ನಾಯಕನ ಸ್ಥಾನ ಬಿಡಿ, ಆರ್ಸಿಬಿ ಮತ್ತೊಂದು ಚರ್ಚೆ ಹುಟ್ಟುಹಾಕಿರುವ ಆರಂಭಿಕ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದಾದ ಜೋಡಿ ಯಾವ್ಯಾವು ಗೊತ್ತೇ??

ನಾಯಕನ ಸ್ಥಾನ ಬಿಡಿ, ಆರ್ಸಿಬಿ ಮತ್ತೊಂದು ಚರ್ಚೆ ಹುಟ್ಟುಹಾಕಿರುವ ಆರಂಭಿಕ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದಾದ ಜೋಡಿ ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಳೆದು ತೂಗಿ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಆಟಗಾರರನ್ನು ಖರೀದಿಸಿದೆ. ಸದ್ಯ ತಂಡದ ಸಂಯೋಜನೆ ಸಿದ್ದಪಡಿಸುತ್ತಿದ್ದು ಆಡುವ ಹನ್ನೊಂದರ ಬಳಗ, ಆರಂಭಿಕರು, ಮಧ್ಯಮ ಕ್ರಮಾಂಕ, ಕೆಳ ಕ್ರಮಾಂಕ, ಪವರ್ ಪ್ಲೇ ಬೌಲರ್ಸ್ ಹಾಗೂ ಡೆತ್ ಬೌಲಿಂಗ್ ಮತ್ತು ಮಿಡ್ಲ್ ಓವರ್ ಬೌಲಿಂಗ್ ಗೆ ರಣತಂತ್ರವನ್ನು ಸಿದ್ದಪಡಿಸುತ್ತಿದೆ. ಸದ್ಯ ಆರ್ಸಿಬಿಯ ಆರಂಭಿಕ ಬ್ಯಾಟ್ಸಮನ್ ಗಳಾಗಿ ಮೂರು ಜೋಡಿಗಳು ಕಣಕ್ಕಿಳಿಯಲು ಸಿದ್ದರಾಗಿದ್ದು, ಆ ಜೋಡಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

೧.ಫಾಪ್ ಡು ಪ್ಲೇಸಿಸ್ ಮತ್ತು ವಿರಾಟ್ ಕೊಹ್ಲಿ : ಈ ಜೋಡಿಯೇ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ. ಇಬ್ಬರೂ ಅದ್ಭುತ ಬ್ಯಾಟ್ಸಮನ್ ಗಳಾಗಿದ್ದು ಇವರಿಬ್ಬರೂ ಫಾರ್ಮ್ ನಲ್ಲಿದ್ದರೇ, ಎದುರಾಳಿ ಬ್ಯಾಟಿಂಗ್ ಉಡೀಸ್ ಆಗುವುದು ಖಚಿತವಾಗಲಿದೆ. ಆದರೇ ಈ ಇಬ್ಬರೂ ಆಟಗಾರರು ಆರಂಭಿಕರಾಗಿ ಆಡಿದರೇ, ಮಧ್ಯಮ ಕ್ರಮಾಂಕ ದುರ್ಬಲವಾಗುವ ಸಾಧ್ಯತೆಯಿದೆ.

೨.ಫಾಪ್ ಡು ಪ್ಲೇಸಿಸ್ ಮತ್ತು ಅನುಜ್ ರಾವತ್ : ಕಳೆದ ಬಾರಿ ದೇವದತ್ ಪಡಿಕಲ್ ಎಂಬ ಅದ್ಭುತ ಎಡಗೈ ಆಟಗಾರನಿಗೆ ಅವಕಾಶ ನೀಡಿತ್ತು. ಈ ಭಾರಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಅನುಜ್ ರಾವತ್ ರನ್ನು ಖರೀದಿಸಿದೆ. ಅಂಡರ್ 19 ತಂಡದಲ್ಲಿ ಆರಂಭಿಕರಾಗಿ ಆಡಿದ್ದ, ಅನುಜ್ ಗೆ ಈ ಭಾರಿ ಆರಂಭಿಕನ ಸ್ಥಾನ ಸಿಗಲಿದೆ. ಹೀಗಾದಾಗ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಆಗ ಮಧ್ಯೆಮ ಕ್ರಮಾಂಕ ಬಲಿಷ್ಠವಾಗುತ್ತದೆ.

೩.ಫಾಪ್ ಡು ಪ್ಲೇಸಿಸ್ ಮತ್ತು ಶೆಫಾನೆ ರುದರ್ಫೋರ್ಡ್ – ವಿಂಡೀಸ್ ನ ಹೊಡಿಬಡಿ ಆಟಗಾರ ರುದರ್ಫೋರ್ಡ್ ಕೆಳಕ್ರಮಾಂಕದ ಪಿಂಚ್ ಹಿಟ್ಟರ್ ಆಗಿದ್ದರು. ಈಗ ಅವರನ್ನು ಆರಂಭಿಕರಾಗಿ ಬಡ್ತಿ ನೀಡಿ, ಜೂನಿಯರ್ ಕ್ರಿಸ್ ಗೇಲ್ ಜವಾಬ್ದಾರಿ ವಹಿಸುವ ನೀರಿಕ್ಷೆ ಇದೆ. ಈ ಮೂರು ಜೋಡಿಗಳಲ್ಲಿ ಯಾವ ಜೋಡಿ ಈ ಭಾರಿ ಐಪಿಎಲ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.