೇ ಫೈನಲ್ ಮೇ 29 ರಂದು ನಡೆಯಲಿದೆ. ಅಂದರೇ ಬರೋಬ್ಬರಿ ಭರ್ತಿ ಎರಡು ತಿಂಗಳು ಟಿ20 ಕ್ರಿಕೇಟ್ ಲೀಗ್ ಅಭಿಮಾನಿಗಳ ಮುದ ತಣಿಸಲಿದೆ. ಆದರೇ ಈ ಹಿಂದೆ ಐಪಿಎಲ್ ನಲ್ಲಿ ಪ್ರತಿ ತಂಡವೂ ಇತರ ತಂಡದ ವಿರುದ್ಧ ಎರೆಡೆರೆಡು ಪಂದ್ಯಗಳನ್ನು ಲೀಗ್ ಹಂತದಲ್ಲಿ ಆಡಬೇಕಿತ್ತು. ಅಂದರೇ ಒಟ್ಟು 14 ಪಂದ್ಯಗಳು ಆಡಬೇಕಿತ್ತು.

ಆದರೇ ಈ ಭಾರಿ ಎರಡು ಹೊಸ ತಂಡಗಳು ಸೇರ್ಪಡೆಯಾದ ಕಾರಣ, ಐಪಿಎಲ್ ನಿಯಮಗಳು ಕೊಂಚ ಬದಲಾಗಿವೆ. ಐದೈದು ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಭಾರಿ ಒಟ್ಟು ಲೀಗ್ ಪಂದ್ಯಗಳು 60ರ ಬದಲಿಗೆ 74 ಆಗಿವೆ. ಎ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ದೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಸ್ಥಾನ ಪಡೆದಿವೆ.

ಪ್ರತಿ ತಂಡ ತನ್ನ ಗುಂಪಿನಲ್ಲಿರುವ ತಂಡದ ಜೊತೆ ಎರಡು ಪಂದ್ಯಗಳನ್ನು ಆಡಲಿದೆ. ನಂತರ ಮತ್ತೊಂದು ಗುಂಪಿನಲ್ಲಿರುವ ತಂಡದ ಜೊತೆ ಒಂದು ಪಂದ್ಯ ಆಡಲಿದೆ. ಹೀಗೆ ಒಟ್ಟು ಹದಿನಾಲ್ಕು ಪಂದ್ಯಗಳನ್ನು ಆಡಲಿದೆ. ಹೀಗೆ ಒಟ್ಟು ಗೆಲುವು ಪಡೆದ ಪಾಯಿಂಟ್ಸ್ ಗಳನ್ನು ಆಧರಿಸಿ ಟಾಪ್ 4 ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆಯಲಿವೆ. ತದನಂತರ ಎಂದಿನಂತೆ ಐಪಿಎಲ್ ನಿಯಮಗಳು ಮುಂದುವರೆಯಲಿದೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.