ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೂಲ ಬೆಲೆ 20 ಲಕ್ಷವಾದರೂ ಆರ್ಸಿಬಿ ಈತನನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದು ಯಾಕೆ ಗೊತ್ತೇ?? ಇಲ್ಲಿದೆ ಅಸಲಿ ಕಾರಣ.

228

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಮೆಗಾ ಹರಾಜು ಮುಗಿದಿದ್ದು ಇದೇ ಮಾರ್ಚ್ 26ರಂದು ಈ ಬಾರಿಯ ಟಾಟಾ ಐಪಿಎಲ್ 2022 ಪ್ರಾರಂಭವಾಗಲಿದೆ. ಐಪಿಎಲ್ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂದಿನ ಲೇಖನಿಯಲ್ಲಿ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿರುವ ಈ ಆಟಗಾರನ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ಯುವ ಉದಯೋನ್ಮುಖ ಆಟಗಾರನಾಗಿರುವ ಅನುಜ್ ರಾವತ್ ರವರ ಕುರಿತಂತೆ.

ಡೆಲ್ಲಿ ರಣಜಿ ತಂಡದಲ್ಲಿ ಹಾಗೂ ಅಂಡರ್-19 ತಂಡದಲ್ಲಿ ಈಗಾಗಲೇ ಗಮನಾರ್ಹ ಪ್ರದರ್ಶನವನ್ನು ನೀಡಿರುವ ಆಟಗಾರ. ಕಳೆದ ಬಾರಿ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕೂಡ ಆಡಿದ್ದಾರೆ. 20 ಲಕ್ಷ ರೂಪಾಯಿ ಬೇಸ್ ಪ್ರೈಸ್ ಅನ್ನು ಹೊಂದಿರುವ ಅನುಜ್ ರಾವತ್ ರವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3.40 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದೇಕೆ ಎನ್ನುವುದರ ಕುರಿತಂತೆ ಹಲವಾರು ಪ್ರಶ್ನೆಗಳು ಎದ್ದೇಳುತ್ತದೆ. ಈ ಕುರಿತಂತೆ ನಿಮಗಿರುವ ಅನುಮಾನವನ್ನು ನಾವು ಬಗೆಹರಿಸುತ್ತೇವೆ.

ಅನುಜ್ ರಾವತ್ ರವರನ್ನು ಖರೀದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರಿಂದ ಎರಡು ಲಾಭಗಳನ್ನು ಅಪೇಕ್ಷಿಸುತ್ತದೆ. ಮೊದಲನೇದಾಗಿ ಅವರೊಬ್ಬ ವಿಕೆಟ್ ಕೀಪರ್ ಆಗಿದ್ದಾರೆ. ಎರಡನೇದಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಡಗೈ ಬ್ಯಾಟ್ಸ್ಮನ್ ಆಗಿರುವ ದೇವದತ್ ಪಡಿಕ್ಕಲ್ ರವರನ್ನು ಖರೀದಿಸಲು ವಿಫಲವಾಗಿದೆ. ಅನುಜ್ ರಾವತ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವರ ಸ್ಥಾನವನ್ನು ತುಂಬಲಿದ್ದಾರೆ. ಹೀಗಾಗಿ ಹಲವಾರು ಸ್ಪರ್ಧೆಗಳ ನಡುವೆ ಕೂಡ ಅನುಜ್ ರಾವತ್ ರವರನ್ನು 3.40 ಕೋಟಿ ರೂಪಾಯಿ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಿದೆ. ಈ ಆಟಗಾರನ ಕುರಿತಂತೆ ಇರುವ ನಿಮ್ಮ ಅನಿಸಿಕೆಯನ್ನು ಹಾಗೂ ನಿರೀಕ್ಷೆಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.