ಆರ್ಸಿಬಿ ತಂಡಕ್ಕೆ ಇರುವ ಮೂರು ಪ್ರಮುಖ ಸಮಸ್ಯೆಗಳು ಯಾವ್ಯಾವು ಗೊತ್ತೇ?? ಇವುಗಳನ್ನು ಸರಿ ಪಡಿಸಿಕೊಂಡರೆ ಈ ಸಲ ಕಪ್ ನಮ್ದೇ. ಯಾವ್ಯಾವು ಗೊತ್ತೇ??

ಆರ್ಸಿಬಿ ತಂಡಕ್ಕೆ ಇರುವ ಮೂರು ಪ್ರಮುಖ ಸಮಸ್ಯೆಗಳು ಯಾವ್ಯಾವು ಗೊತ್ತೇ?? ಇವುಗಳನ್ನು ಸರಿ ಪಡಿಸಿಕೊಂಡರೆ ಈ ಸಲ ಕಪ್ ನಮ್ದೇ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಈ ಬಾರಿಯಾದರೂ ಕಪ್ ಗೆಲ್ಲಲಿದೆ ಎಂಬ ಅಭಿಮಾನಿಗಳ ಆಶಾವಾದ ಈ ಬಾರಿಯೂ ನೇರವೇರುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಕ್ರಿಕೆಟ್ ವಿಶ್ಲೇಷಕರ ಆರ್ಸಿಬಿ ಕಪ್ ಗೆಲ್ಲಲು ತೊಡಕಾಗಿದ್ದ ಮೂರು ಜ್ವಲಂತ ಸಮಸ್ಯೆಗಳು ಇನ್ನು ಬಗೆಹರಿದಿಲ್ಲವಂತೆ. ಬನ್ನಿ ಅಂತಹ ಮೂರು ಜ್ವಲಂತ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿಯೋಣ.

1.ಅತಿಯಾಗಿ ಗ್ಲೆನ್ ಮ್ಯಾಕ್ಸ್ವೆಲ್ ಮೇಲೆ ಅವಲಂಬಿತರಾಗಿರುವುದು – ಕಳೆದ ಬಾರಿ ಆರ್ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್ ಇದ್ದರು. ಈಗ ಅವರ ಜಾಗವನ್ನು ಮ್ಯಾಕ್ಸ್ವೆಲ್ ತುಂಬಬೇಕು. ಆರ್ಸಿಬಿಯ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಪ್ ಡು ಪ್ಲೇಸಿಸ್ ಇಬ್ಬರೂ ಸ್ಪಿನ್ ಬೌಲಿಂಗ್ ಎದುರಿಸಲು ತಿಣುಕಾಡುತ್ತಾರೆ. ಆರ್ಸಿಬಿ ತಂಡದಲ್ಲಿ ಮ್ಯಾಕ್ಸ್ವೆಲ್ ಮಾತ್ರ ಸ್ಪಿನ್ ಹಾಗೂ ವೇಗದ ಬೌಲಿಂಗ್ ಗೆ ಉತ್ತಮವಾಗಿ ಆಡಬಲ್ಲರು. ಆದರೇ ಒತ್ತಡಕ್ಕೆ ಒಳಗಾಗಿ ಇವರು ವಿಕೇಟ್ ಒಪ್ಪಿಸಿದರೇ, ಇವರ ನಂತರ ಉತ್ತಮ ಬ್ಯಾಟ್ಸಮನ್ ಗಳು ಇಲ್ಲ. ಹೀಗಾಗಿ ಆರ್ಸಿಬಿ ತಂಡ ಕಳೆದ ಬಾರಿಯಂತೆ ಈ ಬಾರಿಯೂ ಧೀಡಿರ್ ಎಂದು ಕುಸಿಯುವ ಸಾಧ್ಯತೆ ಇದೆ.

2.ದುರ್ಬಲ ಬ್ಯಾಟಿಂಗ್ ಕ್ರಮಾಂಕ : ಆರ್ಸಿಬಿ ಈಗ ಆರಿಸಿರುವ ತಂಡದಲ್ಲಿ ವಿರಾಟ್ ಕೊಹ್ಲಿ, ಫಾಪ್ ಡು ಪ್ಲೇಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಬಿಟ್ಟರೇ ಬೇರೆ ಯಾರು ಸಹ ಭರವಸೆ ಇಡುವಂತಹ ಬ್ಯಾಟ್ಸ್ಮನ್ ಗಳು ಇಲ್ಲ. ಹೀಗಾಗಿ ಆರ್ಸಿಬಿಯ ಬ್ಯಾಟಿಂಗ್ ಕೆಳಕ್ರಮಾಂಕ ನೋಡಲು ದುರ್ಬಲವಾಗಿ ಕಾಣುತ್ತಿದೆ. ಭಾರತದ ಬ್ಯಾಟ್ಸ್ಮನ್ ಗಳು ಸಹ ಇಲ್ಲದಿರುವುದರಿಂದ ಆಡುವ ಅಂತಿಮ ಹನ್ನೊಂದರ ಬಳಗವನ್ನು ಆರಿಸುವುದೇ ಕಷ್ಟವಾಗಲಿದೆ. ಕಳೆದ ಸೀಸನ್ ಸಮಸ್ಯೆ ಈ ಸಾರಿ ಮತ್ತಷ್ಟು ಕಠಿಣವಾಗಿದೆ.

3.ಜವಾಬ್ದಾರಿ ಸ್ಥಾನಕ್ಕೆ ಅನುಭವಿಗಳ ಆಯ್ಕೆ : ತಂಡದ ಪ್ರಮುಖ ಜವಾಬ್ದಾರಿ ಸ್ಥಾನಗಳಿಗೆ ಅನನುಭವಿ ಆಟಗಾರರನ್ನು ನೇಮಿಸುವ ಅನಿವಾರ್ಯತೆ ಎದುರಾಗಿದೆ. ಆರಂಭಿಕ ಸ್ಥಾನ, ಕೆಳಕ್ರಮಾಂಕದ ಫಿನೀಶರ್, ಐದು ಹಾಗೂ ಆರನೇ ಬೌಲರ್, ಹೀಗೆ ಪ್ರತಿಯೊಂದಕ್ಕೂ ಅನನುಭವಿಗಳನ್ನ ನೇಮಿಸಬೇಕಾಗಿದೆ. ಅವರು ಉತ್ತಮ ಪ್ರದರ್ಶನ ನೀಡಿದರೇ, ತಂಡ ಗೆಲುವಿನ ಹಳಿಯುತ್ತ ಸಾಗಬಹುದು. ಇಲ್ಲವಾದರೇ ಮತ್ತದೇ ಹಳೇ ಕತೆ ಪುನರಾವರ್ತನೆ ಆಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.