ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಮ್ಮ ನಂತರ ಭವಿಷ್ಯದ ನಾಯಕ ಯಾರು ಎಂದಿದ್ದಕ್ಕೆ ಮೂರು ಜನರನ್ನು ಆಯ್ಕೆ ಮಾಡಿದ ರೋಹಿತ್, ಯಾರ್ಯಾರು ಸಾಲಿನಲ್ಲಿ ಇದ್ದಾರೆ ಗೊತ್ತೇ??

88

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ಬದಲಾವಣೆಗಳು ಸತತವಾಗಿ ನಡೆದಿರುವುದು ತಂಡದಲ್ಲಿ ಹಲವಾರು ಫಲಿತಾಂಶಗಳಿಗೆ ಕೂಡ ಕಾರಣವಾಗಿದೆ. ಸೌತ್ ಆಫ್ರಿಕಾ ಪ್ರವಾಸದಲ್ಲಿ ಇರಬೇಕಾದರೆ ಈ ಬದಲಾವಣೆಗಳು ಪ್ರಾರಂಭವಾಗಿದ್ದವು. ಈಗಾಗಲೇ ವಿರಾಟ್ ಕೊಹ್ಲಿ ಅವರು ಮೂರು ಫಾರ್ಮೆಟ್ ಗಳಲ್ಲಿ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ರೋಹಿತ್ ಶರ್ಮಾ ರವರು ಈಗಾಗಲೇ ಮೂರು ಫಾರ್ಮೆಟ್ ಗಳಲ್ಲಿ ನಾಯಕನ ಸ್ಥಾನವನ್ನು ಅಲಂಕರಿಸಿದ್ದು ಜವಾಬ್ದಾರಿಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

ಈಗಾಗಲೇ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯನ್ನು ಕ್ಲೀನ್-ಸ್ವೀಪ್ ಮೂಲಕ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ರವರು ಈಗಾಗಲೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅತ್ಯುತ್ತಮ ಅನುಭವವನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ತಂಡವನ್ನು ಕೂಡ ಮುನ್ನಡೆಸಬಲ್ಲ ಅಂತಹ ಅತ್ಯುತ್ತಮ ಅನುಭವವನ್ನು ಹೊಂದಿದ್ದು ಇದು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮೇಜರ್ ಟ್ರೋಫಿಗಳನ್ನು ಗೆಲ್ಲಲು ಅನುಕೂಲಕರವಾಗಲಿದೆ ಎಂಬುದಾಗಿ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಬಲ್ಲಂತಹ ಮೂರು ಜನರ ಕುರಿತಂತೆ ರೋಹಿತ್ ಶರ್ಮ ಅವರು ಹೇಳಿಕೊಂಡಿದ್ದಾರೆ.

ನಿಮ್ಮ ನಂತರ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರು ಯಾರು ಆಗಬಹುದು ಎಂಬ ಪ್ರಶ್ನೆಗೆ ರೋಹಿತ್ ಶರ್ಮಾ ರವರು ಈಗಾಗಲೇ ಶ್ರೀಲಂಕಾ ಸರಣಿಗೆ ತಂಡದ ಉಪ ನಾಯಕನಾಗಿರುವ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ, ಈಗಾಗಲೇ ಉಪನಾಯಕನಾಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ರವರ ಹೆಸರನ್ನು ಹೇಳಿದ್ದಾರೆ. ರೋಹಿತ್ ಶರ್ಮಾ ರವರು ಹೇಳಿದಂತೆ ಈ ಮೂರು ಕ್ರಿಕೆಟಿಗರಲ್ಲಿ ಕೂಡ ತಂಡವನ್ನು ಮುನ್ನಡೆಸುವಂತಹ ನಾಯಕತ್ವದ ಗುಣಗಳು ಎಂದು ಕಾಣುತ್ತಿವೆ. ಈ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.