ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸ ದಾಖಲೆ ಬರೆದ ಬಡವ ರಾಸ್ಕಲ್, ಧನಂಜಯ್ ರವರ ಬಡವ ರಾಸ್ಕಲ್ ಸಿನಿಮಾ ಗಳಿಸಿದ್ದು ಕಲೆಕ್ಟ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ??

151

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಚಿತ್ರಗಳಲ್ಲಿ ಅವಕಾಶ ಪಡೆಯಲು ಕಷ್ಟಪಡುತ್ತಿದ್ದ ಡಾಲಿ ಧನಂಜಯ್ ಇಂದು ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಟಗರು ಚಿತ್ರ ಧನಂಜಯ್ ರವರ ಜೀವನವನ್ನೆ ಬದಲಾಯಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಈಗ ಅವರಿಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಡವ ರಾಸ್ಕಲ್ ಚಿತ್ರ ಸ್ಟಾರ್ ಪಟ್ಟವನ್ನು ನೀಡಿದೆ ಎನ್ನಬಹುದಾಗಿದೆ.

ಬಡವ ರಾಸ್ಕಲ್ ಚಿತ್ರದ ಆರಂಭಿಕ ಪ್ರಮೋಷನ್ ಮಾಡಿದ ರೀತಿಯೇ ವಿಭಿನ್ನವಾಗಿದ್ದರಿಂದ ಮೊದಲ ದಿನದಿಂದಲೇ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಕಾಲಿಟ್ಟು ಸಿನಿಮಾವನ್ನು ಕುಟುಂಬದೊಂದಿಗೆ ಆನಂದಿಸಿದರು. ಹೀಗಾಗಿ ಈಗಾಗಲೇ ಬಡವ ರಾಸ್ಕಲ್ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬರೋಬ್ಬರಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ರವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ತಾರಾ ರಂಗಾಯಣ ರಘು ಸ್ಪರ್ಶ ರೇಖಾ ನಿರ್ದೇಶಕ ಗುರುಪ್ರಸಾದ್ ಹೀಗೆ ಹತ್ತು ಹಲವಾರು ಜನರು ನಟಿಸಿದ್ದಾರೆ.

ನಿಜಕ್ಕೂ ಕೂಡ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಅಂತಹ ಸೂಪರ್ ಹಿಟ್ ಚಿತ್ರವಾಗಿ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಇನ್ನು ಈ ಚಿತ್ರ ಡಾಲಿ ಧನಂಜಯ್ ಅವರ ನಿರ್ಮಾಣದ ಮೊದಲ ಚಿತ್ರವಾಗಿತ್ತು ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ. ಬಡವ ರಾಸ್ಕಲ್ ಚಿತ್ರ ಇಷ್ಟರ ಮಟ್ಟಿಗೆ ಯಶಸ್ಸನ್ನು ಪಡೆದು ಬಾಕ್ಸಾಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು ಎನ್ನುವುದಾಗಿ ಎಲ್ಲರಲ್ಲೂ ಕೂಡ ಕುತೂಹಲ ಇರಬಹುದು. ಹೌದು ಈಗಾಗಲೇ ಬಡವ ರಾಸ್ಕಲ್ ಚಿತ್ರ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ನಿರ್ಮಾಣದ ಮೊದಲ ಚಿತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ಡಾಲಿ ಧನಂಜಯ್ ಸಾಧಿಸಿದ್ದಾರೆ. ಇದೇ ರೀತಿ ಭವಿಷ್ಯದಲ್ಲಿ ಮುಂದೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡುವ ಶಕ್ತಿ ದಾಲಿ ಧನಂಜಯ್ ರವರಿಗೆ ನೀಡಲಿ ಎಂದು ಹಾರೈಸೋಣ.

Get real time updates directly on you device, subscribe now.