ಇಂಧನ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಎಲೆಕ್ಟ್ರಿಕ್ ಆದರೂ ಕೂಡ ಕಡಿಮೆ ಖರ್ಚು ನೀಡುವ ಸ್ಕೂಟರ್ ಬಿಡುಗಡೆ. ಬೆಲೆ ಎಷ್ಟು ಗೊತ್ತೇ??

ಇಂಧನ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಎಲೆಕ್ಟ್ರಿಕ್ ಆದರೂ ಕೂಡ ಕಡಿಮೆ ಖರ್ಚು ನೀಡುವ ಸ್ಕೂಟರ್ ಬಿಡುಗಡೆ. ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂಧನದ ದರ ಏರುತ್ತಿರುವ ಹಿನ್ನೆಲೆಯಲ್ಲಿ, ಹಾಗೂ ಪರಿಸರ ಉಳಿಸುವ ಸಲುವಾಗಿ ಇದೀಗ ಕೇಂದ್ರ ಸರ್ಕಾರವೂ ಕೂಡ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಗಮನಕೊಡುತ್ತಿದೆ. ಹಾಗಾಗಿ ಕೆಲವು ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು, ಹೆಸರಾಂತ ವಾಹನ ತಯಾರಿಕಾ ಕಂಪನಿಗಳೂ ಕೂಡ ಇಲೆಕ್ಟ್ರಿಕ್ ವಾಹನಗಳ ತಯಾರಿಕೆಯ ಬಗ್ಗೆ ಹೆಚ್ಚು ಒಲವು ತೋರುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಬಜಾಜ್ ಕಂಪೆನಿ ಕೂಡ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ ಅನ್ನು ಬಿಡುಗಡೆ ಮಾಡಿದೆ.

ಮೊದಲಿನಿಂದಲೂ ಉತ್ತಮ ಹೆಸರನ್ನು ಹೊಂದಿರುವ ಬಜಾಜ್ ಈಗಾಗಲೇ ದೇಶದ 20 ಬೇರೆ ಬೇರೆ ನಗರಗಳಲಿ ಈ ಸ್ಕೂಟರ್ ಬಿಡುಗದೇ ಮಾಡಿದೆ. ಕೊಯಮತ್ತೂರು, ಮಧುರೈ, ಕೊಚ್ಚಿ, ಕೋಝಿಕ್ಕೋಡ್, ಹುಬ್ಬಳ್ಳಿ, ವಿಶಾಖಪಟ್ಟಣಂ, ನಾಸಿಕ್, ವಸಾಯಿ, ಸೂರತ್, ದೆಹಲಿ, ಮುಂಬೈ ಮತ್ತು ಮಾಪುಸಾ ನಗರಗಳಲ್ಲಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿವೆ. ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಮೊದಲೇ ಬುಕ್ಕಿಂಗ್ ಆರಂಭಿಸಿತ್ತು. ರಾಜ್ಯದಲ್ಲಿ ಇದೀಗ ಶೋ ರೂಂ ಅಥವಾ ಆನ್ಲೈನ್ ಮೂಲಕ ಬಜಾಜ್ ಚೇತಕ್ ನ್ನು ಬುಕ್ ಮಾಡಿಕೊಳ್ಳಬಹುದು.

ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ಗಳಾದ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್ ಮತ್ತು ಓಲಾ ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಿದ್ದು ಇದೀಗ ಇವುಗಳಿಗೆ ಪೈಪೋಟಿ ಕೊಡಲು ಬಜಾಜ್ ಕೂಡ ಮುಂದಾಗಿದೆ. ಚೇತಕ್ ಬಿಡುಗಡೆಯಾಗುತ್ತಿದ್ದಂತೆ ಹೆಚ್ಚು ಬುಕ್ಕಿಂಗ್ ಗಳೂ ನಡೆದಿರುವುದು ಇದಕ್ಕೆ ಸಾಕ್ಷಿ. ಆಕರ್ಷಕ ವಿನ್ಯಾಸದ ಜೊತೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ 2 ಮಾಡೆಲ್ ಗಳಿದ್ದು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್ ಗಳು ಲಭ್ಯ.

ಇನ್ನು ಬಜಾಜ್ ಚೇತಕ್ ನ ಸಾಮರ್ಥ್ಯದ ಬಗ್ಗೆ ಹೇಳುವುದಾರೆ, ಈ ಇ-ಸ್ಕೂಟರ್ 3.8 ಕಿ.ವ್ಯಾಟ್ ಪವರ್ ಮತ್ತು 4.1 ಕಿ.ವ್ಯಾ ಗರಿಷ್ಠ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಆಟೋಮ್ಯಾಟಿಕ್ ಟ್ರಾನಿಮಿಷನ್ ಹೊಂದಿದೆ. ಇದರ ಹಿಂದಿನ ಚಕ್ರಗಳಿಗೆ ಹೆಚ್ಚಿನ ಪವರ್ ನೀಡಲಾಗಿದೆ. ಈ ಸ್ಕೂಟರ್ ನ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 5 ಗಂಟೆಗಳು ಬೇಕು. ಇದರ ಬ್ಯಾಟರಿ 70,000 ಕಿ.ಮೀ ಅಥವಾ 7 ವರ್ಷಗಳವರೆಗೆ ಬಾಳಿಕೆ ಬರಲಿದೆ! ಈ ಬ್ಯಾಟರಿಗಳ ಮೇಲೆ ಕಂಪನಿಯು 3 ವರ್ಷಗಳ ಗ್ಯಾರಂಟಿ ಒದಗಿಸುತ್ತದೆ.

ಸ್ಕೂಟರ್ ನ ಅತ್ಯಂತ ಮಹತ್ವದ ವಿಷಯ ಅದು ಎಷ್ಟು ಮೈಲೇಜ್ ಕೊಡಬಹುದು ಎನ್ನುವುದು. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡದರೆ, ಇಕೊ ಸ್ಪೋರ್ಟ್ ಮೋಡ್‌ನಲ್ಲಿ 95 ಕಿ.ಮೀ ಮೈಲೇಜ್ ನೀಡಲಿದೆ. ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ಮೈಲೇಜ್ ನೀಡಲಿದೆ ಎಂಡು ಕಂಪನಿ ಹೇಳಿದೆ. ಬಜಾಜ್ ಚೇತಕ್ ಇ-ಸ್ಕೂಟರ್ ನ್ನು ಅತೀ ಕಡಿಎ ಬೆಲೆಗೆ ಅಂದರೆ ಕೇವಲ 2 ಸಾವಿರ ರೂ. ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 1,42,998 ರೂ. ನಿಂದ ಆರಂಭವಾಗಿತ್ತದೆ. ಇನ್ಯಾಕೆ ತಡ, ಈಗಲೇ ಈ ಸ್ಕೂಟರ್ ನ್ನು ಬುಕ್ ಮಾಡಿ ಕಾಯ್ದಿರಿಸಿ.