ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈತನನ್ನು ಯಾರು ಇಷ್ಟ ಪಡದೆ ಇರಲು ಸಾಧ್ಯ?? ಈ ಬಾರಿ ಐಪಿಎಲ್ ಯಾರು ಗೆಲ್ಲಬೇಕು ಎಂದರೆ ಗೇಲ್ ಉತ್ತರವೇನು ಗೊತ್ತೇ??

189

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ನಲ್ಲಿ ತನ್ನ ವಿಶೇಷ ಶೈಲಿಯ ಬ್ಯಾಟಿಂಗ್ ನಿಂದ ಹೆಸರುಗಳಿಸಿರುವ ವೆಸ್ಟ್ಇಂಡೀಸ್ ನ ಆರಂಭಿಕ ಬ್ಯಾಟ್ಸಮನ್ ಕ್ರಿಸ್ಟೋಫರ್ ಹೆನ್ರಿ ಗೇಲ್.ಆರ್ಸಿಬಿಯ ಆರಂಭಿಕರಾಗಿ ಅದ್ಭುತವಾಗಿ ಆಡಿ, ಎರಡು ಬಾರಿ ಆರ್ಸಿಬಿಯನ್ನು ಫೈನಲ್ ತಲುಪಿಸಿದ ಶ್ರೇಯ ಕ್ರಿಸ್ ಗೇಲ್ ಗೂ ತಲುಪಬೇಕು.ಆರ್ಸಿಬಿ ಫ್ರಾಂಚೈಸಿಯಿಂದ ಬಿಡುಗಡೆಯಾದ ನಂತರ ಗೇಲ್, ಪಂಜಾಬ್ ಕಿಂಗ್ಸ್ ತಂಡಕ್ಕೆ ಸಹ ಹೋದರು. ಅಲ್ಲಿಯೂ ಸಹ ಕೆಲವು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದರು. ಆ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದರು. 42 ವರ್ಷದ ಕ್ರಿಸ್ ಗೇಲ್ ಈ ಭಾರಿ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಲಿಲ್ಲ.

ಅದಲ್ಲದೇ ಐಪಿಎಲ್ ತಂಡಕ್ಕೆ ಸಹಾಯಕ ಅಥವಾ ಬ್ಯಾಟಿಂಗ್ ಕೋಚ್ ಆಗಿ ಸಹ ಗೇಲ್ ಕೆಲಸ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಸದಾ ಆಕ್ಟೀವ್ ಆಗಿರುವ ಗೇಲ್ ಆಗಾಗ ತಮ್ಮ ಇನ್ಸ್ಟಾ ಗ್ರಾಂ ಖಾತೆಯಿಂದ ಲೈವ್ ಬರುತ್ತಿರುತ್ತಾರೆ. ಈ ಸಮಯದಲ್ಲಿ ಅಭಿಮಾನಿಗಳು ಕೇಳುವ ಪ್ರತಿ ಪ್ರಶ್ನೆಗೂ ಸ್ವಲ್ಪವೂ ಕೋಪಿಸಿಕೊಳ್ಳದೇ ಮುಕ್ತವಾಗಿ ಮಾತನಾಡುತ್ತಾರೆ. ಈ ನಡುವೆ ಕ್ರಿಸ್ ಗೇಲ್ ಲೈವ್ ಗೆ ಬಂದಾಗ ಅಭಿಮಾನಿಯೊಬ್ಬರು ನಿಮಗೆ ಯಾವ ತಂಡ ಐಪಿಎಲ್ ಗೆಲ್ಲಬೇಕು ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಸೌಮ್ಯವಾಗಿ ಉತ್ತರಿಸಿದ ಕ್ರಿಸ್ ಗೇಲ್ ಎರಡು ತಂಡಗಳ ಹೆಸರನ್ನು ಹೇಳಿದರು.

ಅಷ್ಟಕ್ಕೂ ಗೇಲ್ ಹೆಸರಿಸಿದ ತಂಡಗಳು ಯಾವುವೆಂದರೇ, ಒಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇನ್ನೊಂದು ಪಂಜಾಬ್ ಕಿಂಗ್ಸ್. ಈ ಎರಡು ತಂಡಗಳು ಟ್ರೋಫಿ ಗೆಲ್ಲಬೇಕು. ನಾನು ಈ ಹಿಂದೆ ಎರಡು ತಂಡಗಳ ಪರ ಆಡಿದ್ದೇನೆ. ಅವೆರೆಡು ತಂಡಗಳು ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಈ ಭಾರಿ ಇವೆರೆಡೂ ತಂಡಗಳಲ್ಲಿ ಯಾವುದಾದರೂ ಒಂದು ತಂಡ ಕಪ್ ಗೆದ್ದರೇ, ಖಂಡಿತ ನನಗೆ ಸಂತೋಷವಾಗಲಿದೆ ಎಂದು ಹೇಳುವ ಮೂಲಕ ತಮ್ಮ ಹಳೇಯ ಫ್ರಾಂಚೈಸಿಗಳ ಮೇಲಿನ ನಿಷ್ಠೆಯನ್ನು ತೋರಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.